ETV Bharat / state

Electricity Rate Hike: ವಿದ್ಯುತ್ ದರ ಏರಿಕೆ ಖಂಡಿಸಿ ಬೆಳಗಾವಿಯಲ್ಲಿ ಉದ್ಯಮಿಗಳಿಂದ ಮೌನ ಮೆರವಣಿಗೆ

author img

By

Published : Jun 13, 2023, 5:21 PM IST

Updated : Jun 13, 2023, 7:07 PM IST

ಕೈಗಾರಿಕೋದ್ಯಮಿಗಳು ಈಗಾಗಲೇ ಏರಿಕೆ ಮಾಡಿರುವ ವಿದ್ಯುತ್​ ದರವನ್ನು ಇಳಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಏಳು ದಿನಗಳ ಗಡುವು ನೀಡಿದ್ದಾರೆ.

Silent march by businessmen in Belgaum
ವಿದ್ಯುತ್ ದರ ಏರಿಕೆ ಖಂಡಿಸಿ ಬೆಳಗಾವಿಯಲ್ಲಿ ಉದ್ಯಮಿಗಳಿಂದ ಮೌನ ಮೆರವಣಿಗೆ

ಬೆಳಗಾವಿ: ರಾಜ್ಯದಲ್ಲಿ ಕಾಂಗ್ರೆಸ್​ ಗ್ಯಾರಂಟಿ ಯೋಜನೆ ಮತ್ತು ಅನುಷ್ಠಾನದ ಬಗ್ಗೆ ರಾಜಕಾರಣಿಗಳು ಸೇರಿದಂತೆ ಸಾರ್ವಜನಿಕರು ಚರ್ಚೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ವಿದ್ಯುತ್ ದರ ಏರಿಕೆ ಖಂಡಿಸಿ ಬೆಳಗಾವಿ ಕೈಗಾರಿಕಾ ಹಾಗೂ ವಾಣಿಜ್ಯೋದ್ಯಮ ಸಂಸ್ಥೆ ನೇತೃತ್ವದಲ್ಲಿ ಹಲವು ಉದ್ಯಮಿಗಳು ನಗರದಲ್ಲಿ ಇಂದು ಮೌನ ಮೆರವಣಿಗೆ ನಡೆಸುವ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದರು. ನಗರದ ರಾಣಿ ಚೆನ್ನಮ್ಮ ವೃತ್ತದಿಂದ ಆರಂಭವಾದ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿವರೆಗೂ ನಡೆಯಿತು.

ತಕ್ಷಣವೇ ವಿದ್ಯುತ್ ದರ ಇಳಿಸಿ, ರಾಜ್ಯದಲ್ಲಿ ಉದ್ಯಮಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ನಾವೆಲ್ಲಾ ಮಹಾರಾಷ್ಟ್ರಕ್ಕೆ ವಲಸೆ ಹೋಗುವುದು ಅನಿವಾರ್ಯ ಆಗುತ್ತದೆ ಎಂದು ಎಚ್ಚರಿಸಿದ ಉದ್ಯಮಿಗಳು, ತಮ್ಮ ಬೇಡಿಕೆ ಈಡೇರಿಸುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಯನ್ನು ಸಲ್ಲಿಸಿದರು.

ಇದೇ ವೇಳೆ ಈಟಿವಿ ಭಾರತ ಜೊತೆಗೆ ಮಾತನಾಡಿದ ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷ ರೋಹನ್ ಜವಳಿ, ಮನವಿ ಸಲ್ಲಿಸಿದ ಬಳಿಕ ಹೆಸ್ಕಾಂನ ಹಣಕಾಸು ಇಲಾಖೆ ಮುಖ್ಯಸ್ಥರು ಮತ್ತು ಮುಖ್ಯ ಎಂಜಿನಿಯರ್ ಜೊತೆಗೆ ಸಭೆ ಮಾಡಿದ್ದೇವೆ. ಇಂದು ಸಂಜೆ ಫೌಂಡ್ರಿ ಕ್ಲಸ್ಟರ್​ಗೆ ಹೆಸ್ಕಾಂ ಎಂಡಿ ಬರುತ್ತಿದ್ದಾರೆ. ಅವರ ಜೊತೆ ಸಭೆಯಲ್ಲಿ ಡಿಸಿಯವರು ಭಾಗಿಯಾಗುತ್ತೇನೆ ಎಂದಿದ್ದಾರೆ. ಇವತ್ತಿನ‌ ಸಭೆಯಲ್ಲಿ ದರ ಹೆಚ್ಚಳ ಹಿಂಪಡೆಯುವಂತೆ ಮನವಿ ಮಾಡಿಕೊಳ್ಳುತ್ತೇವೆ. ಒಂದು ವೇಳೆ ದರ ಹೆಚ್ಚಳ ಹಿಂಪಡೆಯದಿದ್ದರೆ ಒಂದು ದಿನ ರಾಜ್ಯಾದ್ಯಂತ ಕೈಗಾರಿಕೆಗಳನ್ನು ಬಂದ್ ಮಾಡಲು ನಿರ್ಧರಿಸಿದ್ದೇವೆ. ಅದಕ್ಕೂ ಮೀರಿ ಮಾಡದಿದ್ದರೆ ಬಿಲ್ ಕಟ್ಟಬಾರದು ಎಂಬ ಚರ್ಚೆ ನಡೆದಿದೆ. ನಂತರ ಅವರೇ ಬಂದು ನಮ್ಮ ಕೈಗಾರಿಕೆಗಳನ್ನು ಬಂದ್ ಮಾಡಲಿ. ಹೋರಾಟ ಮಾಡಲು ನಮಗೆ ಸರ್ಕಾರ ಅವಕಾಶ ಮಾಡಿಕೊಡಬಾರದು. ಒಂದೇ ಬಾರಿ ಶೇ 60 ರಷ್ಟು ಏರಿಕೆ ಮಾಡಿದರೆ ಹೇಗೆ ಬಿಲ್ ತುಂಬುವುದು ಎಂದು ಪ್ರಶ್ನಿಸಿದರು.

ಬೆಳಗಾವಿಯ ಉದ್ಯಮಭಾಗ, ಮಚ್ಛೆ ಕೈಗಾರಿಕಾ ಪ್ರದೇಶ ಸೇರಿದಂತೆ ವಿವಿಧೆಡೆಯಿಂದ ನೂರಾರು ಉದ್ಯಮಿಗಳು ಮೌನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಹೇಮಂತ ಪೋರವಾಲ್, ಉದ್ಯಮಿಗಳಾದ ಡಾ‌. ಎಚ್. ಬಿ. ರಾಜಶೇಖರಪ್ಪ, ಮಹಾದೇವ ಚೌಗುಲೆ, ಆನಂದ ದೇಸಾಯಿ, ಪ್ರಭಾಕರ ನಾಗರಮುನ್ನೋಳಿ, ಸಂದೀಪ ಬಾಗೇವಾಡಿ, ಸ್ವಪ್ನೀಲ್ ಶಹಾ ಸೇರಿ ಮತ್ತಿತರರು ಇದ್ದರು.

ಕಾಂಗ್ರೆಸ್​ ವಿಧಾನಸಭಾ ಚುನಾವಣಾ ಪ್ರಚಾರ ವೇಳೆಯಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು, ಅದರಲ್ಲಿ 200 ಯುನಿಟ್​ ವಿದ್ಯುತ್​ ಕೂಡ ಒಂದು. ಇತ್ತೀಚೆಗೆ ಉಚಿತ ವಿದ್ಯುತ್​ ಯೋಜನೆ ಜಾರಿ ಕುರಿತು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಇನ್ನೊಂದೆಡೆ ವಿದ್ಯುತ್​ ಪೂರೈಕೆ ನಿಗಮಗಳು ದರವನ್ನು ಏಕಾಏಕಿ ಏರಿಕೆ ಮಾಡಿವೆ. 100 ಯೂನಿಟ್​ ವರೆಗಿನ ವಿದ್ಯುತ್​ ಬಳಕೆಗೆ ಪ್ರತಿ ಯೂನಿಟ್​ಗೆ 70 ಪೈಸೆ ಏರಿಕೆಯಾಗಿದ್ದರೆ, 100 ಯೂನಿಟ್​ ದಾಟಿದರೆ ಪ್ರತಿ ಯೂನಿಟ್​ಗೆ 7 ರೂಪಾಯಿ ದರವನ್ನು ಹೆಚ್ಚಿಸಲಾಗಿದೆ. ಈ ವಿದ್ಯುತ್​ ದರ ಏರಿಕೆ ವಿರುದ್ಧ ಇದೀಗ ಉದ್ಯಮಿಗಳು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ: Electricity rate hike: ಕೈಗಾರಿಕೆಗಳ ವಿದ್ಯುತ್ ದರ ಇಳಿಸಿ - ಸರ್ಕಾರಕ್ಕೆ ಏಳು‌ ದಿನಗಳ‌ ಗಡುವು ಕೊಟ್ಟ ಬೆಳಗಾವಿ ಉದ್ಯಮಿಗಳು

Last Updated : Jun 13, 2023, 7:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.