ETV Bharat / health

ನಿಮ್ಮ ಪ್ರೀತಿಪಾತ್ರರು ಒತ್ತಡ, ದುಃಖದಲ್ಲಿದ್ದಾರಾ? ಇದೊಂದು ಸಿಂಪಲ್ ಟ್ರೀಟ್ಮೆಂಟ್ ಸಾಕು, ತಕ್ಷಣವೇ ಅವರು ನಿರಾಳ! - HUG BENEFITS FOR HEALTH

ನಿಮ್ಮ ಪ್ರೀತಿಪಾತ್ರರು ಮಾನಸಿಕ ಒತ್ತಡ, ದುಃಖದಲ್ಲಿದ್ದಾರೆಯೇ? ಹಾಗಾದ್ರೆ, ಬಿಗಿಯಾಗಿ ತಬ್ಬಿಕೊಳ್ಳುವಂತಹ ಟ್ರೀಟ್ಮೆಂಟ್ ಕೊಡಿ. ಅವರಲ್ಲಿನ ಮಾನಸಿಕ ಒತ್ತಡ ಮತ್ತು ದುಃಖದ ಕ್ಷಣಗಳು ನಿವಾರಣೆಯಾಗುತ್ತವೆ ಎಂದು ಸಂಶೋಧನೆಯೊಂದು ತೋರಿಸಿದೆ.

Hug Benefits for Health in Kannada  WHAT CAN HUGS DO FOR YOUR HEALTH  WHY HUGS ARE GOOD FOR YOUR HEALTH  WHY DO HUGS MAKE YOU FEEL BETTER
ಪ್ರೀತಿಯ ಅಪ್ಪುಗೆ (ಸಾಂದರ್ಭಿಕ ಚಿತ್ರ) (ETV Bharat)
author img

By ETV Bharat Lifestyle Team

Published : Oct 18, 2024, 4:35 PM IST

Hug Benefits For Health In Kannada: ನಮ್ಮಲ್ಲಿ ಅನೇಕರು ದುಃಖವಾಗಲಿ ಅಥವಾ ಸಂತೋಷವಾಗಲಿ ಇತರರನ್ನು ಬಿಗಿಯಾಗಿ ತಬ್ಬಿಕೊಳ್ಳುತ್ತೇವೆ. ಹೀಗೆ ಮಾಡುವುದರಿಂದ ಮನಸ್ಸಿನ ಭಾವನೆಗಳು ನಿಯಂತ್ರಣಕ್ಕೆ ಬರುತ್ತವೆ. ಇವೆರಡೂ ಭಾವನೆಗಳನ್ನು ನಿಯಂತ್ರಿಸುವುದರ ಜೊತೆಗೆ ಅನೇಕ ಪ್ರಯೋಜನಗಳನ್ನೂ ಹೊಂದಬಹುದು ಎಂಬುದು ಸಂಶೋಧಕರ ಮಾತು.

'ಉಪ್ಪಿ ದಾದಾ ಎಂಬಿಬಿಎಸ್​' ಚಿತ್ರದಲ್ಲಿ ಆಸ್ಪತ್ರೆಯ ಕಸ ಗುಡಿಸುವವನಿಗೆ ತುಂಬಾ ಕೋಪ ಬರುತ್ತದೆ. ಆ ಸಮಯದಲ್ಲಿ ಉಪ್ಪಿ ಅವನಿಗೆ ಪ್ರೀತಿಯ ಅಪ್ಪುಗೆ ನೀಡುತ್ತಾರೆ. ತಕ್ಷಣವೇ ಆತನ ಕೋಪ ಕಡಿಮೆಯಾಗುತ್ತದೆ. ಅದೇ ರೀತಿ, ನಿಜ ಜೀವನದಲ್ಲಿ ಅಪ್ಪುಗೆಗೆ ಅಷ್ಟೊಂದು ಶಕ್ತಿಯಿದೆ ಎನ್ನುತ್ತಾರೆ ತಜ್ಞರು.

ನಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಕಷ್ಟದಲ್ಲಿದ್ದಾಗ, ಅವರಿಗೆ ಒಂದು ಸಣ್ಣ ಅಪ್ಪುಗೆಯನ್ನು ನೀಡಿದರೆ ನಾನಿದ್ದೇನೆ ಎನ್ನುವ ಭರವಸೆ ನೀಡಬಹುದು ಎಂದು ತಜ್ಞರು ಹೇಳುತ್ತಾರೆ. ಆಳವಾಗಿ ದುಃಖಿತರನ್ನು ತಬ್ಬಿಕೊಳ್ಳುವುದು ಉತ್ತಮ ಸಹಾನುಭೂತಿ ತೋರಿಸಿದಂತಾಗುತ್ತದೆ. ಒತ್ತಡದಿಂದ ಹೊರಬರುವ ಶಕ್ತಿ ನಾವು ನೀಡುವ ಅಪ್ಪುಗೆಯಲ್ಲಿದೆ.

ನೇಚರ್ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಅಪ್ಪುಗೆಯಿಂದ ಸುರಕ್ಷತೆಯ ಪ್ರಜ್ಞೆಯನ್ನು ಉತ್ತೇಜಿಸುವ ಹಾರ್ಮೋನ್ ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ. ಜರ್ಮನಿಯ ಫ್ರೀಬರ್ಗ್ ವಿಶ್ವವಿದ್ಯಾಲಯದ ಮನೋವಿಜ್ಞಾನದ ಪ್ರಾಧ್ಯಾಪಕ ಮಾರ್ಕಸ್ ಹೆನ್ರಿಚ್ಸ್, ಆಕ್ಸಿಟೋಸಿನ್ ಮಾನವರಲ್ಲಿ ನಂಬಿಕೆ ಹೆಚ್ಚಿಸುತ್ತದೆ ಎಂಬ ವಿಷಯದ ಕುರಿತು ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು. ಅಪ್ಪುಗೆ ನೀಡುವ ಮೂಲಕ ಯಾರೋ ಒಬ್ಬರಿದ್ದಾರೆ ಎಂಬ ಭಾವನೆ ಮೂಡಿಸಿ ಅವರಿಗೆ ಸಮಾಧಾನ ನೀಡುತ್ತದೆ ಎಂಬ ವಿಚಾರ ಸಂಶೋಧನೆಯಿಂದ ಬಹಿರಂಗವಾಗಿದೆ.

ಆತ್ಮೀಯತೆ ಹೆಚ್ಚುತ್ತೆ: ರಿಲೇಶನ್​ಶಿಪ್​ನಲ್ಲಿ ಆಗಾಗ ಹಗ್ ಮಾಡಿಕೊಳ್ಳುವವರು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ತಜ್ಞರು. ಪ್ರೇಮಿಗಳು ಪರಸ್ಪರ ಅಪ್ಪಿಕೊಂಡಾಗ ಎಂಡಾರ್ಫಿನ್ ಬಿಡುಗಡೆಯಾಗುತ್ತದೆ. ಪರಿಣಾಮವಾಗಿ, ಒತ್ತಡವೂ ದೂರವಾಗುತ್ತದೆ ಮತ್ತು ಸಂತೋಷವನ್ನು ಅನುಭವಿಸಲು ಸಾಧ್ಯವಾಗುತ್ತದೆ. ಒಂದು ಸಣ್ಣ ಅಪ್ಪುಗೆ ನೀವಿಷ್ಟಪಡುವ ವ್ಯಕ್ತಿಯೊಂದಿಗೆ ಸಂಪರ್ಕವನ್ನು ಬಲಪಡಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಇತರರ ನಡುವೆ ಸಂಘರ್ಷ ಉಂಟಾದಾಗ ಅವರನ್ನು ಅಪ್ಪಿಕೊಳ್ಳುವುದರಿಂದ ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ ಮತ್ತು ಅವರ ಮೇಲಿನ ನಂಬಿಕೆ ಹೆಚ್ಚಾಗುತ್ತದೆ. ಇದರಿಂದ ಇಬ್ಬರ ನಡುವಿನ ಆತ್ಮೀಯತೆ ಗಟ್ಟಿಯಾಗುತ್ತದೆ ಎಂದು ತಜ್ಞರು ವಿವರಿಸಿದ್ದಾರೆ.

ಆತ್ಮಸ್ಥೈರ್ಯ ಹೆಚ್ಚುತ್ತೆ: ಆಟವಾಡುವಾಗ ಮಕ್ಕಳಿಗೆ ಆಗುವ ಗಾಯಗಳು, ಸ್ನೇಹಿತರ ಜೊತೆಗಿನ ಸಣ್ಣ ಜಗಳಗಳು ಅವರಿಗೆ ತೀವ್ರ ನೋವನ್ನುಂಟು ಮಾಡುತ್ತವೆ. ಕಷ್ಟಪಟ್ಟು ಓದುತ್ತಿದ್ದರೂ ಬಯಸಿದ ರ‍್ಯಾಂಕ್‌ ಗಳಿಸಲು ಸಾಧ್ಯವಾಗುತ್ತಿಲ್ಲ ಎಂಬ ನೋವು ಅನೇಕರಿಗೆ ಇರುತ್ತದೆ. ಅಂತಹ ಸಂದರ್ಭಗಳಲ್ಲಿ ಪೋಷಕರು ಮಕ್ಕಳನ್ನು ಹತ್ತಿರಕ್ಕೆ ಕರೆತಂದು ಪ್ರೀತಿಯಿಂದ ಮುಟ್ಟಿದರೆ ಸಾಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಹೀಗೆ ಮಾಡುವುದರಿಂದ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ಭದ್ರತೆಯ ಭಾವನೆ ಉತ್ತೇಜಿಸುತ್ತದೆ. ಮತ್ತು ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಸಂಶೋಧಕರು ತಿಳಿಸುತ್ತಾರೆ.

ಅಪ್ಪುಗೆ ಕೌಟುಂಬಿಕ ಬಾಂಧವ್ಯವನ್ನು ಬಲಪಡಿಸುವುದಲ್ಲದೇ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ನೋವಿನಿಂದ ಪರಿಹಾರ ನೀಡುತ್ತದೆ. ಇದು ಆತಂಕವನ್ನು ಎದುರಿಸಲು ಮತ್ತು ನಿಮ್ಮನ್ನು ಆರಾಮವಾಗಿರಿಸಲು ಶಕ್ತಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಇದು ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಮತ್ತು ಇದರಿಂದಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ತಿಳಿದು ಬಂದಿದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಹಲವಾರು ಅಧ್ಯಯನಗಳು ಈಗಾಗಲೇ ತೋರಿಸಿವೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ ಅನ್ನು ಸಂರ್ಕಿಸಬಹುದು:

  • https://pmc.ncbi.nlm.nih.gov/articles/PMC4323947/

ಓದುಗರ ಗಮನಕ್ಕೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಹಾಗೂ ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.

ಇದನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.