ಬೆಳಗಾವಿ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಜಿಲ್ಲೆಯ ಯೋಧರೊಬ್ಬರು ಅನಾರೋಗ್ಯದಿಂದ ಸಾವನ್ನಪ್ಪಿದ ಘಟನೆ ನಡೆದಿದ್ದು, ಮೃತ ಯೋಧನ ಕುಟುಂಬಸ್ಥರ ದುಃಖ ಮುಗಿಲು ಮುಟ್ಟಿದೆ. ಬೈಲಹೊಂಗಲ ತಾಲೂಕಿನ ಸಂಪಗಾವಿ ಗ್ರಾಮದ ವಿನೋದ್ ಶಂಕರೆಪ್ಪ ಉಳ್ಳಾಗಡ್ಡಿ(35) ಮೃತಪಟ್ಟವರಾಗಿದ್ದಾರೆ.
ಕಳೆದ ಹದಿನೈದು ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಿನೋದ್ ಕಳೆದ ಹಲವು ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಕಾರಣದಿಂದಾಗಿ ನಾಗಾಲ್ಯಾಂಡ್ನ ದೀಮಾಪೂರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.
ಆದ್ರೆ, ವೈದ್ಯರ ಚಿಕಿತ್ಸೆ ಫಲಿಸದೇ ಯೋಧ ಆಸ್ಪತ್ರೆಯಲ್ಲೇ ಜೂ.30ರಂದು ನಿಧನರಾಗಿದ್ದಾರೆ. ಮೃತ ಯೋದನ ಅಂತ್ಯಕ್ರಿಯೆ ಇಂದು ಬೈಲಹೊಂಗಲ ತಾಲೂಕಿನ ಸಂಪಗಾವಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಜರುಗಲಿದೆ.
ಇದನ್ನೂ ಓದಿ: ಇದನ್ನೊಮ್ಮೆ ನೋಡಿ! ಇವರು ಮನುಷ್ಯರಲ್ವೇ ಅಲ್ಲ ರಾಕ್ಷಸರು: ಮನೆ ಮಗಳ ರಕ್ತ ಹೀರುವ ವಿಷಜಂತುಗಳು!