ಬೆಳಗಾವಿ: ಕುಂದಾನಗರಿಯ ಎರಡು ವರ್ಷ ಬಾಲಕಿಯ ಜ್ಞಾಪಕ ಶಕ್ತಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗರಿ ಸಿಕ್ಕಿದೆ. 48 ತಿಂಗಳ ಈ ಪೋರಿ ತನ್ನ ತೊದಲು ನುಡಿಯಲ್ಲೇ ಹೇಳಿದನ್ನೆಲ್ಲಾ ಜ್ಞಾಪಕ ಇಟ್ಟುಕೊಂಡು ಪಟ ಪಟ ಅಂತ ನುಡಿಯುತ್ತಾಳೆ. ಚಿಕ್ಕ ಮಕ್ಕಳಿಗೆ ಹಠ ಮಾಡಬಾರದು ಎಂದು ಈಗಿನ ಕಾಲದಲಲ್ಲಿ ತಂದೆ ತಾಯಂದಿರು ಮೊಬೈಲ್ನಲ್ಲಿ ಮಕ್ಕಳ ಹಾಡುಗಳನ್ನು ಹಾಕಿಕೊಡುತ್ತಾರೆ. ಈ ರೀತಿ ಹಾಕಿ ಕೊಟ್ಟ ಹಾಡನ್ನೇ ನೆನಪಿನಲ್ಲಿ ಇಟ್ಟುಕೊಂಡು ಪುನಃ ಸ್ಫುರಿಸುವ ಬಾಲೆ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾಳೆ.
ಕುಂದಾನಗರಿ ಎಂದೇ ಕರೆಯಲಾಗುವ ಬೆಳಗಾವಿಯ ಮೂರು ವರ್ಷ ಎರಡು ತಿಂಗಳ ವಯಸ್ಸಿನ ಬಾಲಕಿ ಅನನ್ಯಾ ಆನಂದ ಕಬ್ಬಿನ ಇಂಡಿಯಾ ಬುಕ್ ಆಫ್ ರೆಕಾರ್ಡನಲ್ಲಿ ಸೇರಿ ಅತಿ ಚಿಕ್ಕ ವಯಸ್ಸಿನಲ್ಲೇ ಸಾಧನೆ ಮಾಡಿ ಕಿರೀಟನ್ನು ಮುಡಿಗೇರಿಸಿಕೊಂಡಿದ್ದಾಳೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದ ಆನಂದ ಮತ್ತು ಕಲ್ಯಾಣಿ ದಂಪತಿ ಮಗಳಾದ ಅನನ್ಯಾ ಕಬ್ಬಿನ ಚಿಕ್ಕ ವಯಸ್ಸಿನಲ್ಲಿಯೇ ಬುದ್ಧಿ ಶಕ್ತಿ ಮತ್ತು ಅಪಾರ ನೆನಪಿನ ಶಕ್ತಿ ಹೊಂದಿದ್ದಾಳೆ. ಇಂಗ್ಲಿಷ್ನಲ್ಲಿ ಪ್ರಾಸ ಪದಗಳು, ವಾರದ ದಿನಗಳು ಹಾಗೂ ತಿಂಗಳುಗಳು, ಮಗ್ಗಿ, ಸಂಸ್ಕೃತ ಶ್ಲೋಕ ಹೀಗೆ ತನ್ನ ಸ್ಮೃತಿ ಪಟಲದಲ್ಲಿ ಎಲ್ಲವನ್ನೂ ಇಟ್ಟುಕೊಂಡಿದ್ದಾಳೆ.
ಸಂಸ್ಕೃತ ಸ್ತೋತ್ರಗಳನ್ನು ಪಠಿಸುವುದು, ವರ್ಣಮಾಲೆಯ ಅಕ್ಷರಗಳನ್ನು ನೆನಪಿಸಿಕೊಳ್ಳುವುದು ಅದರ ಅನುವಾದವನ್ನು ಪದಗಳೊಂದಿಗೆ ಹೇಳುವುದು. ಇಂಗ್ಲಿಷ್ನಲ್ಲಿ 1 ರಿಂದ 50 ವರೆಗಿನ ಸಂಖ್ಯೆಗಳನ್ನು, ಹಿಂದಿ ಹಾಗೂ ಕನ್ನಡದಲ್ಲಿ 1 ರಿಂದ 10 ವರೆಗೆ ಸಂಖ್ಯೆಗಳನ್ನು ಪಟಪಟನೆ ಹೇಳುತ್ತಾಳೆ. ಇಂಗ್ಲಿಷ್ ನಲ್ಲಿ ಕ್ರಿಯಾ ಪದಗಳನ್ನು ಹೇಳುವುದರ ಜೊತೆಗೆ ಅವುಗಳ ಅನುಕರಣೆ ಮಾಡುವುದು. ಇಂಗ್ಲಿಷ್ನಲ್ಲಿ ದೇಹದ ಭಾಗಗಳನ್ನು ಹೇಳುವುದರ ಜೊತೆಗೆ ಅವುಗಳನ್ನು ಗುರುತಿಸುತ್ತಾಳೆ. ಅನನ್ಯಾ ಕಬ್ಬಿನ ಬುದ್ಧಿಶಕ್ತಿ ಮತ್ತು ನೆನಪಿನ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದಿದ್ದಾಳೆ. ಚಿಕ್ಕ ವಯಸ್ಸಿನ ಮಕ್ಕಳ ಬುದ್ಧಿ ಶಕ್ತಿ ಗಮನಿಸಿ ಈ ಸಂಸ್ಥೆ ಪ್ರಶಸ್ತಿ ನೀಡಿದೆ.
ಪೋಷಕರಿಗೆ ಕೀರ್ತಿ ತಂದ ಪೋರಿ.. ವೇಳೆ ಅನನ್ಯಾ ತಾಯಿ ಕಲ್ಯಾಣಿ ಮಾತನಾಡಿ, ನಾವು ಅನನ್ಯಾ ಚಿಕ್ಕವಳು ಇದ್ದಾಗ ಮೋಬೈಲ್ನಲ್ಲಿ ಚಿಕ್ಕ ಮಕ್ಕಳ ಪಾಠವನ್ನು ಹಾಕಿ ಕೊಡುತ್ತಿದ್ದವು. ಅದನ್ನು ಗಮನಿಸಿ ನಂತರ ಅದನ್ನೇ ನೆನಪಿನಲ್ಲಿಟ್ಟುಕೊಂಡು ಹೇಳುತ್ತಿದ್ದಳು. ಇದನ್ನು ಗಮನಿಸಿ ನಾವು ಬುಕ್ ಆಫ್ ರೆಕಾರ್ಡ್ ಸಂಸ್ಥೆಗೆ ಆನ್ ಲೈನ್ನಲ್ಲಿ ಅರ್ಜಿ ಸಲ್ಲಿಸಿದ್ದೆವು. ನಂತರ ಅನನ್ಯಗೆ ಈ ಪ್ರಶಸ್ತಿ ಬಂದಿದೆ. ಅವಳಿಂದ ನಮಗೆ ಹೆಸರು ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮಗಳ ಬುದ್ಧಿಶಕ್ತಿ ಬಗ್ಗೆ ಹೆಮ್ಮೆ ತಂದೆ ಆನಂದ್ ಮಾತನಾಡಿ, ಅವಳಿಗೆ ಸಣ್ಣ ಇರುವಾಗಲೇ ಜ್ಞಾಪಕ ಶಕ್ತಿ ಇರುವುದು ತಿಳಿದು ಆನ್ಲೈನ್ನಲ್ಲಿ ಫಾರಂ ಭರ್ತಿ ಮಾಡಿದ್ದೆವು. ಅವಳ ನೆನಪಿನ ಶಕ್ತಿಯ ಸಂಬಂಧ ವಿಡಿಯೋ ಅಪ್ ಲೋಡ್ ಮಾಡುವಂತೆ ಇ ಮೇಲ್ ಬಂದಿತ್ತು. ಅದರಂತೆ ವಿಡಿಯೋ ಒಂದನ್ನು ಹಾಕಿದ್ದೆವು. ವಿಡಿಯೋವನ್ನು ಪರೀಕ್ಷಿಸಿದ ನಂತರ ನಮಗೆ ಈ ಅವಾರ್ಡ್ ಕಳಿಸಿಕೊಟ್ಟಿದ್ದಾರೆ. ಊರಿನ ತುಂಬಾ ಮಗಳ ಬಗ್ಗೆ ಜನ ಮಾತನಾಡುತ್ತಿರುವುದನ್ನು ಕೇಳುವುದಕ್ಕೆ ತುಂಬಾ ಸಂತೋಷ ಮತ್ತು ಹೆಮ್ಮೆ ಆಗುತ್ತಿದೆ ಎಂದರು.
ಇದನ್ನೂ ಓದಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಹುಬ್ಬಳ್ಳಿ ಪೋರಿಯ ಜ್ಞಾಪಕ ಶಕ್ತಿ!