ETV Bharat / state

ಕೊರೊನಾದಿಂದ ಸಾರಿಗೆ ಇಲಾಖೆಗೆ ಭಾರೀ ನಷ್ಟ...ಸಚಿವ ಲಕ್ಷ್ಮಣ ಸವದಿ - Corona lock down

ಬೆಂಗಳೂರಿನಲ್ಲಿ ಮತ್ತೆ ಲಾಕ್​ಡೌನ್ ಆದೇಶ ನೀಡಿರುವುದರಿಂದ ಜನರು ಬೆಂಗಳೂರು ಬಿಟ್ಟು ಹೋಗುತ್ತಿದ್ದಾರೆ. ಕೊರೊನಾ ವೈರಸ್​​ ಕಾರಣದಿಂದ ಸಾರಿಗೆ ಇಲಾಖೆಗೆ ಇದುವರೆಗೂ 2752 ಕೋಟಿ ನಷ್ಟ ಸಂಭವಿಸಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

Transportation minister Laxman saudi
ಸಚಿವ ಲಕ್ಷ್ಮಣ ಸವದಿ
author img

By

Published : Jul 13, 2020, 10:16 PM IST

ಅಥಣಿ (ಬೆಳಗಾವಿ): ಕೊರೊನಾ ವೈರಸ್​​​​ನಿಂದ ಸಾರಿಗೆ ಇಲಾಖೆಗೆ ಇದುವರೆಗೂ ಸುಮಾರು 2752 ಕೋಟಿ ರೂಪಾಯಿಯಷ್ಟು ನಷ್ಟ ಸಂಭವಿಸಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾಹಿತಿ ನೀಡಿದ್ದಾರೆ.

ಸಾರಿಗೆ ಸಚಿವ ಲಕ್ಷ್ಮಣ ಸವದಿ

ಅಥಣಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಳವಾಗುತ್ತಿದ್ದು ಮತ್ತೆ ಲಾಕ್​​ಡೌನ್​ ಮಾಡುತ್ತಿರುವುದರಿಂದ ಬಹಳಷ್ಟು ಜನರು ಬೆಂಗಳೂರು ಬಿಟ್ಟು ಹೋಗುತ್ತಿದ್ದಾರೆ. ಈಗಾಗಲೇ ಸಾರಿಗೆ ಇಲಾಖೆಗೆ 2752 ಕೋಟಿ ನಷ್ಟ ಸಂಭವಿಸಿದೆ. ನಾಳೆಯಿಂದ ಬೆಂಗಳೂರಿನಿಂದ ಹೊರ ಹೋಗಲು ಹಾಗೂ ಒಳಬರಲು ಅನುಮತಿ ಇಲ್ಲ. ಅವಶ್ಯಕ ಸಾಮಗ್ರಿಗಳನ್ನು ಸಾಗಿಸಲು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಅವುಗಳನ್ನು ಹೊರತುಪಡಿಸಿ ಉಳಿದ ವಾಹನ ಸಂಚಾರ, ಜನಸಂಚಾರ ಸ್ತಬ್ಧಗೊಳ್ಳಲಿದೆ ಎಂದು ಹೇಳಿದರು.

ಅಲ್ಲದೆ ರೈತರು ಬೆಳೆದ ತರಕಾರಿ, ಇತರ ಉತ್ಪನ್ನಗಳು , ಹಾಲು ಹಾಗೂ ಔಷಧಿ ಸೇರಿದಂತೆ ಅವಶ್ಯಕ ಸಾಮಗ್ರಿಗಳ ಮಾರಾಟಕ್ಕೆ ಕೂಡಾ ಅನುಮತಿ ಕಲ್ಪಿಸಲಾಗಿದೆ. ಮಾನ್ಯ ಮುಖ್ಯಮಂತ್ರಿಗಳು ವಿಡಿಯೋ ಕಾನ್ಪರೆನ್ಸ್​​ ಮೂಲಕ ಜಿಲ್ಲಾಧಿಕಾರಿಗಳ ಸಭೆ ನಡೆಸಿದ್ದಾರೆ. ಕೊರೊನಾಪೀಡಿತ‌ ತಾಲೂಕು ಕೇಂದ್ರಗಳಲ್ಲಿ ಅಗತ್ಯ ಎನ್ನಿಸಿದ ಕಡೆ ಲಾಕ್​​​​ ಡೌನ್ ಮಾಡಲು ಅನುಮತಿ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.