ಬೆಳಗಾವಿ: ಸುಪ್ರೀಂಕೋರ್ಟ್ನಲ್ಲಿ ಅನರ್ಹ ಶಾಸಕರ ತೀರ್ಪು ಹಿನ್ನಲೆ, ಜಿಲ್ಲೆಯ ಗೋಕಾಕ್ ಕ್ಷೇತ್ರದಾದ್ಯಂತ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಪರವಾಗಿ ಅಭಿಮಾನಿಗಳು, ಬೆಂಬಲಿಗರು ವಿಶೇಷ ಪೂಜೆ, ಹೋಮ-ಹವನ, ಉರುಳು ಸೇವೆ ಸಲ್ಲಿಸುತ್ತಿದ್ದಾರೆ.
ಗೋಕಾಕ್ ಪಾಲ್ಸ್ ಸಂಗಮೇಶ್ವರ ದೇವಸ್ಥಾನದಲ್ಲಿ ಬೆಂಬಲಿಗರು ರಮೇಶ್ ಜಾರಕಿಹೊಳಿ ಪರವಾಗಿ ವಿಶೇಷ ಪೂಜೆ ಸಲ್ಲಿಸಿದರು. ಪಾಮಲದಿನ್ನಿ ಗ್ರಾಮದಲ್ಲಿ ಹೋಮ ಹವನ ನಡೆಯಿತು. ಗೋಕಾಕ್ ತಾಲೂಕಿನ ಕಣಗಾಂವ, ಅಂಕಲಗಿ, ಉಪ್ಪಾರಟ್ಟಿ, ಕಲ್ಲೋಳ ಸೇರಿದಂತೆ ಹಲವು ಕಡೆಗಳಲ್ಲಿ ವಿಶೇಷ ಪೂಜೆಗಳು ನಡೆಸಿ ರಮೇಶ್ ಜಾರಕಿಹೊಳಿ ಪರವಾಗಿ ತೀರ್ಪು ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಲಾಯಿತು.
ಇನ್ನು ತಾಲೂಕಿನ ನಂದಗಾಂವನ ಲಕ್ಷ್ಮೀ ದೇವಸ್ಥಾನದ ಮುಂಭಾಗದಲ್ಲಿ ಅಭಿಮಾನಿಗಳು ಉರುಳು ಸೇವೆ ಮಾಡಿ, ರಮೇಶ್ ಜಾರಕಿಹೊಳಿ ಕಾನೂನು ಹೋರಾಟದಲ್ಲಿ ಗೆದ್ದು ಬರಲಿ ಹಾರೈಸಿದರು.