ಚಿಕ್ಕೋಡಿ: ಕೋವಿಡ್-19ಕ್ಕೆ ಮುಂದುವರೆದ ಚೀನಾ, ಇಟಲಿ, ಅಮೆರಿಕಾದಂತಹ ದೇಶಗಳು ತತ್ತರಿಸಿವೆ. ಹೀಗಾಗಿ ಕೊರೊನಾ ತಡೆಗಟ್ಟುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಲಾಕ್ಡೌನ್ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಕೊರೊನಾ ಸೋಂಕಿತನನ್ನು ಟ್ರೀಟ್ ಮಾಡುತ್ತಿರುವವರ ಶ್ರಮ ಬಹಳ ದೊಡ್ಡದು ಅಂತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಏಪ್ರಿಲ್-5 ಭಾನುವಾರ ರಾತ್ರಿ 9 ಗಂಟೆಗೆ ನಾವೆಲ್ಲರೂ ಒಂದೇ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಸಾರಲು ಬೆಳಕಿನ ಕ್ರಾಂತಿ ಮಾಡಬೇಕಾಗಿದೆ. ಹೋಮ್ ಕ್ವಾರಂಟೈನ್ನಲ್ಲಿರುವವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ. ಎಲ್ಲರೂ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ನಮಗೆ ಎಚ್ಚರಿಕೆಯ ಗಂಟೆಯಾಗಲಿದೆ.
ಬೆಂಗಳೂರಿನ ಆಶಾ ಕಾರ್ಯಕರ್ತೆ ಕೃಷ್ಣ ವೇಣಿ ಹಲ್ಲೆ ಖಂಡನೀಯ. ಇಂತಹ ಘಟನೆಗಳು ಮರುಕಳಿಸದಿರಲಿ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ನಮಗೋಸ್ಕರ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಣೆ ಮಾಡುತಿದ್ದಾರೆ. ಅವರಿಗೂ ಕುಟುಂಬವಿದೆ ಆದರೂ ಸರ್ಕಾರದ ಆದೇಶದ ಮೇರೆಗೆ ಸೇವೆ ಸಲ್ಲಿಸುತ್ತಿದ್ದಾರೆ ಎಂದಿದ್ದಾರೆ.