ETV Bharat / state

ಕೊಲ್ಲಾಪುರ್ ಚಪ್ಪಲಿ ತಯಾರಕರಿಗೆ ಸಂಕಷ್ಟ: ಪಾರಂಪರಿಕ ಕುಶಲಕರ್ಮಿಗಳಿಗೆ ಬೇಕಿದೆ ಸರ್ಕಾರದ ನೆರವು

ಕೊಲ್ಲಾಪುರ್ ತೊಗಲಿನ ಚಪ್ಪಲಿಗೆ ಬೇಡಿಕೆ ಕಡಿಮೆಯಾಗುತ್ತಿದ್ದು, ಚರ್ಮೋದ್ಯೋಗ ನಂಬಿಕೊಂಡಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಆದಷ್ಟು ಬೇಗನೆ ಸರ್ಕಾರ ಪಾರಂಪರಿಕ ಕುಶಲಕರ್ಮಿಗಳ ನೆರವಿಗೆ ಬರುವಂತೆ ಆಗ್ರಹಿಸಿದ್ದಾರೆ.

a-special-story-about-kollapur-leather-footwear-makers
ಕೊಲ್ಲಾಪುರ್ ಚಪ್ಪಲಿ ತಯಾರಕರಿಗೆ ಸಂಕಷ್ಟ: ಪಾರಂಪರಿಕ ಕುಶಲಕರ್ಮಿಗಳಿಗೆ ನೆರವಾಬೇಕಿದೆ ಸರ್ಕಾರ
author img

By ETV Bharat Karnataka Team

Published : Nov 21, 2023, 2:15 PM IST

Updated : Nov 21, 2023, 2:53 PM IST

ಕೊಲ್ಲಾಪುರ್ ಚಪ್ಪಲಿ ತಯಾರಕರಿಗೆ ಸಂಕಷ್ಟ: ಪಾರಂಪರಿಕ ಕುಶಲಕರ್ಮಿಗಳಿಗೆ ನೆರವಾಬೇಕಿದೆ ಸರ್ಕಾರ

ಚಿಕ್ಕೋಡಿ(ಬೆಳಗಾವಿ): ದೇಶ, ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಕೊಲ್ಲಾಪುರ್ ತೊಗಲಿನ ಚಪ್ಪಲಿ ತಯಾರಕರ ಪರಿಸ್ಥಿತಿ ಸದ್ಯ ದುಸ್ಥಿತಿಯಾಗಿದ್ದು, ಸರ್ಕಾರವು ಬರುವ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಮೋದ್ಯೋಗ ನಡೆಸುತ್ತಿರುವ ಕುಟುಂಬಗಳ ಕುರಿತು ಚರ್ಚಿಸಿ ನಮಗೆ ನ್ಯಾಯ ಒದಗಿಸಿ ಕೊಡಬೇಕೆಂದು ಕುಶಲಕರ್ಮಿಗಳು ಒತ್ತಾಯಿಸುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಧುಬಾವಿ ಗ್ರಾಮ ಹಾಗೂ ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಪ್ಪಲಿಯನ್ನು ತಯಾರಿಸಿ ಮಾರುಕಟ್ಟೆಗಳಿಗೆ ಮಾರಾಟ ಮಾಡುತ್ತಾರೆ. ಆದರೆ ಆಧುನಿಕತೆಯಿಂದ ದಿನದಿನಕ್ಕೆ ಚರ್ಮದಿಂದ ತಯಾರಿಸಿದ ಚಪ್ಪಲಿ ಬೇಡಿಕೆ ಕಡಿಮೆಯಾಗುತ್ತಿದ್ದು ಮತ್ತು ಸರ್ಕಾರಗಳ ಹಿತಾಶಕ್ತಿ ಕೊರತೆಯಿಂದ ಚರ್ಮೋದ್ಯೋಗವನ್ನು ನಂಬಿಕೊಂಡಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಆದಷ್ಟು ಬೇಗನೆ ಸರ್ಕಾರ ಪಾರಂಪರಿಕ ಕುಶಲಕರ್ಮಿಗಳ ನೆರವಿಗೆ ಬರುವಂತೆ ಮನವಿ ಮಾಡಿದ್ದಾರೆ.

ಅಖಿಲ ಕರ್ನಾಟಕ ಚರ್ಮಕಾಗ ಸಮಾಜ ಮಹಾ ಒಕ್ಕೂಟ ರಾಜ್ಯಾಧ್ಯಕ್ಷ ಡಾ.ಅನಿಲ್ ಸೌದಾಗರ್ ಮಾತನಾಡಿ, "ಕರ್ನಾಟಕ ರಾಜ್ಯದಲ್ಲಿ 18 ಲಕ್ಷ ಜನ ಚರ್ಮಕುಶಲಕರ್ಮಿಗಳಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 1 ಲಕ್ಷ 52 ಸಾವಿರ ಕುಟುಂಬಗಳು ವಾಸಿಸುತ್ತಿದ್ದಾರೆ. ಅಥಣಿ, ರಾಯಭಾಗ, ಬೆಳಗಾವಿ ಗ್ರಾಮೀಣ, ನಿಪ್ಪಾಣಿ, ಕಾಗವಾಡ ಭಾಗದಲ್ಲಿ ಚರ್ಮ ಉದ್ಯೋಗವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ತಯಾರಾಗಿರುವ ಚಪ್ಪಲಿಗಳು ನೆದರ್ಲೆಂಡ್, ಇಟಲಿ, ಸಿಂಗಾಪುರ್, ಬ್ಯಾಂಕಾಕ್, ಅಮೆರಿಕ, ಲಂಡನ್‌ಗೆ ರಫ್ತು ಮಾಡಿ ಹೆಸರುವಾಸಿಯಾಗಿವೆ. ದೇಶದಲ್ಲಿ ಬಾಂಬೆ, ಕೋಲ್ಕತ್ತಾ, ಚೆನ್ನೈ, ಅಹಮದಾಬಾದ್​, ದೆಹಲಿ ಮಾರುಕಟ್ಟೆಗಳಿಗೆ ಸದ್ಯ ನಾವು ರಫ್ತು ಮಾಡುತ್ತೇವೆ. ಆದರೆ ಸರಕಾರ ವಿದೇಶಗಳಿಗೆ ರಫ್ತು ನಿಲ್ಲಿಸುವುದರಿಂದ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ. ಇದರಿಂದ ತಯಾರಕರಿಗೆ ತಾವು ಮಾಡಿದ ಖರ್ಚು ಭರಿಸುವುದು ಹೊರೆಯಾಗಿದೆ. ಆದಷ್ಟು ಬೇಗನೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಚರ್ಮೋದ್ಯೋಗ ಮೇಲೆ ವಿಧಿಸಿದ ಜಿಎಸ್‌ಟಿಯನ್ನು ಹಿಂಪಡೆದು, ಮತ್ತೆ ವಿದೇಶಗಳಿಗೆ ರಪ್ತು ಮಾಡಲು ಅನುಮತಿ ನೀಡಬೇಕು" ಎಂದು ಕೇಳಿಕೊಂಡರು.

"ಕೊಲ್ಲಾಪುರಿ ಬ್ರಾಂಡ್​ನ ಚಪ್ಪಲಿ ತಯಾರಾಗುವುದು ಅಥಣಿಯಲ್ಲಿ. ಆದರೆ ಹೆಸರು ಬಂದಿದ್ದು ಮಾತ್ರ ಕೊಲ್ಲಾಪುರ್ ಅಂತ. 12ನೇ ಶತಮಾನದಿಂದಲೂ ಈ ಉದ್ಯೋಗವನ್ನು ನಮ್ಮ ಸಮುದಾಯ ಮಾಡಿಕೊಂಡು ಬರುತ್ತಿದೆ. ಗಡಿ ಹೊಂದಿರುವ ಮಹಾರಾಷ್ಟ್ರದಲ್ಲಿ ಮಾರುಕಟ್ಟೆ ಇರುವುದರಿಂದ, ಅಥಣಿ ಮಾರುಕಟ್ಟೆಯಿಂದ ಅಲ್ಲಿ ಮಹಾರಾಷ್ಟ್ರ ಕೊಲ್ಲಾಪುರದಲ್ಲಿ ಮಾರಲಾಗುತ್ತಿತ್ತು. ಕೊಲ್ಲಾಪುರದಿಂದ ದೇಶ ವಿದೇಶಗಳಲ್ಲಿ ರಪ್ತು ಆಗಿರೋದ್ರಿಂದ ಕೊಲ್ಲಾಪುರಿ ಹೆಸರೆಂದು ಬ್ರಾಂಡ್ ಆಗಿದೆ. ತಯಾರಕರು ನಾವು, ಆದರೆ ಹೆಸರು ಮಾತ್ರ ಬೇರೆಯವರಾಗಿದೆ. ಈ ಚಪ್ಪಲಿಗಳು ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿದೆ" ಎಂದರು.

"ವಿದೇಶಗಳಿಗೆ ಹೋಗುವ ಚಪ್ಪಲಿಗಳನ್ನು ಸದ್ಯ ಸರ್ಕಾರಗಳು ರಫ್ತು ನಿರ್ಬಂಧ ಮಾಡಿದೆ. ಈ ಚಪ್ಪಲಿಗಳಿಗೆ 12% ಜಿಎಸ್​ಟಿ ಇರುವುದರಿಂದ ಮಾರುಕಟ್ಟೆಯಲ್ಲಿ ಅತಿ ದುಬಾರಿಯಾಗಿದ್ದು, ಜನರು ಕೂಡ ಖರೀದಿಗೆ ಹಿಂದೆ ಮುಂದೆ ನೋಡುತ್ತಿದ್ದಾರೆ. ಈ ಜಿಎಸ್‌ಟಿಯನ್ನು ವಿನಾಯಿತಿ ನೀಡಬೇಕು. ಕರಕುಶಲ ನಿಗಮದಲ್ಲಿ ಬರುವುದರಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್ ಅವರಿಗೆ ಈ ಕುರಿತು ಮನವಿ ಪತ್ರವನ್ನು ಸಲ್ಲಿಸಲಾಗಿದೆ. ಇದುವರೆಗೆ ಯಾವುದೇ ಜಿಎಸ್​ಟಿಯಲ್ಲಿ ಸಡಿಲಿಕೆ ಆಗಿಲ್ಲ. ಆದಷ್ಟು ಬೇಗನೆ ಚರ್ಮೋದ್ಯೋಗ ಕುರಿತಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುತುವರ್ಜಿ ವಹಿಸಬೇಕು" ಎಂದು ಹೇಳಿದರು.

ಆಧುನಿಕತೆ ಬೆಳೆದಂತೆ ಪಾರಂಪರಿಕವಾಗಿ ಪಾದರಕ್ಷೆ ಬೇಡಿಕೆ ಕಡಿಮೆಯಾಗಿದೆ. ಈ ಕಾಯಕವನ್ನು ನಂಬಿದ ಸಮುದಾಯದ ಸಮಸ್ಯೆ ಬಗ್ಗೆ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಲು ಸಭಾಪತಿ ಯು.ಟಿ.ಖಾದರ್ ಸಮಯ ನೀಡಬೇಕು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸರ್ಕಾರ ಗಮನಕ್ಕೆ ತರುವಂತೆ ಅನಿಲ್ ಕುಮಾರ ಸೌದಾಗರ ಆಗ್ರಹಿಸಿದರು.

ಹಿಂದಿನಿಂದ ನಡೆದು ಬಂದ ಈ ಉದ್ಯಮ ಸದ್ಯ ನೆಲಕಚ್ಚಿದ್ದು, ಈ ಬಗ್ಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಿದರೆ ಮತ್ತೆ ಮಾರುಕಟ್ಟೆಯಲ್ಲಿ ಕೊಲ್ಲಾಪುರಿ ಚಪ್ಪಲಿಗಳು ರಾರಾಜಿಸಲಿವೆ.

ಇದನ್ನೂ ಓದಿ: ನೊಗ, ಉಳುಮೆ, ಮುದ್ದೆ-ಉಪ್ಸಾರಿನ ಪ್ರೀ ವೆಡ್ಡಿಂಗ್ ಶೂಟ್​; ಮದುವೆಗೆ ರೈತನ ಕರೆಯೋಲೆ - ವಿಡಿಯೋ

Last Updated : Nov 21, 2023, 2:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.