ರಾಯಭಾಗ: ಗಡಿ ಪ್ರದೇಶದಲ್ಲಿ ನಡೆದ ಭಾರತ-ಚೀನಾ ಸಂಘರ್ಷದಲ್ಲಿ ಹುತಾತ್ಮರಾದ ದೇಶದ ವೀರಯೋಧರಿಗೆ ರಾಯಭಾಗ ಪಟ್ಟಣದ ಝೇಂಡಾ ಕಟ್ಟೆ ಹತ್ತಿರ ವಿವಿಧ ಸಂಘಟನೆಗಳಿಂದ ಹಾಗೂ ಪಟ್ಟಣದ ನಾಗರೀಕರಿಂದ ಪುಷ್ಪ ನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪುಷ್ಪ ನಮನ ಸಲ್ಲಿಸಿದ ಬಳಿಕ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ನೆರೆಯ ಚೀನಾ ರಾಷ್ಟ್ರ ನಮ್ಮ ದೇಶದ ವೀರಯೋಧರ ಮೇಲೆ ಮಾಡಿರುವ ಹಿನಕೃತ್ಯವನ್ನು ಖಂಡಿಸುತ್ತೇವೆ. ದೇಶದ ಸೈನಿಕರೊಂದಿಗೆ ಇಡೀ ಭಾರತ ದೇಶದ ನಾಗರಿಕರು ಬೆನ್ನೆಲುಬಾಗಿ ನಿಲ್ಲುತ್ತೇವೆ. ಕೇಂದ್ರ ಸರ್ಕಾರ ಚೀನಾ ದೇಶದಕ್ಕೆ ತಕ್ಕ ಪಾಠವನ್ನು ಕಲಿಸಬೇಕೆಂದು ರಾಯಭಾಗದ ಜನತೆ ಒತ್ತಾಯಿಸಿದರು.
ಚೀನಾ ದೇಶದ ಎಲ್ಲಾ ಉತ್ಪನ್ನಗಳ ಮೇಲೆ ನಿಷೇಧ ಹೇರಿ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ವೀರಯೋಧರ ಕುಟುಂಬಗಳಿಗೆ ಸರ್ಕಾರ ಎಲ್ಲಾ ಸಹಾಯವನ್ನು ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.