ETV Bharat / state

ಬೆಲೆ ಏರಿಕೆ ಕಾಂಗ್ರೆಸ್‌ ಕಾಲದಲ್ಲಿ, ಇಂದಿರಾ ಗಾಂಧಿ ಕಾಲದಲ್ಲೂ ಇತ್ತು.. ಸಚಿವ ಜಗದೀಶ್‌ ಶೆಟ್ಟರ್ - Jagadish Shetter lastest news

ಇದೆಲ್ಲಾ ತಾತ್ಕಾಲಿಕವಾಗಿದೆ. ಬೆಲೆ ಏರಿಕೆ ಸಮಸ್ಯೆಯನ್ನು ಮೋದಿ ಸರ್ಕಾರ ಸಮರ್ಥವಾಗಿ ನಿರ್ವಹಿಸಲಿದೆ. 6 ವರ್ಷದ ಹಿಂದೆ ಹೇಳಿದ್ದ ಕಾಂಗ್ರೆಸ್ ಮುಕ್ತ ಭಾರತ ಸಾಕಾರಗೊಳ್ಳುವ ಕಾಲ ಬಂದಿದೆ. ಅಸ್ತಿತ್ವ ಕಳೆದುಕೊಂಡಿರುವ ಕಾಂಗ್ರೆಸ್ ಈ ಬಾರಿ ಇನ್ನಷ್ಟು ಪಾತಾಳ ತಲುಪಲಿದೆ..

ಬೆಳಗಾವಿ ಉಪಚುನಾವಣೆ ಉಸ್ತುವಾರಿ ಜಗದೀಶ ಶೆಟ್ಟರ್

author img

By

Published : Mar 31, 2021, 8:36 PM IST

ಬೆಳಗಾವಿ : ಪ್ರಸ್ತುತ ಕಾಂಗ್ರೆಸ್ ಪಾರ್ಟಿ ದೇಶದಲ್ಲಿ ಅವಸಾನದ ಅಂಚಿಗೆ ತಲುಪಿದೆ. ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಪರಿಸ್ಥಿತಿಯನ್ನೇ ಕಳೆದುಕೊಳ್ಳುತ್ತಿದೆ ಎಂದು ಬೆಳಗಾವಿ ಉಪಚುನಾವಣೆ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.

ಕಾಂಗ್ರೆಸ್‌ ವಿರುದ್ಧ ಬೆಳಗಾವಿ ಉಪಚುನಾವಣೆ ಉಸ್ತುವಾರಿ ಜಗದೀಶ್ ಶೆಟ್ಟರ್ ಕಿಡಿ..

ಇಲ್ಲಿನ ಸದಾಶಿವ ನಗರದಲ್ಲಿನ ಲಕ್ಷ್ಮಿ ಕಾಂಪ್ಲೆಕ್ಸ್​ನಲ್ಲಿ ಬಿಜೆಪಿಯ ನೂತನ ಕಚೇರಿ ಉದ್ಘಾಟಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದೆಲ್ಲೆಡೆ ಕಾಂಗ್ರೆಸ್ ಪಾರ್ಟಿ ಅವಸಾನಕ್ಕೆ ತಲುಪಿದೆ. ಕೆಲ ರಾಜ್ಯಗಳಲ್ಲಿ 3ರಿಂದ 4ನೇ ಸ್ಥಾನಕ್ಕೆ ಹೋಗಿದೆ‌.

ಕರ್ನಾಟಕದಲ್ಲಿ ಮಾತ್ರ ಸ್ವಲ್ಪಮಟ್ಟಿಗೆ ಜೀವ ಉಳಿಸಿಕೊಂಡಿದೆ. ಈಗಿರುವ ಮೂರು ಉಪಚುನಾವಣೆ ಗೆಲ್ಲುವ ಮೂಲಕ ಕಾಂಗ್ರೆಸ್ ಸರ್ವನಾಶ ಆಗಲಿದೆ. ಅದಕ್ಕೆ ಈ ಉಪಚುನಾವಣೆಯೇ ದಿಕ್ಸೂಚಿ ಎಂದು ಭವಿಷ್ಯ ನುಡಿದರು.

ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಬೆಲೆ ಏರಿಕೆ ಕಾಂಗ್ರೆಸ್ ಕಾಲದಲ್ಲಿ, ಇಂದಿರಾಗಾಂಧಿ ಕಾಲದಲ್ಲೂ ಇತ್ತು. ಇದೆಲ್ಲಾ ತಾತ್ಕಾಲಿಕವಾಗಿದೆ. ಬೆಲೆ ಏರಿಕೆ ಸಮಸ್ಯೆಯನ್ನು ಮೋದಿ ಸರ್ಕಾರ ಸಮರ್ಥವಾಗಿ ನಿರ್ವಹಿಸಲಿದೆ. 6 ವರ್ಷದ ಹಿಂದೆ ಹೇಳಿದ್ದ ಕಾಂಗ್ರೆಸ್ ಮುಕ್ತ ಭಾರತ ಸಾಕಾರಗೊಳ್ಳುವ ಕಾಲ ಬಂದಿದೆ. ಅಸ್ತಿತ್ವ ಕಳೆದುಕೊಂಡಿರುವ ಕಾಂಗ್ರೆಸ್ ಈ ಬಾರಿ ಇನ್ನಷ್ಟು ಪಾತಾಳ ತಲುಪಲಿದೆ ಎಂದರು.

ಓದಿ:ದಿ.ಸುರೇಶ ಅಂಗಡಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ನಮ್ಮ ಪಕ್ಷಕ್ಕೆ ಬಲ : ಸಚಿವ ಜಗದೀಶ್​ ಶೆಟ್ಟರ್

ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರದ ಸಾಧನೆಗಳು ಮತದಾರರನ್ನು ತಲುಪಿವೆ. ದಿ.ಸುರೇಶ ಅಂಗಡಿ ಅವರು ರೈಲ್ವೆ ಸಚಿವರಾಗಿ ಕರ್ನಾಟಕಕ್ಕೆ ನೀಡಿದ ಕೊಡುಗೆ ದೊಡ್ಡದು. ಇವೆಲ್ಲ ಚುನಾವಣೆಯಲ್ಲಿ ನಮ್ಮ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.