ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹಿಂಗಾರು ಮಳೆ ಅಬ್ಬರಿಸಿದೆ. ರಾಜ್ಯ ಅತೀ ಎತ್ತರದ ಪ್ರದೇಶವಾದ ಮುಳ್ಳಯ್ಯನಗಿರಿಯಲ್ಲಿ ಭಾರೀ ಮಳೆಯಾಗಿದ್ದು, ರಸ್ತೆ ಮೇಲೆ ಮಳೆಯ ನೀರು ಎರಡು ಅಡಿಗಳಷ್ಟು ಹರಿದಿದೆ. ಗಿರಿ ಪ್ರದೇಶಕ್ಕೆ ತೆರಳಿದ್ದ ಪ್ರವಾಸಿಗರು ಮಳೆಯಿಂದ ಪರದಾಡಿದರು.
ವೃದ್ಧೆಯನ್ನು ಹೊತ್ತು ಸಾಗಿದ ಹಳ್ಳಿಗರು: ಕಿರು ಸೇತುವೆ ಜಲಾವೃತಗೊಂಡ ಪರಿಣಾಮ ವೃದ್ಧೆಯನ್ನ ಅಂಗೈಲಿ ಹೊತ್ತು ಹಳ್ಳಿಗರು ಸೇತುವೆ ದಾಟಿದ ಘಟನೆ ಚಿಕ್ಕಮಗಳೂರು ತಾಲೂಕಿನ ಮಲಗಾರು ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: ವಾಯುಭಾರ ಕುಸಿತದ ಪರಿಣಾಮ ನಿರಂತರ ಮಳೆ, ಮುಳುಗುತ್ತಿದೆ ಬೆಂಗಳೂರು; ಹತ್ತು ಹಲವು ಅವಾಂತರ ಸೃಷ್ಟಿ