ಚಿಕ್ಕೋಡಿ : ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಶ್ರೀ ಸಿದ್ದೇಶ್ವರ ದೇವರ ಜಾತ್ರೆಯಲ್ಲಿ ಸಂಗ್ರಾಮ ಕಲ್ಲೆತ್ತುವ ಸ್ಪರ್ಧೆ ನೆರದಿದ್ದ ಪ್ರೇಕ್ಷಕರ ಗಮನ ಸೆಳೆಯಿತು.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಶ್ರೀಸಿದ್ದೇಶ್ವರ ದೇವರ ಜಾತ್ರೆಯಲ್ಲಿ ಪ್ರತಿ ವರ್ಷ ಸಂಗ್ರಾಮ ಕಲ್ಲೆತ್ತುವ ಸ್ಪರ್ಧೆ ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಸ್ಪರ್ಧೆಯಲ್ಲಿ ನೆರೆಯ ರಾಜ್ಯಗಳಿಂದ ಕೂಡ ಸ್ಪರ್ಧಾಳುಗಳು ಭಾಗವಹಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಾರೆ.
ಕಲ್ಲೆತ್ತುವ ಸ್ಪರ್ಧೆಯಲ್ಲಿ ಉತ್ತರ ಪ್ರದೇಶದ ಬೇರಾಠಿದಾದ 110 ಕೆ.ಜಿ ಕಲ್ಲನ್ನು ಒಂದು ಕೈಯಲ್ಲಿ ಎತ್ತುವ ಮೂಲಕ ಪ್ರಥಮ ಸ್ಥಾನ ಪಡೆದರು. ದ್ವಿತೀಯ ಸ್ಥಾನ ಮಹಾರಾಷ್ಟ್ರದ ಆಸಂಗಿ ಆಫ್ಜಲ್ ಖಾನ್ ಮುಜಾವರ್ ಪಡೆದರು. ಇನ್ನು ತೃತೀಯ ಸ್ಥಾನವನ್ನು ಕರ್ನಾಟಕ ರಾಜ್ಯದ ಮುನ್ನೋಳಿ ಗ್ರಾಮದ ಮೌಲಾಸಾಬ್ ಚೂರಿಖಾನ್ ಪಡೆದುಕೊಂಡರು.