ETV Bharat / state

ಕೊರೊನಾ ಬಳಿಕ ಶಾಲೆ ತೆರೆದರೂ ತಪ್ಪದ ಕಂಟಕ.. 6 ಕಿ.ಮೀ ನಡೆದೇ ಸಾಗುವ ಮಕ್ಕಳು - Students

ಕೊರೊನಾ ನಂತರ ಶಾಲೆಗಳು ಆರಂಭವಾಗಿದ್ದು, ಮಕ್ಕಳಿಗೆ ಈಗಲೂ ಸಮಸ್ಯೆ ಎದುರಾಗಿದೆ. ಶಾಲೆ ಸಮಯಕ್ಕೆ ಸರಿಯಾದ ಬಸ್​ ವ್ಯವಸ್ಥೆ ಇಲ್ಲದೇ 6 ಕಿ.ಮೀ ದೂರ ನಡೆದುಕೊಂಡೇ ಸಾಗಬೇಕಾದ ಪರಿಸ್ಥಿತಿ ಎದುರಾಗಿದೆ.

students-are-travels-6-km-by-walk-for-a-school
ಕೊರೊನಾ ಬಳಿಕ ಶಾಲೆ ತೆರೆದರೂ ತಪ್ಪದ ಕಂಟಕ
author img

By

Published : Oct 26, 2021, 2:48 PM IST

ಬೆಳಗಾವಿ: ಎರಡು ವರ್ಷಗಳ ಬಳಿಕ ನಿನ್ನೆಯಿಂದ ಶಾಲೆಗಳು ಪುನರಾರಂಭಗೊಂಡಿದ್ದು, ವಿದ್ಯಾರ್ಥಿಗಳು ಶಾಲೆ ದಾರಿ ಹಿಡಿದಿದ್ದಾರೆ. ಆದರೆ, ಜಿಲ್ಲೆಯ ಬೈಲಹೊಂಗಲ ಪಟ್ಟಣದ ಹೊರವಲಯ ವಿದ್ಯಾರ್ಥಿಗಳು ಮಾತ್ರ 6 ಕಿ.ಮೀ ನಡೆದುಕೊಂಡೇ ಶಾಲೆ ತಲುಪಬೇಕಾದ ದುಃಸ್ಥಿತಿ ಎದುರಾಗಿದೆ.

ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಇಲ್ಲದಿರುವುದನ್ನು ಖಂಡಿಸಿ ಬೈಲಹೊಂಗಲ ಪಟ್ಟಣದ ಹೊರವಲಯದಲ್ಲಿ ವಿದ್ಯಾರ್ಥಿಗಳ ಜೊತೆಗೆ ಪೋಷಕರು ಪ್ರತಿಭಟನೆ ನಡೆಸಿ ಆಕ್ರೋಶ ‌ವ್ಯಕ್ತಪಡಿಸಿದ್ದಾರೆ.

ಬಸ್ ಸಂಚಾರಕ್ಕೆ ಆಗ್ರಹಿಸಿ ಗ್ರಾಮಸ್ಥರು, ವಿದ್ಯಾರ್ಥಿಗಳ ಪ್ರತಿಭಟನೆ

ಬೈಲಹೊಂಗಲ ಪಟ್ಟಣದ ಹೊರವಲಯದಲ್ಲಿರುವ ಬಸವೇಶ್ವರ ಬಡಾವಣೆಯ ವಿದ್ಯಾರ್ಥಿಗಳು ಪಕ್ಕದ ಬೇವಿನಕೊಪ್ಪ ಗ್ರಾಮದ ಸರ್ಕಾರಿ ಶಾಲೆಗೆ ತೆರಳುತ್ತಾರೆ.
ಬೈಲಹೊಂಗಲ - ಬೇವಿನಕೊಪ್ಪ ಮಧ್ಯೆ ಯಾವುದೇ ಬಸ್ ಸಂಚಾರವಿಲ್ಲ. ಹೀಗಾಗಿ ಇಲ್ಲಿನ ಮಕ್ಕಳು 6 ಕಿ.ಮೀ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಇದೆ. ಅಪರೂಪಕ್ಕೆ ಬಸ್​ಗಾಗಿ ನಿತ್ಯ 2 ಗಂಟೆ ಕಾಯಬೇಕಾದ ಪರಿಸ್ಥಿತಿ ಇದೆ. ಅದೂ ಸಹ ಶಾಲೆ ಆರಂಭವಾಗುವ ಸಮಯಕ್ಕೆ ಯಾವುದೇ ಬಸ್ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ಶಾಲಾ ಸಮಯದಲ್ಲಿ ವಿಶೇಷ ಬಸ್ ಬಿಡುಗಡೆ ಮಾಡುವಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸೂರ್ಯನಗರ ಬಡಾವಣೆಯ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷನಿಂದ ಹಲ್ಲೆ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.