ETV Bharat / state

ಕುಂದಾನಗರಿಯಲ್ಲಿ ಗುಂಡಿನ ಮೊರೆತ​​​​​​​​... ಮಾಜಿ ಶಾಸಕನ ಪುತ್ರನ ಹತ್ಯೆ! - ಶಾಸಕ‌

ಮಾಜಿ ಶಾಸಕ‌ ಪರಶುರಾಮ ನಂದಿಹಳ್ಳಿ ಅವರ ಪುತ್ರ ಅರುಣ್ ನಂದಿಹಳ್ಳಿಯನ್ನು ಗುಂಡಿಕ್ಕಿ ಭೀಕರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿಯ ದಾಮನೆ‌ ಗ್ರಾಮದಲ್ಲಿ ನಡೆದಿದೆ.

ಮೃತ ಅರುಣ್ ನಂದಿಹಳ್ಳಿ
author img

By

Published : Mar 20, 2019, 12:31 PM IST

ಬೆಳಗಾವಿ: ಮಾಜಿ ಶಾಸಕ‌ರ ಪುತ್ರನನ್ನು ಗುಂಡಿಕ್ಕಿ ಭೀಕರವಾಗಿ ಹತ್ಯೆಗೈದಿರುವ ಘಟನೆ ಕುಂದಾನಗರಿಯ ಹೊರವಲಯದಲ್ಲಿ ತಡರಾತ್ರಿ ನಡೆದಿದೆ.

ಮಾಜಿ ಶಾಸಕ ಪರಶುರಾಮ ನಂದಿಹಳ್ಳಿ ಅವರ ಪುತ್ರ ಅರುಣ್ ನಂದಿಹಳ್ಳಿ ಮೃತ ದುರ್ದೈವಿ. ಬೆಳಗಾವಿ ತಾಲೂಕಿನ ದಾಮನೆ‌ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಶಿಕ್ಷಕರಾಗಿದ್ದ ಅರುಣ್ ನಂದಿಹಳ್ಳಿ ಕಾರಿನಲ್ಲಿ ತಡರಾತ್ರಿ ‌ಮನೆಗೆ ಹೊರಟಿದ್ದರು. ಆಗ ಐದಾರು ಜನ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ಅರುಣ್ ಅವರ ಎದೆಗೆ ಗುಂಡಿಕ್ಕಿ ಪರಾರಿಯಾಗಿದ್ದಾರೆ. ತಕ್ಷಣವೇ ಸ್ಥಳೀಯರು ಅರುಣ್ ನಂದಿಹಳ್ಳಿ ‌ಅವರನ್ನು‌ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.‌ ಆದರೆ ಸ್ಥಳದಲ್ಲೇ ‌ಅರುಣ್ ಮೃತಪಟ್ಟಿದ್ದಾರೆ‌ ಎನ್ನಲಾಗುತ್ತಿದೆ.

ಹಣಕಾಸಿನ ವ್ಯವಹಾರವೇ ಈ ದುರ್ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ. ಘಟನೆಯಿಂದ ಇಡೀ ಬೆಳಗಾವಿ ಬೆಚ್ಚಿಬಿದ್ದಿದೆ. ಘಟನೆ ಕುರಿತು ಬೆಳಗಾವಿ ‌ಗ್ರಾಮೀಣ‌ ಪೊಲೀಸ್ ‌ಠಾಣೆಯಲ್ಲಿ‌ ದೂರು ದಾಖಲಾಗಿದೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.