ETV Bharat / state

ಹುಟ್ಟುತ್ತಲೇ ಕೈಗಳಿಲ್ಲ!ತಂದೆ ವಿಧಿ ಪಾಲು! ಪುಟ್ಟ ಪೋರನ ಛಲಬಲಕೆ ಸಾಟಿ ಏನು?

ಕಿರಣ್ ಕ್ಯಾಮನಕೂಲ ಎಂಬ ಯುವಕ ಹುಟ್ಟುತ್ತಲೇ ತನ್ನೆರಡೂ ಕೈಗಳನ್ನು ಕಳೆದುಕೊಂಡಿದ್ದ. ಇಷ್ಟು ಮಾತ್ರಸ ಸಾಲದ್ದಕ್ಕೆ ವಿಧಿ ತನಗಾಸರೆಯಾಗಿದ್ದ ತಂದೆಯನ್ನೂ ಬಲಿ ಪಡೆದುಕೊಂಡಿತು. ತಾಯಿಯ ಆಶ್ರಯದಲ್ಲಿ ಬೆಳೆಯುವ ಹುಡುಗ ಹೊರೆಯಾಗಿ ಬದುಕಿಲ್ಲ.

author img

By

Published : Jun 9, 2019, 8:31 PM IST

ಬಪ್ಪರೇ ಬಾಲಕ, ಕಿರಣ್ ಕ್ಯಾಮನಕೂಲ

ಬೆಳಗಾವಿ : ಭಗವಂತ ಕೆಲವರಿಗೆ ಸಕಲ ಐಶ್ವರ್ಯಗಳನ್ನೂ ಕೊಟ್ಟಿರುತ್ತಾನೆ. ಅದ್ರೂ, ಕೆಲವೊಮ್ಮೆ ಅಯ್ಯೋ ಭಗವಂತ, ನಮ್ಮಗ್ಯಾಕೆ ಈ ಕಷ್ಟ ಅಂತ ಮೊರೆಯಿಡುತ್ತಾರೆ. ದೈಹಿಕ ಸಾಮರ್ಥ್ಯ ಇದ್ರೂ ಭಿಕ್ಷೆ ಬೇಡಿ ತಿನ್ನುವ ಜನರು ಸಮಾಜದಲ್ಲಿದ್ದಾರೆ! ಇಂಥವರ ಮಧ್ಯೆ ಈ ಕಲಿರಯ್ಯನ ಕಥೆ ಕೇಳಿ!

ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹನಮನಹಟ್ಟಿ ಕಿರಣ್ ಕ್ಯಾಮನಕೂಲ ಎಂಬ ಯುವಕ ಹುಟ್ಟುತ್ತಲೇ ತನ್ನೆರಡೂ ಕೈಗಳನ್ನೂ ಕಳೆದುಕೊಂಡಿದ್ದಾನೆ. ಅಷ್ಟು ಮಾತ್ರ ಸಾಲದೆಂಬಂತೆ, ವಿಧಿ ತಂದೆಯನ್ನೂ ಬಲಿ ಪಡೆದುಕೊಂಡಿತು. ತಾಯಿ ಆಶ್ರಯದಲ್ಲಿ ಬೆಳೆಯುತ್ತಿರುವ ಈ ಬಾಲಕ ಕೈಗಳಿಲ್ಲ, ತಂದೆಯಿಲ್ಲ ಅಂತ ಕೈ ಕಟ್ಟಿ ಕುಳಿತಿಲ್ಲ! ಯಾರಿಗೂ ಹೊರೆಯಾಗಿಲ್ಲ ಅನ್ನೋದೇ ವಿಶೇಷ.

ಈ ಬಾಲಕನ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನೆ ಸೃಷ್ಟಿ ಮಾಡಿತ್ತು.ಈ ಬಾಲಕ ಶಾಲೆಯಲ್ಲಿ ಬಿಸಿಯೂಟ ಸೇವಿಸುತ್ತಿರುವ ದೃಶ್ಯವೊಂದನ್ನ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಕೈಗಳಿಲ್ಲದ ಬಾಲಕ ಚಮಚ ಹಿಡಿದು ಆಹಾರ ತಿನ್ನುತ್ತಿದ್ದ ದೃಶ್ಯ ಮನಕಲುಕುವಂತಿತ್ತು. ಬಾಲಕನ ಛಲಬಲಕ್ಕೆ ಇಂಟರ್ನೆಟ್‌ನಲ್ಲಿ ಪ್ರಶಂಸೆಯ ಸುರಿಮಳೆ ಬಂದಿತ್ತು.

ಕೈಗಳಿಲ್ಲ ಎಂದು ಕೈ ಕಟ್ಟಿ ಕುಳಿತರೆ? ಈ ಬಾಲಕನ ಛಲಬಲಕ್ಕೆ ಸಾಟಿ ಏನು?

ಹನಮನಹಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ ಕಿರಣ್ ಬಡತವನದ ಬೇಗೆಯನ್ನು ಕಂಡುಂಡವ. ಈತನಿಗೆ ಒಂದು ದಿನವೂ ನಾನು ದಿವ್ಯಾಂಗ ಎಂಬ ಯೋಚನೆ ಬಂದಿಲ್ಲವಂತೆ. ಬೆಳಿಗ್ಗೆ ಎದ್ದು ಸ್ವತಃ ನಿತ್ಯ ಕರ್ಮಾದಿಗಳನ್ನು ಮುಗಿಸಿ ಅಮ್ಮನಿಗೆ ಮನೆಗೆಲಸದಲ್ಲಿ ನೆರವಾಗುತ್ತಾನೆ. ಮನೆ ಕಸ ಗುಡಿಸುವುದು, ಕಟ್ಟಿಗೆ ತರುವುದು, ದನಕರುಗಳನ್ನ ಮೇಯಿಸುವುದು ಇತನ ದಿನನಿತ್ಯದ ಕಾಯಕ.

ವಿದ್ಯಾಭ್ಯಾಸದಲ್ಲೂ ಎಲ್ಲರಿಗಿಂತಲೂ ಒಂದು ಕೈ ಮುಂದೆ. ಕೈಗಳಿಲ್ಲದಿದ್ದರೂ ಕಾಲುಗಳಿಂದ ಬರೆಯುವ ಮುದ್ದಾದ ಅಕ್ಷರಗಳನ್ನು ನೋಡಿದ್ರೆ ಸಾಮಾನ್ಯರು ಅಚ್ಚರಿ ಪಡಬೇಕು. ಕಿರಣ ಅಂದ್ರೆ, ಊರಿನ ಜನರಿಗೆ ಬಲು ಅಚ್ಚುಮೆಚ್ಚು. ವಾಸಿಸಲು ಮುರುಕಲು ಮನೆ. ಕೂಲಿ ಕೆಲಸ ಮಾಡುವ ತಾಯಿ, ಜೊತೆಗೆ ಪುಟ್ಟ ತಮ್ಮ, ಮನೆಗೆ ಹಿರಿಯ ಮಗನಾಗಿ ಯಾರಿಗೂ ಹೊರೆಯಾಗದೆ ಜೀವನ ಸಾಗಿಸುತ್ತಿದ್ದಾನೆ ಈ ಪೋರ.

ದಿವ್ಯಾಂಗನಾಗಿದ್ದರೂ ಬದುಕಿ ಸಾಧಿಸುವ ಛಲವಿರುವ ಕಿರಣ್ ಕುಟುಂಬಕ್ಕೆ ಸಹಾಯಹಸ್ತದ ಅವಶ್ಯಕತೆ ತುಂಬಾ ಇದೆ.

ಕೈಗಳಿಲ್ಲದೆ ಬದುಕು ನಡೆಸುತ್ತಿರುವ ಬಾಲಕ ವೈರಲ್ ಆಯ್ತು ಮನಕಲಕುವ ವಿಡಿಯೋ ಬೆಳಗಾವಿ : ಕೆಲ ಮಕ್ಕಳಿಗೆ ದೇವರು ಎಲ್ಲ ಅಂಗಾಂಗಗಳನ್ನ ಕೊಟ್ಟಿದ್ದರು, ಆ ಮಕ್ಕಳಿಗೆ ಸೂಕ್ತವಾಗಿ ಬಳಕೆ ಮಾಡಿಕ್ಕೊಳ್ಳುವುದು ಗೊತ್ತಿಲ್ಲ, ಆದರೆ ಇಲ್ಲೊಬ್ಬ ಬಾಲಕ ಹುಟ್ಟಿನಿಂದಲೇ ಎರಡೂ ಕೈಗಳನ್ನು ಕಳೆದುಕೊಂಡ ಕಷ್ಟಪಡುತ್ತಿದ್ದರೂ ಸಹ ಎಲ್ಲರಂತೆ ಕೆಲಸ ಮಾಡುತ್ತಾ ಶಾಲೆಯಲ್ಲಿ ಬರೆದು, ಓದಿ, ಬಿಸಿ ಊಟವನ್ನು ತಾನೆ ಸ್ವತಹ: ತನ್ನ ಕೈ ಗಳಿಂದ ತಿನ್ನುತ್ತಾನೆಂದರೆ ಎಲ್ಲರೂ ಅಚ್ಚರಿ ಮೂಡಿಸುವಂತ ಮಾತಾಗಿದೆ, ಆದರೆ ಈ ಐದನೆಯ ತರಗತಿ ಓದುತ್ತಿರುವ ಬಾಲಕ ಇಡಿ ಅಂಗವಿಕಲಚೇತನರಿಗೆ ಮಾದರಿ ಯಾಗಿದ್ದಾನೆ...ಈ ಕುರಿತು ಒಂದು ವರದಿ. ಸಾಮಾನ್ಯವಾಗಿ ಇತ್ತಿಚಿನ ದಿನಗಳಲ್ಲಿ ಎಲ್ಲ ಅಂಗಾಂಗಗಳು ಸರಿ ಇದ್ರೆ ಅವುಗಳನ್ನ ಎದೆದಕೋ ಬಳಕೆ ಮಾಡಿಕ್ಕೊಳ್ಳುತ್ತಾರೆ, ಆದರೆ ಇಲ್ಲೊಬ್ಬ ಬಾಲಕ ಇಡಿ ಅಂಗವಿಕಲಚೇತನರಿಗೆ ಮಾದರಿಯಾಗಿದ್ದಾರೆ, ಹೌದು ಬೆಳಗಾವಿ ಜಿಲ್ಲೆಯ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹನಮನಹಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇಯ ತಗರತಿಯನ್ನ ಓದುತ್ತಿದ್ದಾನೆ ಈ ಪೋರ ಬಾಲಕ, ಇತ ತಂದೆಯನ್ನ ಕಳೆದುಕ್ಕೊಂಡಿದ್ದಾನೆ, ಹಾಗಾದರೆ ಈ ಬಾಲಕನ ಹೆಸರು, ಕಿರಣ ಕ್ಯಾಮನಕೂಲ ಅಂತ ಇತ ಚಿಕ್ಕವನಿದ್ದಾಗ ತನ್ನ ಎರಡು ಕೈಗಳನ್ನ ಕಳೆದುಕ್ಕೊಂಡಿದ್ದಾನೆ, ಜೊತೆಗೆ ತಂದೆಯನ್ನ ಕಳೆದುಕ್ಕೊಂಡಿರುವ ಬಾಲಕ, ಆದರೆ ಇತ ನಾನೇನೂ ಯಾರಿಗೂ ಕಡಿಮೆ ಇಲ್ಲ ಎಂದು ತನ್ನ ಎಲ್ಲ ಕೆಲಸ ಕಾರ್ಯಗಳನ್ನ ತಾನೆ ಮಾಡಿಕ್ಕೊಳ್ಳುತ್ತಾನೆ, ಯಾರಿಗೂ ಬೇಸರವಾಗದಂತೆ ಇನ್ನೊಬ್ಬರಿಂದ ಯಾವುದೆ ಕೆಲಸ ಮಾಡಿಸಿಕ್ಕೊಳ್ಳುವುದಿಲ್ಲ, ಇತ ಪ್ರತಿನಿತ್ಯ ದೈನಂದಿನ ಕೆಲಸಗಳ ಜೊತೆಗೆ ಶಾಲೆಯಲ್ಲಿ ಯಾರ ಸಹಾಯವಿಲ್ಲದೆ ಇತ ತಾನೆ ಸ್ಪೂನ್ ಸಹಾಯದಿಂದ ಊಟ ಮಾಡುತ್ತಾನೆ, ಜೊತೆ ಮನೆಯಲ್ಲಿಯೂ ತಾನೆ ಎಲ್ಲ ಕೆಲಸವನ್ನ ಮಾಡುತ್ತಾ ಬಂದಿದ್ದಾನೆ ಈ ಬಾಲಕನ ಊರು ಹುಕ್ಕೇರಿ ತಾಲೂಕಿನ ಇಸ್ಲಾಂಪೂರ ಆದರೆ, ಬಾಲ್ಯದಲ್ಲಿ ತನ್ನ ತಂದೆಯನ್ನು ಕಳೆದುಕೊಂಡ ಕಾರಣ ತನ್ನ ತಾಯಿಯ ತವರೂರಾದ ಬೈಲಹೊಂಗಲ ತಾಲೂಕಿನ ಹಣಮನಹಟ್ಟಿ ಗ್ರಾಮದಲ್ಲಿ ವಾಸಿಸುತ್ತಿದ್ದಾನೆ. ಶಾಲೆಯಲ್ಲಿ ಎಲ್ಲದರಲ್ಲೂ ಮುಂದು- ಈ ಬಾಲಕ ಅಂಗವಿಕಲನಾದರೂ ಸಹ ಶಾಲೆಯಲ್ಲಿ ಓದಿನಲ್ಲಿ ಬುದ್ದಿವಂತನಾಗಿದ್ದಾನೆ. ಅಲ್ಲದೆ ಅವನಿಗೆ ಕೈಗಳಿಲ್ಲದಿರುವದರಿಂದ ಕಾಲಿನಿಂದ ಮುದ್ದಾದ ಅಕ್ಷರಗಳನ್ನು ಬರೆದು ಅಚ್ಚರಿ ಮೂಡಿಸುತ್ತಾನೆ. ದಿನಂಪ್ರತಿ ಶಾಲೆಯಲ್ಲಿ ಬಿಸಿಊಟ ಬರುತ್ತಿದ್ದು, ಅಲ್ಲಿಯೇ ಅಳಿದುಳಿದ ಮೊಂಡು ಕೈಗಳಿಂದಲೇ ಊಟವನ್ನು ಮಾಡುತ್ತಾನೆ. ಶಾಲೆಯ ಪುಸ್ತಕ, ಪಾಟಿ ಚೀಲವನ್ನು ಯಾರ ನೆರವಿಲ್ಲದೆ ತೆಗೆದುಕೊಳ್ಳುವದನ್ನು ಕಂಡರೆ ಯಾರಿಗಾದರೂ ಇತನ ಮೇಲೆ ಅಭಿಮಾನ ಮೂಡುವದರಲ್ಲಿ ಅಚ್ಚರಿಯಿಲ್ಲ. ಆದರೆ ಶಾಲೆ ಬಿಟ್ಟ ನಂತರ ಈತ ಮನೆಗೆ ಹೋದರೂ ಅಷ್ಠೇ ಮನೆಯಲ್ಲಿಯ ಕೆಲಸಗಳನ್ನು ಸಹ ಉತ್ತಮವಾಗಿ ನಿರ್ವಹಿಸುತ್ತಾನೆ. ತಾನೇ ಸ್ವತಹ ಯಾರ ನೆರವಿಲ್ಲದೆ ಸ್ನಾನ ಮಾಡುವುದು, ನೀರು ತುಂಬುವುದು, ಕಟ್ಟಿಗೆ ಮುರಿದು ಕೊಡುವುದು, ಕಸ ಹೊಡೆಯುವುದು, ದನಗಳನ್ನು ಮೇಯಿಸುವ ಕೆಲಸವನ್ನು ಮಾಡಿ ಮನೆಯವರಿಗೆ ಅನುಕೂಲ ಮಾಡಿಕೊಡುವದರಿಂದ ಈತ ಗ್ರಾಮದಲ್ಲಿ ಎಲ್ಲರಿಗೂ ಅಚ್ಚುಮೆಚ್ಚು. ಈತನ ಕುಟುಂಬದವರು ಅತೀ ಬಡವರಾಗಿದ್ದಾರೆ. ಇತನ ತಾಯಿ ಕೂಲಿ ಕೆಲಸಕ್ಕೆ ಹೋಗುತ್ತಾಳೆ. ಮನೆಯೂ ಕೂಡಾ ಮುರಕಲು ಮನೆಯಾಗಿದ್ದು, ಸುಧಾರಣೆ ಕಂಡಿಲ್ಲ. ಇತ ಇನ್ನೊಬ್ಬ ಸಹೋದರ ಶಂಕರ 2 ತರಗತಿ ಕಲಿಯುತ್ತಿದ್ದಾನೆ. ಆದರೆ ಇತನಿಗೆ ಒಬ್ಬನಿಗೆ ಮಾತ್ರ ಹುಟ್ಟಿನಿಂದಲೇ ಅಂಗವಿಲತೆ ಬಂದಿದ್ದು, ಇತನ ಕುಟುಂಬದಲ್ಲಿ ಮತ್ಯಾರಿಗೂ ಅಂಗವಿಕಲತೆ ಇಲ್ಲ. ಇಷ್ಟೆಲ್ಲ ಅಂಗವಿಕಲತೆಯಿದ್ದರೂ ಓದಿನಲ್ಲಿ ಬುದ್ದಿವಂತನಾಗಿರುವದು ಶರೀರದ ಎಲ್ಲ ಅಂಗಗಳು ಒಳ್ಳೆಯದು ಇದ್ದರೂ ಸಹ ಓದಿನಲ್ಲಿ ಹಿಂದೆ ಮಾತ್ರ ಬಿಳದೆ ಶಾಲೆಯಲ್ಲಿ ಮನೆಯಲ್ಲಿ ಎಲ್ಲದರಲ್ಲೂ ನಂಬರ ಒನ್ ಸ್ಥಾನದಲ್ಲಿರುತ್ತಾನೆ. ಒಟ್ಟಿನಲ್ಲಿಬೀ ಈ ಬಾಲಕ ಪ್ರತಿನಿತ್ಯ ಎರಡು ಕೈಗಳೂ ಪೂರ್ತಿಯಾಗಿರದಿದ್ದರು ತನ್ನ ಕೆಲಸಗಳನ್ನ ತಾನೆ ಮಾಡಿಕ್ಕೊಂಡು ಇನ್ನೊಬ್ಬರಿಗೆ ಮಾದರಿಯಾಗಿದ್ದಾನೆ ,ಅಷ್ಟೆ ಅಲ್ಲದೆ, ಆತ ಇಡಿ ವಿಕಲಚೇತನರಿಗೆ ಮಾದರಿಯಾಗಿದ್ದಾನೆ, ಸರಕಾರ ಮತ್ತು ದಾನಿಗಳು ಇತನಿಗೆ ಸಹಾಯ ಹಸ್ತ ಚಾಚಿದ್ದೆ ಆದರೆ ಮುಂದೆ ಒಂದು‌ದಿನ ಇತ ಉನ್ನತ ಸ್ಥಾನಕ್ಕೆ ಬರುವುದರಲ್ಲಿ‌ ಸಂಶಯವೆ ಇಲ್ಲ. ವಿನಾಯಕ ಮಠಪತಿ ಬೆಳಗಾವಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.