ETV Bharat / state

ಶಿವಬೋಧರಂಗ ಸಿದ್ಧ‌ ಸಂಸ್ಥಾನ ಮಠದ ಶ್ರೀ ಪಾದಬೋಧ ಸ್ವಾಮೀಜಿ ಇನ್ನಿಲ್ಲ

ಮೂಡಲಗಿ ಹಾಗೂ ಸುತ್ತಲಿನ ಭಾಗಗಳಲ್ಲಿ ಹೆಚ್ಚು ಪ್ರಸಿದ್ಧರಾಗಿದ್ದ ಶ್ರೀಗಳ ಅಗಲಿಕೆಯಿಂದ ತಾಲೂಕಿನಲ್ಲಿ ನೀರವ ಮೌನ ಆವರಿಸಿದೆ. ಸ್ವಾಮೀಜಿಯವರ ಅಂತ್ಯಕ್ರಿಯೆ ಲಾಕ್ ಡೌನ್ ಹಿನ್ನೆಲೆ ಕೆಲವೇ ಜನರ ಸಮ್ಮುಖದಲ್ಲಿ ನಿನ್ನೆ ರಾತ್ರಿಯೇ ನೆರವೇರಿಸಲಾಯಿತು.

author img

By

Published : Apr 20, 2020, 9:18 AM IST

ಶಿವಬೋಧರಂಗ ಸಿದ್ಧ‌ ಸಂಸ್ಥಾನ ಮಠದ ಶ್ರೀ ಪಾದಬೋಧ ಸ್ವಾಮೀಜಿ ಇನ್ನಿಲ್ಲ
ಶಿವಬೋಧರಂಗ ಸಿದ್ಧ‌ ಸಂಸ್ಥಾನ ಮಠದ ಶ್ರೀ ಪಾದಬೋಧ ಸ್ವಾಮೀಜಿ ಇನ್ನಿಲ್ಲ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಮೂಡಲಗಿ ಶ್ರೀ ಶಿವಬೋಧರಂಗ ಸಿದ್ಧ‌ ಸಂಸ್ಥಾನ ಮಠದ 12ನೇ ಪೀಠಾಧಿಪತಿ ಶ್ರೀಪಾದಬೋಧ ಸ್ವಾಮೀಜಿ (66) ಅವರು ಭಾನುವಾರ ದೈವಾಧೀನರಾಗಿದ್ದಾರೆ.

ಮೂಡಲಗಿ ಹಾಗೂ ಸುತ್ತಲಿನ ಭಾಗಗಳಲ್ಲಿ ಹೆಚ್ಚು ಪ್ರಸಿದ್ಧರಾಗಿದ್ದ ಶ್ರೀಗಳ ಅಗಲಿಕೆಯಿಂದ ತಾಲೂಕಿನಲ್ಲಿ ನೀರವ ಮೌನ ಆವರಿಸಿದೆ. ಶ್ರೀಗಳ ಅಂತ್ಯಕ್ರಿಯೆ ಲಾಕ್ ಡೌನ್ ಹಿನ್ನೆಲೆ ಕೆಲವೇ ಜನರ ಸಮ್ಮುಖದಲ್ಲಿ ನಿನ್ನೆ ರಾತ್ರಿಯೇ ನೆರವೇರಿಸಲಾಯಿತು.

ಮೂಲತಃ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ನರಸಿಂಹವಾಡಿಯಲ್ಲಿ 1954 ಮಾ.30 ರಂದು ಜನಿಸಿದ ಶ್ರೀಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ನರಸಿಂಹವಾಡಿಯಲ್ಲಿ‌ ಪೂರೈಸಿದ್ದರು. ಸಾಂಗಲಿಯ ಕಸ್ತೂರ ಬಾ ಕಾಲೇಜಿನಲ್ಲಿ ಬಿ ಎಸ್ ಸಿ ಪದವಿ ಪಡೆದುಕೊಂಡಿದ್ದರು. 1971ರಲ್ಲಿ ಮೂಡಲಗಿ ಸಿದ್ಧಸಂಸ್ಥಾನ ಮಠದ 12 ನೇ ಪೀಠಾಧಿಪತಿಗಳಾಗಿ ಪೀಠ ಅಲಂಕರಿಸಿದ್ದರು.

ಸ್ವಾಮೀಜಿ ಅಗಲಿಕೆಯಿಂದ ಹಲವಾರು ಭಕ್ತರು, ಸ್ವಾಮೀಜಿ ದರ್ಶನ ಪಡೆಯಲು ಬಂದರೂ ಸಹಿತ ಆಡಳಿತ ಮಂಡಳಿಯವರು ಲಾಕ್ ಡೌನ್ ಇದ್ದ ಹಿನ್ನೆಲೆಯಲ್ಲಿ ಯಾರಿಗೂ ಸ್ವಾಮೀಜಿ ದರ್ಶನಕ್ಕೆ ಅನುಮತಿ ನೀಡಲಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.