ETV Bharat / state

ಬೆಂಗಳೂರಲ್ಲಿ ಬೆಂಕಿ ಹಚ್ಚಿದವರು ದೇಶದ್ರೋಹಿಗಳು: ಸುರೇಶ್​​ ಅಂಗಡಿ ಗರಂ - Three people were killed

ಅವಹೇಳನಕಾರಿ ಪೋಸ್ಟ್​​​​ಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಪೊಲೀಸ್ ಠಾಣೆಗಳಿಗೆ, ಆಸ್ಪತ್ರೆಗೆ ಬೆಂಕಿ ಹಚ್ಚಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸಚಿವ ಸುರೇಶ ಅಂಗಡಿ ಒತ್ತಾಯಿಸಿದ್ದಾರೆ.

Minister Suresh angadi
ಸಚಿವ ಸುರೇಶ ಅಂಗಡಿ
author img

By

Published : Aug 12, 2020, 1:44 PM IST

Updated : Aug 12, 2020, 5:45 PM IST

ಬೆಳಗಾವಿ: ರಾಜಧಾನಿ ಬೆಂಗಳೂರಿನ ಕೆ.ಜಿ. ಹಳ್ಳಿ, ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗೆ ನುಗ್ಗಿ ಬೆಂಕಿ ಹಚ್ಚಿದವರು ದೇಶದ್ರೋಹಿಗಳು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ‌ ಸಚಿವ ಸುರೇಶ್​​ ಅಂಗಡಿ ಆಕ್ರೋಶ ವ್ಯಕ್ತಪಡಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ನಡೆದ ಘಟನೆ ಅತ್ಯಂತ ಖಂಡನೀಯ. ಇಂದು ಇಡೀ ಜಗತ್ತು ಭಾರತದತ್ತ ಮುಖ ಮಾಡಿ ನೋಡುತ್ತಿದೆ. ದೇಶದಲ್ಲಿ ಕೊರೊನಾ ಮಹಾಮಾರಿ ಇದ್ದು, ಶಾಂತಿ ಕಾಪಾಡಬೇಕು. ದೇಶದ ಆರ್ಥಿಕತೆ ಸುಧಾರಿಸಲು ಪ್ರಧಾನಿ ಮೋದಿ ಕೆಲಸ ಮಾಡುವ ವೇಳೆ ಕೆಲ ದೇಶದ್ರೋಹಿಗಳು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ‌ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕಾನೂನು ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕೆಲವರು ನಡೆಸಿರುವ ವ್ಯವಸ್ಥಿತ ಷಡ್ಯಂತ್ರ ಇದು ಎಂದು ಆರೋಪಿಸಿದರು.

ಸಚಿವ ಸುರೇಶ ಅಂಗಡಿ

ಪೊಲೀಸ್ ಠಾಣೆ, ಆಸ್ಪತ್ರೆಗೆ ಬೆಂಕಿ ಹಚ್ಚಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವಾರಿಯರ್ ರೀತಿ ಕೆಲಸ ಮಾಡುವ ಮಾಧ್ಯಮಗಳ ಮೇಲೆ ಹಲ್ಲೆ ಮಾಡಿರುವುದು ಖೇದಕರ ಮತ್ತು, ಖಂಡನೀಯ ಎಂದು ಸಚಿವ ಸುರೇಶ್​ ಅಂಗಡಿ ಹೇಳಿದ್ರು.

Last Updated : Aug 12, 2020, 5:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.