ETV Bharat / state

ಸ್ಥಳೀಯರಿಗೆ ಅರ್ಥವಾಗಲಿ ಎನ್ನವ ಸಲುವಾಗಿ ಮರಾಠಿ ಮಾತನಾಡಿದ್ದೇನೆ: ಸಚಿವ ಶ್ರೀಮಂತ ಪಾಟೀಲ

ಸ್ಥಳೀಯರಿಗೆ ಆದ್ಯತೆ ನೀಡಿ ಎಂದು ಹೇಳಲು ಮರಾಠಿ ಮಾತನಾಡಿದ್ದೇನೆ. ನಮ್ಮ ಕಾರ್ಖಾನೆಯಲ್ಲಿ ಈಗಾಗಲೇ ಸುತ್ತಮುತ್ತಲಿನ ಗ್ರಾಮದ ಕಾರ್ಮಿಕರು ಶೇ80ರಷ್ಟಿದ್ದಾರೆ. ಮರಾಠಿಗರು ನಮ್ಮ ಕಾರ್ಖಾನೆಯಲ್ಲಿ ಇಲ್ಲ ಎಂದು ಜವಳಿ ಮತ್ತು ಅಲ್ಪಸಂಖ್ಯಾತರ ಸಚಿವ ಶ್ರೀಮಂತ ಪಾಟೀಲ ಹೇಳಿದರು.

srimantha patil
srimantha patil
author img

By

Published : Aug 3, 2020, 3:08 PM IST

ಚಿಕ್ಕೋಡಿ (ಬೆಳಗಾವಿ): ಬೆಳಗಾವಿ ಜಿಲ್ಲೆಯ ಗಡಿ ಗ್ರಾಮವಾದ ಬಾಳಿಗೇರಿಯಲ್ಲಿ ಮರಾಠಿಯಲ್ಲಿ ಮಾತನಾಡಿದ್ದೇನೆ. ಸ್ಥಳೀಯರನ್ನು ಸಕ್ಕರೆ ಕಾರ್ಖಾನೆಯಲ್ಲಿ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಗೊತ್ತಾಗಲಿ ಎನ್ನುವ ದೃಷ್ಟಿಯಿಂದ ನಾನು ಮರಾಠಿಯಲ್ಲಿ ಮಾತನಾಡಿದ್ದೇನೆ ಎಂದು ಜವಳಿ ಮತ್ತು ಅಲ್ಪಸಂಖ್ಯಾತರ ಸಚಿವ ಶ್ರೀಮಂತ ಪಾಟೀಲ ಸ್ಪಷ್ಟನೆ ನೀಡಿದ್ದಾರೆ.

ಸಚಿವ ಶ್ರೀಮಂತ ಪಾಟೀಲ

ಕಾಗವಾಡ ತಾಲೂಕಿನ ಜಂಬಗಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಮರಾಠಿ ನಾನು ಹೆಚ್ಚಾಗಿ ಮಾತನಾಡುವುದಿಲ್ಲ. ಸ್ಥಳೀಯರಿಗೆ ಆದ್ಯತೆ ನೀಡಿ ಎಂದು ಹೇಳಲು ಮರಾಠಿ ಮಾತನಾಡಿದ್ದೇನೆ. ನಮ್ಮ ಕಾರ್ಖಾನೆಯಲ್ಲಿ ಈಗಾಗಲೇ ಸುತ್ತಮುತ್ತಲಿನ ಗ್ರಾಮದ ಕಾರ್ಮಿಕರು ಶೇ 80ರಷ್ಟು ಇದ್ದಾರೆ. ಮರಾಠಿಗರು ನಮ್ಮ ಕಾರ್ಖಾನೆಯಲ್ಲಿ ಇಲ್ಲ ಎಂದರು.

ಕಾಗವಾಡ ತಾಲೂಕಿನ ಶಿರಗುಪ್ಪಿ ಕೋವಿಡ್ ಸೆಂಟರ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಕಾಗವಾಡ ತಾಲೂಕಿನಲ್ಲಿ ಹೆಚ್ಚಾಗಿ ಕೊರೊನಾ ಪಾಸಿಟಿವ್ ಬರುತ್ತಿಲ್ಲ. ಮುಂದೆ ಕೊರೊನಾ ಸಂಖ್ಯೆ ಹೆಚ್ಚಾದರೆ, ಶಿರಗುಪ್ಪಿ ಕೋವಿಡ್ ಸೆಂಟರ್ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.