ಚಿಕ್ಕೋಡಿ : ಪಟ್ಟಣದ ಲಕ್ಕಪ್ಪ ದೊಡಮನಿ ಎಂಬ ರೈತ ಹೊಲದಲ್ಲಿ ಸಾವನ್ನಪ್ಪಿರುವ ಪ್ರಕರಣದ ಕುರಿತಂತೆ ತನಿಖೆ ನಡೆಸಲಾಗುವುದು ಜತೆಗೆ ಮೃತನ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ ಆರ್ಥಿಕ ಸಹಾಯ ಮಾಡೋದಾಗಿ ಜಿಲ್ಲಾಧಿಕಾರಿ ಡಾ. ಎಸ್ ಬಿ ಬೊಮ್ಮನಹಳ್ಳಿ ಭರವಸೆ ನೀಡಿದ್ದಾರೆ.
ಮೂರು ದಿನಗಳ ಹಿಂದೆ ತಮ್ಮ ಜಮೀನಿನಲ್ಲಿ ಕೊರೆಯಿಸಿದ್ದ ಕೊಳವೆಯೊಳಗೆ ಬಿದ್ದ ಸಾವನ್ನಪ್ಪಿದ್ದ ಎನ್ನಲಾಗಿತ್ತು. ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಜಿಲ್ಲಾಧಿಕಾರಿಗಳು, ರೈತ ಕಲ್ಲಪ್ಪ ಹೇಗೆ ಕೊಳವೆ ಬಾವಿಗೆ ಬಿದ್ರು? ಅದಕ್ಕೆ ಕಾರಣಗಳೇನು? ಎಂಬುದು ಸೇರಿ ಎಲ್ಲಾ ಆಯಾಮಗಳಲ್ಲಿ ತನಿಖೆ ಆಗಬೇಕಿದೆ. ಮೇಲ್ನೋಟಕ್ಕೆ ರೈತ ಲಕ್ಕಪ್ಪ ತನ್ನ ಮೈಮೇಲಿನ ಬಟ್ಟೆ ತೆಗೆದಿಟ್ಟು ಕೊಳವೆ ಬಾವಿಗೆ ಬಿದ್ದಿರೋದು ಕಂಡು ಬಂದಿದೆ. ಎಸ್ಪಿ ಲಕ್ಷ್ಮಣ್ ನಿಂಬರಗಿಯವರ ನೇತೃತ್ವದಲ್ಲಿ ಇದರ ಬಗ್ಗೆ ತನಿಖೆ ನಡೆಯಲಿದೆ ಎಂದು ಹೇಳಿದರು.
ಅಧಿಕಾರಿಗಳ ಸತತ ಮೂರ್ನಾಲ್ಕು ಘಂಟೆ ಪರಿಶ್ರಮದಿಂದ ಮೃತ ದೇಹವನ್ನು ಹೊರ ತೆಗೆಯಲಾಗಿದೆ. ಅತೀ ಕಡಿಮೆ ವೇಳೆಯಲ್ಲಿ ಕಾರ್ಯಾಚರಣೆ ಮಾಡಿ ಮೃತ ದೇಹ ಹೊರ ತೆಗೆಯಲಾಗಿದೆ. ಸಿಎಂ ಪರಿಹಾರ ನಿಧಿಯಿಂದ ಕುಟುಂಬಕ್ಕೆ ಖಂಡಿತ ಸಹಾಯ ಮಾಡಲಾಗುವುದು ಎಂದು ಡಿಸಿ ಬೊಮ್ಮನಹಳ್ಳಿ ಹೇಳಿದರು.