ಬೆಳಗಾವಿ: ಸರ್ಕಾರದಿಂದ ಖಾಸಗಿ ವಾಹನಗಳ ಮೂಲಕ ಸಾರಿಗೆ ಸೇವೆ ಒದಗಿಸಲು ಸಿದ್ಧತೆ ಹಿನ್ನೆಲೆ, ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಎಲ್ಲ ಸರ್ಕಾರಿ ಬಸ್ಗಳನ್ನು ಡಿಪೋಗಳಿಗೆ ಶಿಫ್ಟ್ ಮಾಡಲಾಗುತ್ತಿದೆ.
ಸಾರಿಗೆ ಇಲಾಖೆ ಸಿಬ್ಬಂದಿಯೊಂದಿಗೆ ಸರ್ಕಾರ ನಡೆಸಿದ ಸಂಧಾನ ಸಕ್ಸಸ್ ಆಗದಿರುವ ಪರಿಣಾಮ ಖಾಸಗಿ ವಾಹನಗಳ ಮೂಲಕ ಸಾರ್ವಜನಿಕರಿಗೆ ತೊಂದರೆ ಆಗದಂತೆ ಸೇವೆ ಒದಗಿಸುವುದಾಗಿ ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದರು. ಇದರಿಂದ ಬೆಳಗಾವಿ ಬಸ್ ನಿಲ್ದಾಣದಲ್ಲಿ ನಿನ್ನೆಯಿಂದ ನಿಲ್ಲಿಸಲಾಗಿದ್ದ ಬಸ್ಗಳನ್ನು ಸಂಬಂಧಿಸಿದ ಘಟಕಗಳಿಗೆ ರವಾನಿಸಲಾಗುತ್ತಿದೆ.
ಈಗಾಗಲೇ ಅಂದಾಜು 700ಕ್ಕೂ ಹೆಚ್ಚಿನ ಬಸ್ಗಳನ್ನು ಸಂಬಂಧಿಸಿದ ಡಿಪೋಗಳಿಗೆ ಕಳುಹಿಸಿಕೊಡಲಾಗುತ್ತಿದೆ. ನಾಳೆಯಿಂದ ಖಾಸಗಿ ವಾಹನಗಳು ಕಾರ್ಯಾಚರಣೆಗೆ ಇಳಿಯುವ ಬಗ್ಗೆ ಕಾದು ನೋಡಬೇಕಿದೆ.