ETV Bharat / state

ಡೆಪ್ಟೇಷನ್ ಪದ್ದತಿಗೆ ಇನ್ಮುಂದೆ ಕಠಿಣ ನಿಯಮ, ಮಾತೃ ಇಲಾಖೆಯಲ್ಲೇ ಕೆಲಸ ಮಾಡುವಂತೆ ಕ್ರಮ: ಸಿಎಂ - ಡೆಪ್ಟೇಷನ್ ಪದ್ದತಿ

ಡೆಪ್ಟೇಷನ್ ಯಾವಾಗ ಮಾಡಬೇಕು, ಅಗತ್ಯವೇನು, ಎಷ್ಟು ಅವಧಿಗೆ ಮಾಡಬೇಕು ಎನ್ನುವುದನ್ನು ನಿರ್ಧರಿಸುವಂತೆ ಆಡಳಿತ ಸುಧಾರಣಾ ಇಲಾಖೆಗೆ ಸೂಚನೆ ನೀಡುತ್ತೇನೆ. ಈಗಿರುವ ನಿಯಮದಡಿ ಡೆಪ್ಟೇಷನ್ ಮೇಲೆ ಹೋಗಲು ಸುಲಭವಾದ ಮಾರ್ಗವಿದೆ, ಅದನ್ನು ಕಠಿಣ ಮಾಡಲಿದ್ದೇನೆ ಎಂದು ಸಿಎಂ ಹೇಳಿದ್ದಾರೆ.

Strict rule for deptation system henceforth
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : Dec 22, 2022, 1:02 PM IST

ಬೆಂಗಳೂರು/ಬೆಳಗಾವಿ: ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ನಿಯೋಜನೆ ಮೇರೆಗೆ ಹೋಗಲು ಇರುವ ಸರಳ ನಿಯಮವನ್ನು ಕಠಿಣಗೊಳಿಸಿ ಆಯಾ ಇಲಾಖೆಗೆ ನೇಮಕಗೊಂಡ ಅಧಿಕಾರಿಗಳು ಆಯಾ ಇಲಾಖೆಯಲ್ಲಿಯೇ ಕರ್ತವ್ಯ ನಿರ್ವಹಿಸಬೇಕು. ಬೇರೆ ಇಲಾಖೆಗೆ ನಿಯೋಜನೆಗೊಂಡವರು ಕಾಲಮಿತಿಯಲ್ಲೇ ಮಾತೃ ಇಲಾಖೆಗೆ ಮರಳಿ ಕರ್ತವ್ಯ ನಿರ್ವಹಿಸುವ ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಪ್ರಶ್ನೆಗೆ ಉತ್ತರಿಸಿದ ಸಿಎಂ, ನಿಯೋಜನೆ ಮೇರೆಗೆ ಬೇರೆ ಇಲಾಖೆಗೆ ವರ್ಗಾವಣೆ ಮಾಡಿಸಿಕೊಳ್ಳುವ ಅವಕಾಶ ಮಾಡಿಕೊಂಡು ಆಡಳಿತದಲ್ಲಿ ಸಣ್ಣ ಕಿಟಟಿ ಮಾಡಿ ಎಲ್ಲರೂ ನುಗ್ಗಲು ಯತ್ನಿಸುತ್ತಿದ್ದಾರೆ. ಬಹಳ ವರ್ಷದಿಂದ ಇದು ನಡೆಯುತ್ತಾ ಬಂದಿದೆ. ಅಧಿಕಾರಿಗಳು ತಮಗೆ ಬೇಕಾದಾಗ ಈ ರೀತಿ ಮಾಡಿದಾಗ ನಾವು ಸುಮ್ಮನಿರುತ್ತೇವೆ. ಆದರೆ, ಇದು ದೊಡ್ಡ ಪ್ರಮಾಣದಲ್ಲಿ ಆಗುತ್ತಿದೆ.

ಇದನ್ನೂ ಓದಿ: ಕೊರೊನಾ ಭೀತಿ: ಮುಂಜಾಗ್ರತಾ ಕ್ರಮದ ಬಗ್ಗೆ ಚರ್ಚಿಸಲು ಸಿಎಂ ಮಹತ್ವದ ಸಭೆ

ಡೆಪ್ಟೇಷನ್ ಯಾವಾಗ ಮಾಡಬೇಕು, ಅಗತ್ಯವೇನು, ಎಷ್ಟು ಅವಧಿಗೆ ಮಾಡಬೇಕು ಎನ್ನುವುದನ್ನು ನಿರ್ಧರಿಸುವಂತೆ ಆಡಳಿತ ಸುಧಾರಣಾ ಇಲಾಖೆಗೆ ಸೂಚನೆ ನೀಡುತ್ತೇನೆ. ಈಗಿರುವ ನಿಯಮದಡಿ ಡೆಪ್ಟೇಷನ್ ಮೇಲೆ ಹೋಗಲು ಸುಲಭವಾದ ಮಾರ್ಗವಿದೆ, ಅದನ್ನು ಕಠಿಣ ಮಾಡಲಿದ್ದೇನೆ. ಎಲ್ಲರನ್ನೂ ಮಾತೃ ಇಲಾಖೆಗೆ ಕರೆಸುವ ಕೆಲಸ ಮಾಡಲಿದ್ದು, ಡೆಪ್ಟೇಷನ್ ಬಿಗಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಇಂಜಿನಿಯರ್, ಅಕೌಂಟ್ಸ್ ಸೇರೆ ಬೇರೆ ಬೇರೆ ಅಧಿಕಾರಿಗಳನ್ನು ಅವರವರ ಪರಿಣಿತಿ ವ್ಯಾಪ್ತಿಯಲ್ಲಿ ಇರುವಂತೆ ನೋಡಿಕೊಳ್ಳಲಾಗುತ್ತದೆ ಎಂದರು.

ವೆಟರಿನರಿ ಡಾಕ್ಟರ್​ನ ಆಡಳಿತಕ್ಕೆ ನೇಮಕ ಮಾಡುವುದು ಸರಿಯಲ್ಲ.ಅಂತವರನ್ನು ತೆಗೆದುಹಾಕಿದಾಗ ಬಹಳ ಒತ್ತಡ ಬರಲಿದೆ. ಆದರೂ ನಾವು ಈ ಬಾರಿ ಮಾತೃ ಇಲಾಖೆಗೆ ಕರೆಸುವ ಕೆಲಸ ಮಾಡಿದ್ದೇವೆ. ಇನ್ಮುಂದೆ ಡೆಪ್ಟೇಷನ್ ನಿಯಮವನ್ನು ಕಠಿಣಗೊಳಿಸಲಿದ್ದೇವೆ ಎಂದು ಭರವಸೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.