ಚಿಕ್ಕೋಡಿ : ಮೂಡಲಗಿ ತಾಲೂಕಿನಲ್ಲಿ ಜವಾಹರ ನವೋದಯ ಶಾಲೆಗೆ ಪ್ರವೇಶಕ್ಕಾಗಿ ನಡೆದ ಪರೀಕ್ಷೆಯಲ್ಲಿ2325 ಮಕ್ಕಳು ಪರೀಕ್ಷೆ ಬರೆಯುವ ಮೂಲಕ ರಾಜ್ಯದಲ್ಲಿಯೇ ಅತಿ ಹೆಚ್ಚು ಮಕ್ಕಳು ಭಾಗವಹಿಸಿರುವುದಾಗಿ ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ತಿಳಿಸಿದ್ದಾರೆ.
ಪಟ್ಟಣದಲ್ಲಿ ಜರುಗಿದ ಕೇಂದ್ರಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, 2012 ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳು ನವೋದಯ ಪರೀಕ್ಷೆಗೆ ಕುಳಿತುಕೊಳ್ಳುತ್ತಿರುವುದು ನಮ್ಮ ತಾಲೂಕಿನ ಹೆಮ್ಮೆ ಅದರ ಜೊತೆಗೆ ಶಿಕ್ಷಕರು ಪಾಲಕರು ಬೇಕಾದ ಕಡತಗಳನ್ನು ಸಂಗ್ರಹಿಸಿ ಬೇಕಾದ ವೇಳೆಗೆ ಫಾರ್ಮ ತುಂಬಿಸಿ ಕೊಟ್ಟು, ಮಗುವಿಗೆ ಪರೀಕ್ಷೆಗೆ ಕುಳಿತುಕೊಳ್ಳಲು ಸಹಕಾರ ನೀಡಿದ್ದಾರೆ.
ಮಗುವಿನಲ್ಲಿರುವ ಸೂಕ್ತ ಪ್ರತಿಭೆಗೆ ಶಿಕ್ಷಕರು, ಪಾಲಕರು, ಪೋಷಕರು ಸೂಕ್ತ ಪ್ರಾತಿನಿಧ್ಯ ಕೊಡಿಸುವ ಕಾರ್ಯ ಮಾಡಬೇಕು. ಮಕ್ಕಳಿಗೆ ಆಸ್ತಿ ಮಾಡದೆ ಮಕ್ಕಳನ್ನೆ ಆಸ್ತಿಯನ್ನಾಗಿಸಬೇಕು. ಮುಂಬರುವ ದಿನಗಳಲ್ಲಿ ಸ್ಪರ್ಧಾತ್ಮಕತೆ ಇದ್ದರೆ ಭವಿಷ್ಯತ್ತಿನಲ್ಲಿ ಉತ್ತಮ ಪ್ರಜೆಗಳ ನಿರ್ಮಾಣ ಕಾರ್ಯ ಮಾಡಲು ಸಾಧ್ಯ ಎಂದು ಹೇಳಿದರು.
ಮುಂಜಾಗೃತ ಕ್ರಮವಾಗಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದು ಸ್ಥಳೀಯ ಪೋಲಿಸ್ ಠಾಣೆಯಿಂದ ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.