ಬೆಳಗಾವಿ: ನೆರೆ ಪರಿಹಾರ ವಿಚಾರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಪುಕ್ಕಟೆ ಪ್ರಚಾರಕ್ಕಾಗಿ ಪರಿಹಾರ ಕೊಟ್ಟಿಲ್ಲ ಎಂಬ ಸಿಎಂ ಬಿಎಸ್ವೈ ಹೇಳಿಕೆಗೆ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನಾನು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೆ. ಜನರು ತಮ್ಮ ಕಷ್ಟಗಳನ್ನು ತೋಡಿಕೊಂಡಿದ್ದಾರೆ. ಆಗ ಜನರು ಹೇಳಿದ್ದನ್ನೇ ನಾನು ಹೇಳುತ್ತಿದ್ದೇನೆ ಎಂದರು.
ಯಡಿಯೂರಪ್ಪ ಜನರ ಬಳಿ ಬಂದು ಭೇಟಿಯಾದ ನಂತರ ಮಾತನಾಡಲಿ. ವಾಸ್ತವ ಗೊತ್ತಿಲ್ಲದೇ ಬೆಂಗಳೂರಲ್ಲಿ ಕುಳಿತು ಹೇಳಿಕೆ ಕೊಟ್ಟರೆ ಅದು ಸತ್ಯ ಅಲ್ಲ ಎಂದು ಕಿಡಿ ಕಾರಿದರು.