ಬೆಳಗಾವಿ: ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಒತ್ತಾಯಿಸಿ ಜಾರಕಿಹೊಳಿ ಬೆಂಬಲಿಗರು ನಗರದಲ್ಲಿ ಒತ್ತಾಯಿಸಿದರು. ಈ ವೇಳೆ ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಗೋಕಾಕ್ನಲ್ಲಿ ಶಾಲಾ-ಕಾಲೇಜುಗಳು ಹಾಗೂ ಬಸ್ಗಳನ್ನು ಬಂದ್ ಮಾಡಿದ್ದರಿಂದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದರು.
ನಗರದಲ್ಲಿ ಪ್ರತಿಭಟನೆ ಕೈಗೊಂಡ ಜಾರಕಿಹೊಳಿ ಬೆಂಬಲಿಗರು, ನಮ್ಮ 'ಸಾಹುಕಾರ್'ಗೆ ನ್ಯಾಯ ಒದಗಿಸಲೇಬೇಕು ಎಂದು ಒತ್ತಾಯಿಸಿ ಶಾಲಾ -ಕಾಲೇಜು ಹಾಗೂ ಬಸ್ಗಳನ್ನು ಬಂದ್ ಮಾಡಿಸಿದರು. ಹೀಗಾಗಿ ಬೇರೆ ಬೇರೆ ಸ್ಥಳಗಳಿಂದ ತಾಲೂಕಿಗೆ ಆಗಮಿಸಿದ್ದ ಸಾಕಷ್ಟು ವಿದ್ಯಾರ್ಥಿಗಳು ಸುಡುಬಿಸಿಲಿನಲ್ಲಿಯೇ ನಡೆದು ತಮ್ಮೂರಿಗೆ ತೆರಳಿದ್ದಾರೆ.
ಇದನ್ನೂ ಓದಿ: ಅನುದಾನ ಬಳಕೆಯಲ್ಲಿ ಕೇಂದ್ರಕ್ಕೆ ತಪ್ಪು ಮಾಹಿತಿ ನೀಡಿಲ್ಲ; ಸದನದಲ್ಲಿ ಶಂಕರ್ ಬೆಂಬಲಕ್ಕೆ ಬಂದ ಡಿಸಿಎಂ ಕಾರಜೋಳ
ಕೆಲವು ವಿದ್ಯಾರ್ಥಿಗಳು ಟ್ರ್ಯಾಕ್ಟರ್ ಟ್ರೈಲರ್ಗಳಲ್ಲಿ ಹಾಗೂ ಆಟೋಗಳಲ್ಲಿ ಮನೆಗಳಿಗೆ ತೆರಳಿದ್ದರೆ, ಉಳಿದ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿಯೇ ಮನೆಗೆ ಹೋದರು.