ETV Bharat / state

ಬಿಎಸ್​ವೈ ಪತ್ನಿ ವಿಚಾರ ಪ್ರಸ್ತಾಪ ; ಸಚಿವ ಬೈರತಿ ಸುರೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ - ಭಾರತಿ ಶೆಟ್ಟಿ

ಎಂಎಲ್​ಸಿ ಭಾರತಿ ಶೆಟ್ಟಿ ಅವರು ಸಚಿವ ಬೈರತಿ ಸುರೇಶ್​ ಕುರಿತು ಮಾತನಾಡಿದ್ದಾರೆ. ಬಿಎಸ್​ವೈ ಪತ್ನಿ ಬಗ್ಗೆ ಮಾತನಾಡುವುದು ಎಷ್ಟು ಸರಿ? ಎಂದಿದ್ದಾರೆ.

mlc-bharathi-shetty
ಭಾರತಿ ಶೆಟ್ಟಿ (ETV Bharat)
author img

By ETV Bharat Karnataka Team

Published : Oct 20, 2024, 10:51 PM IST

ಬೆಂಗಳೂರು : ರಾಜ್ಯದ ಕಾಂಗ್ರೆಸ್ ಸರ್ಕಾರದ ಸಚಿವ ಬೈರತಿ ಸುರೇಶ್ ಅವರು ಮಹಿಳೆಯರ ಮಾನಹಾನಿ ಮಾಡುವಂತಹ ಹೇಳಿಕೆ ನೀಡಿದ್ದನ್ನು ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ತೀವ್ರವಾಗಿ ಖಂಡಿಸಿದ್ದು, ಸುರೇಶ್ ಅವರ ಹೇಳಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲು ಸಿದ್ಧ ಎಂದು ಅವರು ಎಚ್ಚರಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಚಿವ ಸ್ಥಾನದಲ್ಲಿರುವ ಬೈರತಿ ಸುರೇಶ್ ಅವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ನಾನು ಶಿವಮೊಗ್ಗ ಜಿಲ್ಲೆಯವಳು. ಯಡಿಯೂರಪ್ಪ, ಮೈತ್ರಾದೇವಿ, ಶೋಭಾ ಕರಂದ್ಲಾಜೆ ಅವರನ್ನು ಹತ್ತಿರದಿಂದ ಬಲ್ಲವಳು. ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದನ್ನು ಖಂಡಿಸುತ್ತೇನೆ. ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎಂದು ತಿಳಿಸಿದ್ದಾರೆ.

ಒಬ್ಬ ಸಚಿವನಾಗಿ ಸಾಮಾಜಿಕ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದನ್ನು ಬಿಟ್ಟು, ಬೇರೆಯವರ ವೈಯಕ್ತಿಕ ಬದುಕಿನ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಸರಿಯಲ್ಲ. ಮಹಿಳೆಯರ ತೇಜೋವಧೆ ಮಾಡುವುದನ್ನು ನಿಲ್ಲಿಸಿ ಎಂದು ಅವರು ಆಗ್ರಹಿಸಿದ್ದಾರೆ.

ತಮ್ಮ ಮೇಲೆ ಅಪವಾದ ಬಂದ ತಕ್ಷಣ ಮಹಿಳೆಯರ ಗುಣನಡತೆ ಕುರಿತು ಆರೋಪ ಮಾಡುವುದು ಇವರಿಗೆ ಅಭ್ಯಾಸವಾಗಿದೆ. ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವವರ ಗುಣನಡತೆ ಬಗ್ಗೆ ಮಾತನಾಡುವುದು ಅಕ್ಷಮ್ಯ. ಮೈತ್ರಾದೇವಿ ಅವರು ತಾಯಿ ಸಮಾನ. ಅವರು ಸಾವನ್ನಪ್ಪಿ ಹಲವಾರು ವರ್ಷಗಳು ಕಳೆದಿದ್ದು, ಈಗ ಅದರ ಕುರಿತು ಮಾತನಾಡುವುದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದ್ದಾರೆ.

ಗುಣನಡತೆಯ ಕುರಿತು ಮಾತನಾಡುವುದು ಎಷ್ಟು ಸರಿ?: ಅವರು ಮೃತಪಡುವ ವೇಳೆ ಬೈರತಿ ಸುರೇಶ್ ಅವರು ಎಲ್ಲಿದ್ದರು? ಯಾವ ಹುದ್ದೆಯಲ್ಲಿದ್ದರು ಎಂದು ಪ್ರಶ್ನಿಸಿದ್ದು, ಇಂಥ ಬೇಜವಾಬ್ದಾರಿ ಹೇಳಿಕೆಗಳನ್ನು ನಿಲ್ಲಿಸದಿದ್ದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ. ಉನ್ನತ ಸ್ಥಾನದಲ್ಲಿರುವ ಮಹಿಳೆಯರು ನಿಮ್ಮ ತಪ್ಪುಗಳನ್ನು ತೋರಿಸುವುದು ಅಪರಾಧವೇ? ಹಾಗೆ ಹೇಳಿಕೆ ಕೊಟ್ಟು ಆಗ್ರಹಿಸಿದರೆ ಅವರ ಗುಣನಡತೆಯ ಕುರಿತು ಮಾತನಾಡುವುದು ಎಷ್ಟು ಸರಿ? ಎಂದೂ ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಮೈತ್ರಾದೇವಿ ಸಾವಿನಲ್ಲಿ ಶೋಭಾ ಕರಂದ್ಲಾಜೆ ಪಾತ್ರ ಇದೆ ಅಂತ ನಾನು ಆರೋಪಿಸುತ್ತೇನೆ; ಸಚಿವ ಬೈರತಿ ಸುರೇಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.