ಬೆಳಗಾವಿ: ಖಾನಾಪುರ ರಸ್ತೆಯ ಅಪಾರ್ಟ್ಮೆಂಟ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಯನ್ನು ಬಂಧಿಸಿರುವ ಟಿಳಕವಾಡಿ ಪೊಲೀಸರು ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.
ಚೆನ್ನಮ್ಮ ನಗರದ ನಿವಾಸಿ ದೀಪಾ ಪಾಶ್ಚಾಪುರ ಬಂಧಿತ ಮಹಿಳೆ. ಈಕೆ ಖಾನಾಪುರ ರಸ್ತೆಯ ಅಪಾರ್ಟ್ಮೆಂಟ್ ವೊಂದರಲ್ಲಿ ವಾಸವಿದ್ದು, ಅಮಾಯಕ ಮಹಿಳೆಯರನ್ನು ಸೆಳೆದು ವೇಶ್ಯಾವಾಟಿಕೆಗೆ ದೂಡುತ್ತಿದ್ದಳು ಎನ್ನಲಾಗಿದೆ.
ಖಚಿತ ಮಾಹಿತಿ ಮೇರೆಗೆ ಟಿಳಕವಾಡಿ ಠಾಣೆಯ ಪಿಐ ವಿನಾಯಕ ಬಡಿಗೇರ ನೇತೃತ್ವದ ತಂಡ ದಾಳಿ ನಡೆಸಿ ದೀಪಾಳನ್ನು ಬಂಧಿಸಿದ್ದು, ಜೊತೆಗೆ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.
ಈ ಕುರಿತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.