ಬೆಳಗಾವಿ: ಹೈದರಾಬಾದ್-ಬೆಳಗಾವಿ ಮಾರ್ಗ ಮಧ್ಯೆ ಸಂಚರಿಸುವ ಸ್ಪೈಸ್ ಜೆಟ್ ವಿಮಾನ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ರಾಂಗ್ ರನ್ ವೇನಲ್ಲಿ ಲ್ಯಾಂಡ್ ಆದ ಘಟನೆ ನಿನ್ನೆ (ಭಾನುವಾರ) ನಡೆದಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ರಾಂಗ್ ರನ್ವೇನಲ್ಲಿ ವಿಮಾನ ಲ್ಯಾಂಡ್ ಆದರೂ, ಪೈಲಟ್ ಹಾಗೂ ಪ್ರಯಾಣಿಕರು ಸುರಕ್ಷಿತವಾಗಿ ಹೊರಬಂದಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣದ 26 ನೇ ರನ್ ವೇನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ 8ರ ರನ್ ವೇನಲ್ಲಿ ಲ್ಯಾಂಡ್ ಆಗಿದೆ. ರನ್ ವೇ 26 ರಲ್ಲಿ ಈ ಸಮಯದಲ್ಲಿ ಬೇರೆ ವಿಮಾನಗಳ ಲ್ಯಾಂಡ್ ಇಲ್ಲದಿದ್ದಕ್ಕೆ ದುರಂತ ತಪ್ಪಿದೆ.
ಪ್ರಕರಣವನ್ನು ಏರ್ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಶನ್ ಬ್ಯೂರೋ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಅಲ್ಲದೇ, ಅಜಾಗರೂಕತೆ ತೋರಿದ ಪೈಲಟ್ಗಳನ್ನು ಭಾರತೀಯ ವಿಮಾನ ಅಪಘಾತ ತನಿಖಾದಳ ತನಿಖೆಗೆ ಒಳಪಡಿಸಿದೆ.