ETV Bharat / state

ಕೆ.ಕಲ್ಯಾಣ್ ದಾಂಪತ್ಯಕ್ಕೆ ಹುಳಿ ಹಿಂಡಿದ ಆರೋಪ: ಮಂತ್ರವಾದಿ ಶಿವಾನಂದ ವಾಲಿ ಆಸ್ತಿ ಜಪ್ತಿ - Shivananda Wali

ಸಾಹಿತಿ ಕೆ.ಕಲ್ಯಾಣ್ ದಾಂಪತ್ಯ ಕಲಹಕ್ಕೆ ಕಾರಣವಾಗಿದ್ದ ಆರೋಪದಡಿ ಶಿವಾನಂದ ವಾಲಿ ವಿರುದ್ಧ ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿ ಹಾಗೂ ವಾಮಾಚಾರ ಪ್ರತಿಬಂಧಕ, ನಿರ್ಮೂಲನೆ 2017ರಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದಿವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

k-kalyan
ಸಾಹಿತಿ ಕೆ.ಕಲ್ಯಾಣ್​
author img

By

Published : Oct 12, 2020, 12:41 PM IST

ಬೆಳಗಾವಿ: ಸಾಹಿತಿ ಕೆ. ಕಲ್ಯಾಣ್ ದಾಂಪತ್ಯದಲ್ಲಿ ಕಲಹ ತಂದಿರುವ ಆರೋಪಿ ಶಿವಾನಂದ ವಾಲಿಗೆ ಸೇರಿದ್ದ ಅಂದಾಜು 6 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ, ದಾಖಲೆ ಪತ್ರಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ. ವಿಕ್ರಮ್ ಆಮ್ಟೆ ತಿಳಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ, ಬೆಂಗಳೂರು ಸೇರಿದಂತೆ ಬೆಳಗಾವಿ ನಗರದಲ್ಲಿ ವಾಲಿಗೆ ಸೇರಿರುವ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ನಗರದ ಮಾಳಮಾರುತಿ ‌ಪೊಲೀಸ್ ಠಾಣೆಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು, ಕೆ.ಕಲ್ಯಾಣ ದಾಂಪತ್ಯ ಕಲಹ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಶಿವಾನಂದ ವಾಲಿಯನ್ನು ವಶಕ್ಕೆ ಪಡೆದು ಮಾಳಮಾರುತಿ ಠಾಣೆಯ ಸಿಪಿಐ ನೇತೃತ್ವದಲ್ಲಿ ತನಿಖೆ ಕೈಗೊಂಡು 9 ಮ್ಯಾಕ್ಸಿಕ್ಯಾಬ್, 350 ಗ್ರಾಂ ಚಿನ್ನಾಭರಣ, 6 ಕೆ.ಜಿ ಬೆಳ್ಳಿ ಸೇರಿ ಅಂದಾಜು 5ರಿಂದ 6 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವಾಲಿ ಆಸ್ತಿ ಜಪ್ತಿ ಕುರಿತು ಡಿಸಿಪಿ ವಿಕ್ರಮ್​ ಆಮ್ಟೆ ಮಾಹಿತಿ

ಆರೋಪಿ ಶಿವಾನಂದ ವಾಲಿ, ಕೆ.ಕಲ್ಯಾಣ್​​​ ಅವರ ಕುಟುಂಬಕ್ಕೆ ವಂಚಿಸಿದ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ. ಈತ ಗಂಗಾ ಕುಲಕರ್ಣಿ ಅವರನ್ನು ಮನೆಗೆ ಕಳುಹಿಸಿ ಅವರ ಪತಿಯಿಂದಲೇ ಪತ್ನಿಗೆ ಕಂಟಕ ಇದೆ ಎಂದು ಪೂಜೆ ಮಾಡಿಸುವುದಾಗಿ ಕೋಟ್ಯಂತರ ರೂಪಾಯಿಯನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೆ.ಕಲ್ಯಾಣ್ ಕೌಟುಂಬಿಕ ಕಲಹ ಪ್ರಕರಣಕ್ಕೆ ತಿರುವು!​: ಆರೋಪಿ ಶಿವಾನಂದ ಕೊಟ್ಟ ಟ್ವಿಸ್ಟ್​​​ ಏನು?

ಪ್ರಕರಣ ಹಿನ್ನೆಲೆ:

ಸಾಹಿತಿ ಕೆ.ಕಲ್ಯಾಣ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಗಂಗಾ ಕುಲಕರ್ಣಿ ಹಾಗೂ ಮಂತ್ರವಾದಿ ಶಿವಾನಂದ ವಾಲಿ ಷಡ್ಯಂತ್ರ ರೂಪಿಸಿ ಕಲ್ಯಾಣ್ ಅವರ ಪತ್ನಿ, ಅತ್ತೆ, ಮಾವನನ್ನು ಅಪಹರಿಸಿದ್ದರು ಎನ್ನಲಾಗ್ತಿದೆ. ಇದಾದ ಬಳಿಕ ಕಲ್ಯಾಣ್ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ತನಿಖೆ ಕೈಗೊಂಡು ಆರೋಪಿ ಮಂತ್ರವಾದಿ ವಾಲಿಯನ್ನು ವಶಕ್ಕೆ ಪಡೆದಿದ್ದರು. ಬಳಿಕ ಇಬ್ಬರ ವಿಚಾರಣೆ ನಡೆಸಿದಾಗ ಕುಟುಂಬದಲ್ಲಿ ಬಿರುಕು ಉಂಟುಮಾಡಿ ಆಸ್ತಿ ಹೊಡೆಯುವ ಹುನ್ನಾರ ಬೆಳಕಿಗೆ ಬಂದಿತ್ತು.

ಇದೀಗ ಮಾಳಮಾರುತಿ ಪೊಲೀಸರಿಂದ ಆರೋಪಿಗಳ ಮೇಲೆ ‘ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧಕ ಹಾಗೂ ನಿರ್ಮೂಲನೆ 2017ರಡಿ ಕೇಸ್’ ದಾಖಲಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಬೆಳಗಾವಿ ನಗರದಲ್ಲಿ ಪ್ರಥಮ ಬಾರಿಗೆ ಈ ಪ್ರಕರಣವನ್ನು‌ ದಾಖಲಿಸಿಕೊಳ್ಳಲಾಗುತ್ತಿದೆ. ಗಂಗಾ ಕುಲಕರ್ಣಿ ಹುಡುಕಾಟಕ್ಕೆ ಈಗಾಗಲೇ ಪೊಲೀಸ್ ತಂಡ ರಚನೆ ಮಾಡಲಾಗಿದೆ ಡಿಸಿಪಿ ವಿಕ್ರಮ್​​​​ ವಿವರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.