ಅಥಣಿ: ಬದುಕಿನಲ್ಲಿ ಮೂರು ಸಂಗತಿಗಳಿವೆ ಹುಟ್ಟು-ಸಾವು ಇವೆರೆಡರ ನಡುವೆ ಬದುಕು. ಹುಟ್ಟು ಆಕಸ್ಮಿಕ, ಸಾವು ಖಚಿತ ಆದರೂ ಸಹ ನಾವು ಶ್ರೀಮಂತರಾಗಿ ಹುಟ್ಟಬೇಕು... ಹೀಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಇದ್ದಕ್ಕಿದ್ದಂತೆ ಆಧ್ಯಾತ್ಮ ಕುರಿತು ಮಾತನಾಡಿದರು.
ಗಚ್ಚಿನಮಠದ ಶರಣ ಸಂಸ್ಕೃತಿ ಉತ್ಸವಕ್ಕೆ ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಚಿತ್ರದುರ್ಗದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಸಿದರು.
ನಂತರ ಮಾತನಾಡಿದ ಅವರು, ಬದುಕಿನಲ್ಲಿ ಮೂರು ಸಂಗತಿಗಳಿವೆ ಹುಟ್ಟು-ಸಾವು ಇವೆರೆಡರ ನಡುವೆ ಬದುಕು. ಹುಟ್ಟು ಆಕಸ್ಮಿಕ, ಸಾವು ಖಚಿತ ಆದರೂ ಸಹ ನಾವು ಶ್ರೀಮಂತರಾಗಿ ಹುಟ್ಟಬೇಕೆಂಬ ವ್ಯರ್ಥ ಆಲೋಚನೆ ಮಾಡುತ್ತೇವೆ. ಪ್ರತಿದಿನ ಸಾವಿನ ಕಡೆ ಮುಖ ಮಾಡಿ ನಿಲ್ಲುತ್ತೇವೆ. ಜೀವನದಲ್ಲಿ ಬಾಲ್ಯ,ಯೌವ್ವನ,ಮುಪ್ಪು ಬರುತ್ತವೆ ಇವುಗಳ ಮಧ್ಯೆ ಜಾಗತಿಕ ಶಾಂತಿ ಮತ್ತು ಪ್ರಗತಿ ಸಾಧಿಸುವುದು ಇಂದಿನ ಬದುಕಿನ ಚಿಂತನೆಯಾಗಿದೆ ಎಂದರು.
ಸಾಧಕರಿಗೆ ಸನ್ಮಾನ: ಮೂಲತಃ ಅಥಣಿ ತಾಲೂಕಿನವರಾದ ಸಧ್ಯ ಧಾರವಾಡದಲ್ಲಿ ಸಿಪಿಐ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮುರುಘೇಶ ಚನ್ನಣ್ಣವರ್ ಅವರು ಅಂತರರಾಷ್ಟಿಯ ಲೋಹದ ಮನುಷ್ಯ ಸಾಧಕ (ಕ್ರೀಡಾಕ್ಷೇತ್ರದಲ್ಲಿ) ಪ್ರಶಸ್ತಿ ಪಡೆದವರಿಗೆ ಹಾಗೂ ಬಾಗಲಕೋಟೆಯ ಡಾ.ಬಸವರಾಜ ಕೇರೂಡಿ ವೈದ್ಯರನ್ನ ಸಹ ಶ್ರೀಮಠದಿಂದ ಸತ್ಕರಿಸಿಲಾಯಿತು.