ಗೋಕಾಕ (ಬೆಳಗಾವಿ): ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ತಮ್ಮ ಮಕ್ಕಳಾದ ಪ್ರಿಯಾಂಕಾ, ರಾಹುಲ್ ಹಾಗೂ ಕಾರ್ಯಕರ್ತರೊಂದಿಗೆ ಹಿಲ್ ಗಾರ್ಡನ್ನಲ್ಲಿ ಮಧ್ಯಾಹ್ನ ಉಪಹಾರ ಸೇವಿಸಿದರು.
ಬಳಿಕ ಮಾತನಾಡಿದ ಅವರು, ಸೂರ್ಯ, ಚಂದ್ರ ಗ್ರಹಣ ಗೋಚರ ಪ್ರಕೃತಿಯ ಸಹಜ ಪ್ರಕ್ರಿಯೆ. ಆದ್ರೆ ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಜನರಲ್ಲಿ ಭಯ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಈ ಕೆಲಸ ಈಗಲೂ ನಡೆಯುತ್ತಿದೆ. ಇತಿಹಾಸದುದ್ದಕ್ಕೂ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಈ ವಿಚಾರವಾಗಿ ಜನರಲ್ಲಿನ ಮೌಢ್ಯತೆ ಹೋಗಲಾಡಿಸಲು ನಾವೂ ಕೂಡ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದೇವೆ.
ಸ್ಮಶಾನದಲ್ಲಿ ಆಹಾರ ಸೇವಿಸುವ ಮೂಲಕ ಮೌಢ್ಯದ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದೇವೆ. ಈ ಕಾರ್ಯಕ್ರಮಗಳ ಮೂಲಕ ಜನರಿಗೆ ಗ್ರಹಣಗಳಿಂದ ಯಾವ ತೊಂದರೆಯೂ ಆಗಲ್ಲ ಎಂಬುವುದನ್ನು ತೋರಿಸಿಕೊಟ್ಟಿದ್ದೇವೆ. ತಂತ್ರಜ್ಞಾನದ ಈ ಯುಗದಲ್ಲಿರೋ ಜನರು ಇನ್ನಾದರೂ ಮೌಢ್ಯದಿಂದ ಹೊರಬರಲೇಬೇಕು ಎಂದು ಹೇಳಿದರು.