ETV Bharat / state

ಕಬ್ಬು ಬೆಳೆಗಾರರಿಗೆ ತಲೆನೋವಾದ ಸೂಲಂಗಿ: ನೆರೆಯಿಂದ ಮತ್ತೆ ಬರೆ - belagam

ಕಬ್ಬು ಬೆಳೆದ ರೈತ ಈ ಬಾರಿ ಹೈರಾಣಾಗಿದ್ದಾನೆ. ರೈತರಿಗೆ ಇಳುವರಿ ಬರದೇ ಪರದಾಡುವಂತಾಗಿದೆ. ಬೇಸಿಗೆಯಲ್ಲಿ ನೀರಿಲ್ಲದೆ, ಮಳೆಗಾಲದಲ್ಲಿ ಪ್ರವಾಹದಿಂದಾಗಿ ಕಬ್ಬು ಬೆಳೆಗಾರನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

belagam
ಕಬ್ಬು ಬೆಳೆಗಾರರಿಗೆ ತಲೆನೋವಾದ ಸೂಲಂಗಿ
author img

By

Published : Dec 17, 2019, 9:28 AM IST

ಚಿಕ್ಕೋಡಿ: ಕಬ್ಬು ಬೆಳೆಗಾರರ ಸಂಕಟಕ್ಕೆ ಕೊನೆ ಇಲ್ಲದಂತಾಗಿದೆ. ನೆರೆ ಹಾವಳಿಯಿಂದ ಅಳಿದುಳಿದ ಕಬ್ಬಿನ ಬೆಳೆಗೆ ಈಗ ಸೂಲಂಗಿ ಬಂದಿದ್ದು, ಕಬ್ಬು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕಬ್ಬು ಬೆಳೆಗಾರರಿಗೆ ತಲೆನೋವಾದ ಸೂಲಂಗಿ

ಕಳೆದ ಬೇಸಿಗೆಯಲ್ಲಿ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿದ್ದರಿಂದ ನೀರಿಲ್ಲದೆ ಕಬ್ಬು ನಾಶವಾಗಿತ್ತು. ಅದರಲ್ಲೂ ಬಾವಿ, ಬೋರ್​ವೆಲ್​ಗಳಿಂದ ನೀರು ಹರಿಸಿ ಬೆಳೆದ ಕಬ್ಬು ಪ್ರವಾಹಕ್ಕೆ ಹಾಳಾಗಿದೆ. ಈಗ ಉಳಿದ ಕಬ್ಬಿಗೆ ಸೂಲಂಗಿ ಬೆಳೆಯುತ್ತಿರುವುದರಿಂದ ಬೆಳೆದ ಕಬ್ಬು ಬೆಂಡೊಡೆಯುತ್ತಿದೆ. ಕಬ್ಬಿನಲ್ಲಿ ತೂಕ ಕಡಿಮೆಯಾಗುತ್ತಿದೆ. ಇದರಿಂದ ಮತ್ತೆ ನದಿ ತೀರದ ರೈತ ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಬ್ಬು ನಾಟಿ ಮಾಡಿದ 11 ತಿಂಗಳ ಬಳಿಕ ಸೂಲಂಗಿ ಬರುತ್ತದೆ. ಆದರೆ, ಈ ಬಾರಿ 5 ರಿಂದ 8 ತಿಂಗಳ ಅವಧಿಯಲ್ಲೇ ಸೂಲಂಗಿ ಮೂಡಿದೆ. ಸೂಲಂಗಿ ಕಾಣಿಸಿಕೊಳ್ಳಾರಂಭಿಸಿದರೆ ಆದಷ್ಟು ಬೇಗ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಕಳುಹಿಸಬೇಕು. ತಡ ಮಾಡಿದಷ್ಟೂ ಕಬ್ಬು ಬೆಂಡೊಡೆಯಲಾರಂಭಿಸುತ್ತದೆ.

ಒಂದು ಎಕರೆಗೆ 35ರಿಂದ 40 ಟನ್ ಕಬ್ಬಿನ ಫಸಲು ಸಿಗುತ್ತಿದ್ದರೆ, ಸೂಲಂಗಿ ಬಂದಾಗ 24ರಿಂದ 28 ಟನ್ ಮಾತ್ರ ಸಿಗುವ ಸಾಧ್ಯತೆ ಇದೆ. ಮಳೆ, ನೆರೆಯಿಂದ ಈ ಬಾರಿ ಶೇ. 40ರಷ್ಟು ಕಬ್ಬಿನ ಬೆಳೆ ನಾಶವಾಗುದ್ದು, ಉಳಿದ ಕಬ್ಬಿನ ಬೆಳೆಗೆ ಕಬ್ಬು ಕಟಾವು ಮಾಡುವ ಮೊದಲೇ ಸೂಲಂಗಿ ಕಾಣಿಸಿಕೊಂಡಿದೆ.

ಸೂಲಂಗಿ ಕಬ್ಬು ಕಟಾವಿಗೆ ಕಾರ್ಮಿಕರು ಹೆಚ್ಚಿನ ದರ ಕೇಳುತ್ತಾರೆ. ಅಲ್ಲದೇ ಸೂಲಂಗಿ ಕಬ್ಬು ಮೇವಿಗೂ ಬರುವುದಿಲ್ಲ. ಇದು ಕೂಡ ರೈತರ ಆರ್ಥಿಕ ಹಾನಿ ಹೆಚ್ಚಿಸುತ್ತದೆ. ಸೂಲಂಗಿ ಬೆಳೆ ಬಿಸಲಿನ ತಾಪಕ್ಕೆ ಬೆಂಕಿಗೆ ಆಹುತಿಯಾಗುವ ಸಂಭವವೂ ಹೆಚ್ಚಾಗಿದೆ.

ಮುಂಚಿತವಾಗಿ ನಾಟಿ ಮಾಡಿದ ಕಬ್ಬಿಗೆ ಡಿಸೆಂಬರ್ ಅಂತ್ಯದೊಳಗೆ ಹೂ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಈ ವರ್ಷ ಡಿಸೆಂಬರ್​ಗೂ ಮುಂಚೆ ಮತ್ತು ನಂತರ ನಾಟಿ ಮಾಡಿದ ಕಬ್ಬಿನಲ್ಲೂ ಸೂಲಂಗಿ ಹೂ ಕಾಣಿಸಿಕೊಂಡಿದೆ. ಕುಳೆ ಕಬ್ಬಲ್ಲೂ ಈ ಬಾರಿ ಡಿಸೆಂಬರ್​ನಲ್ಲೇ ಹೂ ಬಿಟ್ಟರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ಒಟ್ಟಾರೆ ರೈತರು ಈ ಬಾರಿ ಕಬ್ಬು ಬೆಳೆಯನ್ನು ಮೂರು ಹಂತಗಳಲ್ಲಿ ಕಷ್ಟ ಪಟ್ಟು ಉಳಿಸಿಕೊಂಡು ಬಂದರೂ ಸಹಿತ ಕೊನೆಗೆ ಕೈಗೆ ಸಿಕ್ಕ ತುತ್ತು ಬಾಯಿಗೆ ಸಿಗಲಾರದ ಸ್ಥಿತಿಗೆ ಬಂದಿದೆ. ಕಬ್ಬು ಹಾಳಾಗಿದ್ದು, ಅಲ್ಪ ಸ್ವಲ್ಪ ಉಳಿದ ಕಬ್ಬು ಕಟಾವಿನ ಸ್ಥಿತಿಗೆ ಬಂದರೂ ಸಹಿತ ಕಾರ್ಖಾನೆ ಮಾಲೀಕರು ಕಬ್ಬು ಒಯ್ಯುತ್ತಿಲ್ಲ.

ಇತ್ತ ಸರ್ಕಾರದಿಂದ ಬರಬೇಕಾದ ಸಹಾಯಧನ ಕೂಡಾ ಬರುತ್ತಿಲ್ಲ. ಒಟ್ಟಾರೆ ನದಿ ತೀರದ ಜನರ ಗೋಳು ಮಾತ್ರ ಯಾರು ಕೇಳುತ್ತಿಲ್ಲ. ಈಗ ರೈತರ ಬಾಳು ಬೀದಿಗೆ ಬಿದ್ದಿದ್ದು, ಅವರ ನೋವಿಗೆ ಸರ್ಕಾರ ಸ್ಪಂದಿಸಬೇಕಿದೆ.

Intro:ಕಬ್ಬು ಬೆಳೆಗಾರರಿಗೆ ತಲೆನೋವಾದ "ಸೂಲಂಗಿ" (ಕಬ್ಬಿಗೆ ಗರಿ ಬಿಡುವುದು)
Body:
ಚಿಕ್ಕೋಡಿ :
ಪ್ಯಾಕೇಜ್

ರೈತರಿಗೆ ಮೇಲಿಂದ ಮೇಲೆ ಕಷ್ಟಗಳು ಎದುರಾಗತ್ತಲೇ ಇವೆ. ಇಂತಹ ಸನ್ನಿವೇಶದಲ್ಲಿ ಮತ್ತೊಂದು ಬರೆ ಎಳೆಯುವ ಪ್ರಸಂಗ ಎದುರಾಗಿದೆ.

ಅತಿವೃಷ್ಟಿ, ನೆರೆ ಹಾವಳಿಯಿಂದ ಅಳಿದುಳಿದು ಕಬ್ಬಿನ ಬೆಳೆಗೆ ಈಗ "ಸೂಲಂಗಿ" ಬಂದಿದ್ದು, ಕಬ್ಬು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಈಗಾಗಲೇ ಬೇಸಿಗೆಯಲ್ಲಿ ಕೃಷ್ಣಾ ನದಿ ಸಂಪೂರ್ಣವಾಗಿ ನದಿ ಬತ್ತಿರುವುದರಿಂದ ನದಿ ತೀರದಲ್ಲಿ ಇರುವಂತ ನೂರಾರಿ ಎಕರೆ ಬೆಳೆದು ನಿಂತಿದ್ದ ಕಬ್ಬು ಬೆಳೆ ನಾಶವಾಯಿತು, ಅದರಲ್ಲಿ ಬಾವಿ, ಬೊರವೆಲ್ ಗಳಿಂದ ನೀರು ಉಳಿಸಿಕೊಂಡು ಕಬ್ಬು ಬೆಳೆ ಉಳಿಸಿಕೊಂಡ ರೈತರು ಜೂನ್ ಜುಲೈ ತಿಂಗಳಲ್ಲಿ ನೆರೆ ಬಂದು ಬೆಳೆದ ಕಬ್ಬಿನಲ್ಲಿ ನೀರು ಆವರಿಸಿದ್ದರಿಂದ ಅಲ್ಲಿ ಕೂಡಾ ಕಬ್ಬು ಬೆಳೆ ಸಂಪೂರ್ಣ ಹಾಳಾಗಿದ್ದು, ಅದರಲ್ಲಿ ಉಳಿದ ಕಬ್ಬು ಬೆಳೆಗೆ ಈಗ ಸೂಲಂಗಿ (ಕಬ್ಬಿನ ಗರಿ) ಬೆಳೆಯುತ್ತಿರುವುದರಂದ ಬೆಳೆದ ಕಬ್ಬು ಬೆಂಡೊಡೆಯುತ್ತಿದೆ. ಬೆಳೆದ ಕಬ್ಬಿನಲ್ಲಿ ಈಗ ತೂಕ ಕಡಿಮೆಯಾಗುತ್ತಿದೆ. ಇದರಿಂದ ಮತ್ತೆ ನದಿ ತೀರದ ರೈತ ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಬ್ಬು ನಾಟಿ ಮಾಡಿದ ೧೧ ತಿಂಗಳ ಬಳಿಕ ಸೂಲಂಗಿ ಬರುತ್ತದೆ. ಆದರೆ, ಈ ಬಾರಿ ೫ ರಿಂದ ೮ ತಿಂಗಳ ಅವಧಿಯಲ್ಲೇ ಸೂಲಂಗಿ ಮೂಡಿದೆ. ಸೂಲಂಗಿ ಕಾಣಿಸಿಕೊಳ್ಳಾರಂಭಿಸಿದರೆ ಆದಷ್ಟು ಬೇಗ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಕಳುಹಿಸಬೇಕು. ತಡ ಮಾಡಿದಷ್ಟೂ ಕಬ್ಬು ಬೆಂಡೊಡೆಯಲಾರಂಭಿಸುತ್ತದೆ.

ಒಂದು ಎಕರೆಗೆ ೩೫ ರಿಂದ ೪೦ ಟನ್ ಕಬ್ಬಿಣ ಫಸಲು ಸಿಗುತ್ತಿದ್ದರೆ ಸೂಲಂಗಿ ಬಂದಾಗ ೨೪ ರಿಂದ ೨೮ ಟನ್ ಮಾತ್ರ ಸಿಗುವ ಸಾಧ್ಯತೆ ಇದೆ. ಮಳೆ, ನೆರೆಯಿಂದ ಈ ಬಾರಿ ೪೦% ರಷ್ಟು ಕಬ್ಬಿನ ಬೆಳೆ ನಾಶವಾಗುದ್ದು, ಉಳಿದ ಕಬ್ಬಿನ ಬೆಳೆ ಕಬ್ಬು ಕಟಾವು ಮಾಡುವ ಮೊದಲೇ ಸೂಲಂಗಿ ಕಾಣಿಸಿಕೊಂಡಿದೆ.

ಸೂಲಂಗಿ ಕಬ್ಬು ಕಟಾವಿಗೆ ಕಾರ್ಮಿಕರು ಹೆಚ್ಚಿನ ದರ ಬೇಡುತ್ತಾರೆ. ಅಲ್ಲದೇ ಸೂಲಂಗಿ ಕಬ್ಬು ಮೇವಿಗೂ ಬರುವುದಿಲ್ಲ. ಇದು ಕೂಡ ರೈತರ ಆರ್ಥಿಕ ಹಾನಿ ಹೆಚ್ಚಿಸುತ್ತದೆ. ಸೂಲಂಗಿ ಬೆಳೆ ಬಿಸಲಿನ ತಾಪಕ್ಕೆ ಬೆಂಕಿ ಹತ್ತುತ್ತವೆ. ಇದರಿಂದ ಕಬ್ಬಿನ ಬೆಳೆಗೆ ಬೆಂಕಿ ಹತುವುದರಿಂದ ಬೆಳೆದ ಬೆಳೆಗಳೆಲ್ಲವೂ ಬೆಂಕಿಗಾಹುತಿ ಆಗುವ ಸಾಧ್ಯತೆ ಹೆಚ್ಚು.

ವಿಶೇಷವಾಗಿ ಅಡಸಾಲಿ (ಮುಂಚಿತವಾಗಿ) ನಾಟಿ ಮಾಡಿದ ಕಬ್ಬಿಗೆ ಡಿಸೆಂಬರ್ ಅಂತ್ಯದೊಳಗೆ ಹೂ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಈ ವರ್ಷ ಅಡಸಾಲಿ ಮತ್ತು ಇಕ್ಕಸಾಲಿ(ನಂತರದ ಅವಧಿಯಲ್ಲಿ) ನಾಟಿ ಮಾಡಿದ ಕಬ್ಬಿನಲ್ಲೂ ಸೂಲಂಗಿ ಹೂ ಕಾಣಿಸಿಕೊಂಡಿದೆ. ಕುಳೆ ಕಬ್ಬಲ್ಲೂ ಈ ಬಾರಿ ಡಿಸೆಂಬರ ನಲ್ಲೆ ಹೂ ಬಿಟ್ಟರುವದು ರೈತರ ಆತಂಕಕ್ಕೆ ಕಾರಣವಾಗಿದೆ.

ಒಟ್ಟಾರೆ ರೈತರು ಈ ಬಾರಿ ಕಬ್ಬು ಬೆಳೆಯನ್ನು ಮೂರು ಹಂತಗಳಲ್ಲಿ ಕಷ್ಟ ಪಟ್ಟು ಉಳಿಸಿಕೊಂಡು ಬಂದರೂ ಸಹಿತ ಕೊನೆಗೆ ಕೈಗೆ ಸಿಕ್ಕ ತುತ್ತು ಬಾಯಿಗೆ ಸಿಗಲಾರದ ಸ್ಥಿತಿಗೆ ಬಂದಿದೆ ಗಡಿ ಭಾಗದ ರೈತನ ಜೀವನ. ಈಗಲಾದರೂ ಬೆಳೆದ ಕಬ್ಬಿನ ಬೆಳೆಯನ್ನು ಆದಷ್ಟು ಬೇಗ ಕಟಾವೂ ಮಾಡಿ ಕಾರ್ಖಾನೆಗೆ ಸಾಗಾಣಿಕೆ ಮಾಡಬೇಕೆನುವುದು ರೈತರ ಬೇಡಿಕೆ ಆಗಿದೆ. ಆದರೆ, ಕಾರ್ಖಾನೆಯವರು ಕಬ್ಬಿನ ಬೆಳೆಗಳಿಗೆ ಸಂಪೂರ್ಣ ರಿಕ್ವೈರಿ ಬಂದಿಲ್ಲ ನಾವೂ ಕಬ್ಬು ಕಟಾವೂ ಮಾಡಲೂ ಸಾಧ್ಯವಿಲ್ಲ ಅನ್ನುತ್ತಾರೆ ಕಾರ್ಖಾನೆ ಮಾಲೀಕರು.

ಈಗ ಕಬ್ಬು ಬೆಳೆ ಬೆಳೆದು ನಿಂತಿದ್ದು, ಕಬ್ಬಿಗೆ ಸೂಲಂಗಿ ಬೆಳೆಯುತ್ತಿರುವುದರಿಂದ ಕಬ್ಬು ಬೆಳೆದ ಬೆಳೆಯು ಬೆಂಡು ವಡೆಯುತ್ತಿದ್ದು ಕಬ್ಬಿನ ಇಳುವರಿ ಹಾಗೂ ತೂಕದಲ್ಲಿ ಕಡಿಮೆ ಆಗುತ್ತಿರುವುದರಿಂದ ರೈತ ಕಂಗಾಲಾಗಿದ್ದಾನೆ. ಈ ವರ್ಷ ಪೂರ್ತಿ ಗಡಿ ಭಾಗದ ರೈತರು ಬೆಳೆದ ಬೆಳೆಗಳೆಲ್ಲವೂ ಹಾಳಾಗಿದ್ದು ಅಲ್ಪ ಸ್ವಲ್ಪ ಉಳಿದ ಬೆಳೆಗಳೆಲ್ಲವೂ ಕಟಾವೂ ಸ್ಥಿತಿಗೆ ಬಂದರೂ ಸಹಿತ ಕಾರ್ಖಾನೆ ಮಾಲೀಕರು ಒಯುತ್ತಿಲ್ಲ.

ಇತ್ತ ಸರ್ಕಾರದಿಂದ ಬರಬೇಕಾದ ಸಹಾಯಧನ ಕೂಡಾ ಬರುತ್ತಿಲ್ಲ. ಒಟ್ಟಾರೆ ನದಿ ತೀರದ ಜನರ ಗೋಳು ಮಾತ್ರ ಯಾರು ಕೇಳದೆ ಇರುವ ಸ್ಥಿತಿಯಲ್ಲಿದ್ದಾರೆ. ಈಗ ರೈತರ ಬಾಳು ಬೀದಿಗೆ ಬಿದ್ದಿದ್ದು ಅವರ ನೋವಿಗೆ ಸರ್ಕಾರ ಸ್ಪಂದನೆ ನೀಡಬೇಕಿದೆ.

ಬೈಟ್ 1 : ಹನಮಂತ ಕಣವಿ - ರೈತ (ಲೋಗೋ ಇದೆ)

ಬೈಟ್ 2 : ಶಶಿಕಾಂತ ಜೋಶಿ - ರೈತ ಹೋರಾಟಗಾರ

ಈ ಪ್ಯಾಕೇಜ್ ಗೆ ಸಂಬಂಧ ಪಟ್ಟ ಅತಿವೃಷ್ಟಿ, ‌ಅನಾವೃಷ್ಟಿ ವಿಡಿಯೋಗಳನ್ನು ಬಳಕೆ‌ ಮಾಡಿಕೊಳ್ಳಿ

Conclusion:ಸಂಜಯ ‌ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.