ETV Bharat / state

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬೆಳಗಾವಿ ಜಿಲ್ಲೆ ವಿಭಜಿಸಲಿ: ಶಾಸಕ ಅಭಯ ಪಾಟೀಲ

BJP MLA Abhay Patil: ಬೆಳಗಾವಿ ನಗರವನ್ನು ಆಡಳಿತಾತ್ಮಕ ದೃಷ್ಟಿಯಿಂದ ಎರಡು ತಾಲೂಕುಗಳನ್ನಾಗಿ ರಚಿಸುವ ಅಗತ್ಯವಿದೆ. ಉತ್ತರ, ದಕ್ಷಿಣ ವಿಧಾನಸಭೆ ಕ್ಷೇತ್ರಗಳನ್ನು ಸೇರಿಸಿ ಒಂದು ತಾಲೂಕು ಮಾಡಬೇಕು.‌ ಬೆಳಗಾವಿ ಗ್ರಾಮೀಣ ಸೇರಿಸಿ ಒಂದು ತಾಲೂಕು ಆಗಬೇಕು ಎಂದು ಶಾಸಕ ಅಭಯ ಪಾಟೀಲ ಒತ್ತಾಯಿಸಿದ್ದಾರೆ.

MLA Abhay Patil spoke at the press conference.
ಶಾಸಕ ಅಭಯ ಪಾಟೀಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
author img

By

Published : Aug 16, 2023, 8:05 PM IST

ಶಾಸಕ ಅಭಯ ಪಾಟೀಲ ಹೇಳಿಕೆ

ಬೆಳಗಾವಿ‌: ಬೆಳಗಾವಿ ತಾಲೂಕು ರಚನೆಗೆ ನನ್ನ ಸಹಮತ ಇದೆ. ಆದರೆ, ಜಿಲ್ಲೆಯ ವಿಭಜನೆ ವಿಚಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಣಯ ಕೈಗೊಂಡರೆ ಮಾತ್ರ ನನ್ನ ಒಪ್ಪಿಗೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು.

ಬೆಳಗಾವಿಯಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಈ ಹಿಂದೆ ಮೂರು ಜಿಲ್ಲೆಗಳನ್ನು ಮಾಡುತ್ತೇವೆ ಎಂದಾಗ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ಮೂರು ಜಿಲ್ಲೆಗಳ ಬಗ್ಗೆ ಚರ್ಚಿಸಿ ನಿರ್ಣಯ ಮಾಡಬೇಕು. ಜಿಲ್ಲೆಗಾಗಿ ಗೋಕಾಕ್ ಮತ್ತು ಬೈಲಹೊಂಗಲ ತಾಲೂಕಿನವರ ನಡುವೆ ತೀವ್ರ ಪೈಪೋಟಿ ಇರುವುದು ಸಮಸ್ಯೆಯಾಗಿದೆ. ಇದರ ನಡುವೆ ಸವದತ್ತಿ ಧಾರವಾಡಕ್ಕೆ, ಖಾನಾಪುರ ಕಾರವಾರಕ್ಕೆ, ಅಥಣಿ ವಿಜಯಪುರಕ್ಕೆ ಸೇರಿಸಬೇಕು ಎಂಬ ಚರ್ಚೆಯೂ ಆಗಿತ್ತು. ಆದ್ದರಿಂದ ಎಲ್ಲರನ್ನೂ ಒಗ್ಗೂಡಿಸಿ ವಿಶ್ವಾಸಕ್ಕೆ ಪಡೆದು ಈ ಕಾರ್ಯ ಮಾಡಬೇಕು. ಹಿಂದಿನ ಸಮಸ್ಯೆ ನಿವಾರಿಸಿ, ಜಿಲ್ಲಾ ವಿಭಜನೆ ಮಾಡಬೇಕು ಎಂದು ಸಲಹೆ ನೀಡಿದರು.

ಬೆಳಗಾವಿ 2 ತಾಲೂಕು ರಚನೆ ವಿಚಾರ: ಬೆಳಗಾವಿ ಎರಡು ತಾಲೂಕು ರಚನೆ ವಿಚಾರಕ್ಕೆ ವಿಶೇಷವಾಗಿ ಬೆಳಗಾವಿ ನಗರ ಜಿಲ್ಲಾ ಕೇಂದ್ರ ಇರುವುದರಿಂದ ಶಿಷ್ಟಾಚಾರ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಯಾವುದೇ ಸಚಿವರು, ಮುಖ್ಯಮಂತ್ರಿಗಳು ಮತ್ತು ನ್ಯಾಯಾಧೀಶರೂ ಬಂದರೂ, ಇಲ್ಲಿನ ತಹಸೀಲ್ದಾರ್ ಶಿಷ್ಟಾಚಾರದಲ್ಲೇ ಇರುತ್ತಾರೆ. ಹಾಗಾಗಿ ಆಡಳಿತಾತ್ಮಕ ದೃಷ್ಟಿಯಿಂದ ಎರಡು ತಾಲೂಕು ರಚನೆಯನ್ನು ನಾನು ಸ್ವಾಗತಿಸುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕ್ಷೇತ್ರವನ್ನು ಪೂರ್ಣವಾಗಿ ತೆಗೆದುಕೊಂಡರೆ ಒಳ್ಳೆಯದು. ಅರ್ಧ ಮಾಡಿದರೆ ಆಯಾ ಶಾಸಕರು ಎರಡು ತಾಲೂಕಿಗೆ ಓಡಾಡಬೇಕಾಗುತ್ತೆ. ಇಬ್ಬರು ತಹಸೀಲ್ದಾರ್ ಆಗ್ತಾರೆ, ಇದು ಡಬಲ್ ಕೆಲಸ ಆಗುತ್ತದೆ. ಹಾಗಾಗಿ ಉತ್ತರ, ದಕ್ಷಿಣ ವಿಧಾನಸಭೆ ಕ್ಷೇತ್ರಗಳನ್ನು ಸೇರಿಸಿ ಒಂದು ತಾಲೂಕು ಮಾಡಬೇಕು.‌ ಬೆಳಗಾವಿ ಗ್ರಾಮೀಣ ಸೇರಿಸಿ ಒಂದು ತಾಲೂಕು ಆಗಬೇಕು. ಇದರಲ್ಲಿ ರಾಜಕೀಯ ತರದೇ ಆಡಳಿತಾತ್ಮಕ ದೃಷ್ಟಿಯಿಂದ ಉಪಯೋಗ ಆಗೋದನ್ನು ಮಾಡಲಿ ಎಂದರು. ಇದೇ ವೇಳೆ ರಾಜಕೀಯಕ್ಕಾಗಿ ತಾಲೂಕು ವಿಂಗಡಣೆ ಮಾಡ್ತಿದ್ದಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಅವರ ಹೇಳಿಕೆ ನೋಡಿದ್ರೆ, ಇದು ಆಡಳಿತಾತ್ಮಕ ಅನಿಸುತ್ತದೆ. ಆದರೆ, ಇದನ್ನು ಮಾಡಿದ ನಂತರ ಇದರಲ್ಲಿ ರಾಜಕೀಯ ಇದೆಯೋ, ಇಲ್ಲವೋ ಎಂದು ಗೊತ್ತಾಗುತ್ತದೆ ಎಂದು ಹೇಳಿದರು.

'ಕಾಂಗ್ರೆಸ್​​​ದಲ್ಲಿ ಅಸಮಾಧಾನ': 6 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನ ಆಗುತ್ತೆ ಎಂಬ ಯತ್ನಾಳ ಹೇಳಿಕೆಗೆ, ಯತ್ನಾಳ ಅವರು ನನಗಿಂತ ಹಿರಿಯರು, ಅವರಿಗೆ ಸಂಪರ್ಕ ಇರಬಹುದು. ಅದೇ ರೀತಿ ಮೊನ್ನೆ ನಾನು ಬೆಂಗಳೂರಿಗೆ ಹೋದಾಗ ನನ್ನ ಮುಂದೆಯೂ‌ ಕೆಲ ಕಾಂಗ್ರೆಸ್ ಶಾಸಕರು ನಮ್ಮ‌ ಕೆಲಸ ಆಗುತ್ತಿಲ್ಲ ಎಂದಿದ್ದಾರೆ. ಅದರಲ್ಲೂ ಮುಖ್ಯವಾಗಿ ವರ್ಗಾವಣೆ ವಿಚಾರದಲ್ಲಿ ಅಸಮಾಧಾನ ಹೊರಹಾಕಿದ್ದಾರೆ‌. ಸ್ವತಃ ಶಾಸಕರ ಸಂಬಂಧಿಕರ ವರ್ಗಾವಣೆಯೇ ಆಗ್ತಿಲ್ಲ. ವರ್ಗಾವಣೆ ವಿಚಾರದಲ್ಲಿ ದುಡ್ಡು ಕೊಟ್ಟರೆ ಮಾತ್ರ ಆಯಾ ಮಂತ್ರಿಗಳು ಕೆಲಸ ಮಾಡ್ತಿದ್ದಾರೆ. ಹಾಗಾಗಿ ದಿನದಿಂದ ದಿನಕ್ಕೆ ಕಾಂಗ್ರೆಸ್​​ನಲ್ಲಿ ಅಸಮಾಧಾನ ಹೆಚ್ಚಾಗುತ್ತಿದೆ ಎಂದು ಹೇಳಿದರು.

ಇದನ್ನೂಓದಿ: Satish Jarakiholi: ಬೆಳಗಾವಿ ಜಿಲ್ಲೆಯಲ್ಲಿ 2 ಎಂಪಿ ಸ್ಥಾನ ಗೆಲ್ಲುತ್ತೇವೆ- ಸತೀಶ್ ಜಾರಕಿಹೊಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.