ETV Bharat / state

‘ಸುರೇಶ್​​​ ಅಂಗಡಿ ಅವರನ್ನು ಸಿಎಂ ಮಾಡಲು 4 ತಿಂಗಳ ಹಿಂದೆ ಸಭೆ ನಡೆದಿತ್ತು’: ಸೋದರ ಮಾವನಿಂದ ಬಹಿರಂಗ - ರೇಶ್​​​ ಅಂಗಡಿ ಅವರನ್ನು ಸಿಎಂ ಮಾಡಲು 4 ತಿಂಗಳ ಹಿಂದೆ ಸಭೆ ನಡೆದಿತ್ತು

4 ತಿಂಗಳ ಹಿಂದೆಯಷ್ಟೇ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಸುರೇಶ್​ ಅಂಗಡಿಯವರನ್ನು ರಾಜ್ಯದ ಸಿಎಂ ಆಗಿ ನೇಮಿಸುವ ಕುರಿತು ಚರ್ಚೆ ನಡೆದಿತ್ತು ಎಂದು ಅವರ ಸೋದರ ಮಾವ ಲಿಂಗರಾಜ್​ ಪಾಟೀಲ್​ ಬಹಿರಂಗ ಪಡಿಸಿದ್ದಾರೆ.

Suresh Angadi Brother-in-law
ಸುರೇಶ್ ಅಂಗಡಿ ಸೋದರ ಮಾವ
author img

By

Published : Sep 29, 2020, 12:44 PM IST

Updated : Sep 29, 2020, 1:59 PM IST

ಬೆಳಗಾವಿ: ಕೇಂದ್ರ ಸಚಿವರಾಗಿದ್ದ ದಿ. ಸುರೇಶ್​ ಅಂಗಡಿ ಅವರನ್ನು ರಾಜ್ಯದ ಸಿಎಂ ಮಾಡಲು ದೆಹಲಿಯಲ್ಲಿ 4 ತಿಂಗಳ ಹಿಂದೆಯಷ್ಟೇ ಮಹತ್ವದ ಸಭೆ‌ ನಡೆದಿತ್ತು ಎಂದು ಅಂಗಡಿ ಅವರ ಸೋದರ ಮಾವ ಲಿಂಗರಾಜ್ ಪಾಟೀಲ್ ಬಹಿರಂಗ ಪಡಿಸಿದ್ದಾರೆ.

ಬೆಳಗಾವಿಯಲ್ಲಿ ಸುರೇಶ ಅಂಗಡಿ ಅವರ ನಿವಾಸದಲ್ಲಿ ಮಾತನಾಡಿದ ಲಿಂಗರಾಜ್​ ಪಾಟೀಲ್​, 4 ತಿಂಗಳ ಹಿಂದೆ ಸುರೇಶ್ ಅಂಗಡಿ ಅವರನ್ನು ಸಿಎಂ ಮಾಡುವ ಕುರಿತು ಸಭೆ ನಡೆದಿತ್ತು. ಕರ್ನಾಟಕ ಉಸ್ತುವಾರಿ ಮುರಳೀಧರ್‌‌ರಾವ್ ನೇತೃತ್ವದಲ್ಲಿ ದೆಹಲಿಯಲ್ಲಿ ಈ ಸಭೆ ನಡೆದಿತ್ತು ಎಂದಿದ್ದಾರೆ.

ಸುರೇಶ್​​​ ಅಂಗಡಿ ಸೋದರ ಮಾವ ಲಿಂಗರಾಜ್​ ಪಾಟೀಲ್​​ ಮಾಹಿತಿ

ದೆಹಲಿಯ ಪ್ರಮುಖ ನಾಯಕರು ಅಂದು ಸಭೆಯಲ್ಲಿ ಭಾಗಿಯಾಗಿದ್ದರು. ಭ್ರಷ್ಟಾಚಾರ ರಹಿತ, ಸಜ್ಜನ ರಾಜಕಾರಣಿ ಮತ್ತು ಲಿಂಗಾಯತ ಮುಖಂಡ ಎಂಬ ಕಾರಣಕ್ಕೆ ಅಂಗಡಿ ಅವರನ್ನು ಸಿಎಂ ಹುದ್ದೆಗೆ ಅಂಗಡಿ ಹೆಸರು ಮುಂಚೂಣಿಗೆ ಬಂದಿತ್ತು. ಈ ಸಭೆಯಲ್ಲಿ ನಾನೂ ಭಾಗಿಯಾಗಿದ್ದೆ. ಮುರಳೀಧರ್‌ ರಾವ್ ಅವರಿಗೆ ಸುರೇಶ್ ಅಂಗಡಿ ಅವರು ನನ್ನನ್ನು ಪರಿಚಯ ಮಾಡಿಸಿದ್ದರು. ದುರಾದೃಷ್ಟವಶಾತ್ ಸುರೇಶ್​ ಅಂಗಡಿ ವಿಧಿವಶರಾದರು ಎಂದು ಲಿಂಗರಾಜ್​ ಪಾಟೀಲ್​​ ಹೇಳಿದರು.

‘ಸುರೇಶ್ ಅಂಗಡಿ ಕುಟುಂಬಸ್ಥರಿಗೆ ಟಿಕೆಟ್’

ದಿ. ಸುರೇಶ್ ಅಂಗಡಿ ಅವರ ಪತ್ನಿ ಮಂಗಲಾ, ಮಕ್ಕಳಾದ ಸ್ಫೂರ್ತಿ, ಶ್ರದ್ಧಾ ಇವರಲ್ಲಿ ಯಾರಿಗಾದರೂ ಟಿಕೆಟ್ ‌ನೀಡಿ ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್​​​​ ಅವರಲ್ಲಿ ನಾನು ಮನವಿ ಮಾಡಿಕೊಂಡಿದ್ದೇನೆ ಎಂದು ಪಾಟೀಲ್​​ ತಿಳಿಸಿದರು.

Last Updated : Sep 29, 2020, 1:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.