ETV Bharat / state

ಈಟಿವಿ ಭಾರತ ಫಲಶ್ರುತಿ: ಬೆಳೆ ಹಾನಿಯಾದ ಗ್ರಾಮಗಳಿಗೆ ರಾಯಬಾಗ ತಹಶೀಲ್ದಾರ್​ ಭೇಟಿ - Rain in Belgavi

ರಾಯಬಾಗ ತಾಲೂಕಿನಲ್ಲಿ ಮಳೆಯಿಂದ ಬೆಳೆ ಹಾನಿ ಸಂಭವಿಸಿದ ಗ್ರಾಮಗಳಿಗೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Thashildar visits Paramanandawadi village
ಬೆಳೆ ಹಾನಿಯಾದ ಗ್ರಾಮಗಳಿಗೆ ರಾಯಬಾಗ ತಹಶೀಲ್ದಾರ್​ ಭೇಟಿ
author img

By

Published : Oct 20, 2020, 4:24 PM IST

ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿ ಹಾಗೂ ಖೇಮಲಾಪೂರ ಗ್ರಾಮದ ಜಮೀನಿನಲ್ಲಿ ನೀರು ನಿಂತು ಬೆಳೆ ಹಾನಿಯಾದ ಬಗ್ಗೆ ಈಟಿವಿ ಭಾರತ ಬಿತ್ತರಿಸಿದ್ದ ವರದಿಯಿಂದ ಎಚ್ಚೆತ್ತ, ರಾಯಬಾಗ ತಹಶೀಲ್ದಾರ್​ ಚಂದ್ರಕಾಂತ ಭಜಂತ್ರಿ ನೀರು ನಿಂತ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಳೆ ಹಾನಿಯಾದ ಗ್ರಾಮಗಳಿಗೆ ರಾಯಬಾಗ ತಹಶೀಲ್ದಾರ್​ ಭೇಟಿ

ಕೃಷ್ಣಾ ನದಿ ಪ್ರವಾಹದಿಂದ ಪರಮಾನಂದವಾಡಿ ಹಾಗೂ ಖೇಮಲಾಪೂರ ಗ್ರಾಮಗಳ ಸುಮಾರು 400 ಎಕರೆ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿ ಸಂಭವಿಸಿತ್ತು. ಈ ಬಗ್ಗೆ ಅ.1 ರಂದು ಕೃಷ್ಣಾ ನದಿ ತೀರದ ಜನರ ಗೋಳು ಕೇಳುವವರಿಲ್ಲ... ಜಮೀನನಲ್ಲೇ ನಿಂತ ನೀರು, ಸಾಂಕ್ರಾಮಿಕ ರೋಗದ ಭೀತಿ! ಎಂಬ ಶೀರ್ಷಿಕೆಯಲ್ಲಿ ಈಟಿವಿ ಭಾರತ ವರದಿ ಬಿತ್ತರಿಸಿತ್ತು. ವರದಿ ಗಮನಿಸಿದ, ರಾಯಬಾಗ ತಹಶೀಲ್ದಾರ್​ ಚಂದ್ರಕಾಂತ ಭಜಂತ್ರಿ ಇಂದು ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ತಹಶೀಲ್ದಾರ್​, ಅವರು, ರೈತರ ಜಮೀನಿಗೆ ನೀರು ನುಗ್ಗಿ ಬೆಳೆಹಾನಿ ಸಂಭವಿಸಿದ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಜಮೀನಿನಲ್ಲಿ ನಿಂತ ನೀರು ಹೊರ ಹೋಗುತ್ತಿಲ್ಲ. ಅದನ್ನು ಖಾಲಿ ಮಾಡುವ ಬಗ್ಗೆ ನಮ್ಮ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಕ್ರಮಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.