ETV Bharat / state

ಸ್ವಯಂಪ್ರೇರಿತವಾಗಿ ಹುಕ್ಕೇರಿ ಪಟ್ಟಣ ಲಾಕ್‌ಡೌನ್ ಮಾಡಲು ನಿರ್ಣಯ: ಡಾ. ದೊಡ್ಡಪ್ಪ ಹೂಗಾರ - hukkeri traders union

ಕೊರೊನಾ ಲಾಕ್​​ಡೌನ್​ಗೆ ಸಮ್ಮತಿ ಸೂಚಿಸಿರುವ ಚಿಕ್ಕೋಡಿಯ ವರ್ತಕರ ಸಂಘ, ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ತಗ್ಗಿಸಲು ಹುಕ್ಕೇರಿ ಪಟ್ಟಣವನ್ನು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿ ಲಾಕ್‌ಡೌನ್ ಮಾಡಲು ಮುಂದಾಗಿದೆ.

doddappa
doddappa
author img

By

Published : May 9, 2021, 9:17 PM IST

Updated : May 9, 2021, 10:04 PM IST

ಚಿಕ್ಕೋಡಿ: ಕಳೆದ ಎರಡ್ಮೂರು ದಿನಗಳಿಂದ ಹುಕ್ಕೇರಿ ತಾಲೂಕಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಎಲ್ಲ ವರ್ತಕರು ಸ್ವಯಂಪ್ರೇರಿತವಾಗಿ ಹುಕ್ಕೇರಿ ಪಟ್ಟಣವನ್ನು ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲು ಮುಂದಾಗಿದ್ದಾರೆ ಎಂದು ಹುಕ್ಕೇರಿ ತಹಶೀಲ್ದಾರ್​ ಡಾ. ದೊಡ್ಡಪ್ಪ ಹೂಗಾರ ತಿಳಿಸಿದರು.

ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಹೂಗಾರ, ಸರ್ಕಾರದ ಆದೇಶದಂತೆ ಟಫ್​ ರೂಲ್ಸ್ ಫಾಲೋ ಮಾಡಲು ತಾಲೂಕಿನ ಎಲ್ಲ ವರ್ತಕರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಎಲ್ಲ ವರ್ತಕರು ಸ್ವಯಂಪ್ರೇರಿತವಾಗಿ ಹುಕ್ಕೇರಿ ಪಟ್ಟಣ ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲು ಒಪ್ಪಿಗೆ ನೀಡಿದ್ದಾರೆ ಎಂದರು. ಇನ್ನು ನಾಳೆಯಿಂದ ಮೆಡಿಕಲ್ ಎಮರ್ಜೆನ್ಸಿ ಹೊರತುಪಡಿಸಿ ಯಾರೂ ಹೊರಗಡೆ ಬರಬೇಡಿ. ನಾಲ್ಕೈದು ದಿನ ಈ ಕೊರೊನಾ ಚೈನ್ ಕಟ್ ಮಾಡಲು ದಯಮಾಡಿ ಎಲ್ಲರೂ ಮನೆಯಲ್ಲಿ ಇರಿ. ಹುಕ್ಕೇರಿ ಪಟ್ಟಣದಲ್ಲಿ ಮುಂದಿನ ಹತ್ತು ದಿನಗಳಲ್ಲಿ ತರಕಾರಿ ಹಾಗೂ ಹಾಲು ಉತ್ಪನ್ನಗಳು ಮಾತ್ರ ದೊರೆಯುತ್ತವೆ ಎಂದು ತಿಳಿಸಿದರು.

ಸ್ವಯಂಪ್ರೇರಿತವಾಗಿ ಹುಕ್ಕೇರಿ ಪಟ್ಟಣ ಲಾಕ್‌ಡೌನ್ ಮಾಡಲು ನಿರ್ಣಯ: ಡಾ. ದೊಡ್ಡಪ್ಪ ಹೂಗಾರ

ಇನ್ನು ಹುಕ್ಕೇರಿ ಹಾಗೂ ಸಂಕೇಶ್ವರದಲ್ಲಿ ಕೋವಿಡ್​ ಹಾಗೂ ನಾನ್ ಕೋವಿಡ್​ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಹನ್ನೆರಡು ಬೆಡ್‌ಗಳು ಖಾಲಿ ಇವೆ. ಒಂದು ವೇಳೆ ಇನ್ನೂ ಹೆಚ್ಚಿಗೆ ಬೇಕಾದರೆ ಸಂಕೇಶ್ವರ ಹಾಗೂ ಹುಕ್ಕೇರಿ ಸರ್ಕಾರಿ ಆಸ್ಪತ್ರೆಯನ್ನು‌ ಸಂಪೂರ್ಣವಾಗಿ ಕೋವಿಡ್ ಆಸ್ಪತ್ರೆ​ ಮಾಡಿದರೆ ಹುಕ್ಕೇರಿ ತಾಲೂಕಿನಲ್ಲಿ 90 ಬೆಡ್‌ಗಳು ಸಿಗುತ್ತವೆ ಎಂದು ಹೇಳಿದರು. ನಾನ್ ಕೊವೀಡ್ ರೋಗಿಗಳನ್ನು ಅಮ್ಮಣಗಿ ಆಸ್ಪತ್ರೆಗೆ ಶಿಫ್ಟ್​ ಮಾಡುತ್ತೇವೆ ಎಂದು ಇದೇ ವೇಳೆ ತಿಳಿಸಿದ್ರು.

Last Updated : May 9, 2021, 10:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.