ETV Bharat / state

ಹಿರಿಯ ಅಧಿಕಾರಿಗಳು ತಂಗಿದ್ದ ಹೋಟೆಲ್ ಮೇಲೆ ಪುಂಡರಿಂದ ಕಲ್ಲು ತೂರಾಟ : 6 ವಾಹನಗಳು ಜಖಂ - ಬೆಳಗಾವಿಯಲ್ಲಿ ಶಿವಸೇನೆ ಕಾರ್ಯಕರ್ತರ ಗಲಭೆ

ಬೆಳಗಾವಿ ನಗರದ ಹೋಟೆಲ್​ನಲ್ಲಿ ಅಧಿಕಾರಿಗಳು ತಂಗಿದ್ದರು. ಇದನ್ನರಿತ ಕಿಡಿಗೇಡಿಗಳು ಹೋಟೆಲ್​ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ..

Shiv Sena activists pelted stones at officers stayed hotels
ಅಧಿಕಾರಿಗಳು ತಂಗಿದ್ದ ಹೋಟೆಲ್ ಮೇಲೆ ಕಲ್ಲು ಪುಂಡರಿಂದ ತೂರಾಟ
author img

By

Published : Dec 18, 2021, 3:11 PM IST

ಬೆಳಗಾವಿ : ಹಿರಿಯ ಅಧಿಕಾರಿಗಳು ಹಾಗೂ ಸಚಿವಾಲಯದ ಸಿಬ್ಬಂದಿ ತಂಗಿದ್ದ ಹೋಟೆಲ್ ಮೇಲೆ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ‌.

ನಗರದ ಶಿವಾಜಿ ರಸ್ತೆಯಲ್ಲಿರುವ ಅನುಪಮಾ ಹೋಟೆಲ್​ನಲ್ಲಿ ಹಿರಿಯ ಅಧಿಕಾರಿಗಳು ತಂಗಿದ್ದರು. ಈ ಬಗ್ಗೆ ಖಚಿತಪಡಿಸಿಕೊಂಡ ಕಿಡಿಗೇಡಿಗಳು, ಹೋಟೆಲ್ ಮೇಲೆ ಮನಬಂದಂತೆ ಕಲ್ಲು ತೂರಿದ್ದಾರೆ. ದುಷ್ಕರ್ಮಿಗಳ ಅಟ್ಟಹಾಸ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಹಿರಿಯ ಅಧಿಕಾರಿಗಳು ತಂಗಿದ್ದ ಹೋಟೆಲ್ ಮೇಲೆ ಪುಂಡರಿಂದ ಕಲ್ಲು ತೂರಾಟ..

ಘಟನೆಯಲ್ಲಿ ಸರ್ಕಾರಕ್ಕೆ ಸೇರಿದ್ದ ಆರು ಇನ್ನೋವಾ ಕಾರುಗಳ ಗಾಜು ಪುಡಿ ಪುಡಿ ಮಾಡಲಾಗಿದೆ. ಕರ್ನಾಟಕ ಸರ್ಕಾರ ಎಂದು ಬರೆದ ಬೋರ್ಡ್ ಕಿತ್ತು ಹಾಕಿ ಉದ್ಧಟತನ ಪ್ರದರ್ಶನ ಮಾಡಿದ್ದಾರೆ.

ನಾಡದ್ರೋಹಿ ಎಂಇಎಸ್ ನಿಷೇಧಕ್ಕೆ ಕರವೇ ಪಟ್ಟು : ಪೊಲೀಸರ ಜತೆಗೆ ನೂಕಾಟ

ಗಡಿಯಲ್ಲಿ ಕನ್ನಡಿಗರನ್ನು ಕೆಣಕುತ್ತಿರುವ ಮಹಾರಾಷ್ಟ್ರ ಏಕೀರಕಣ ಸಮಿತಿ(ಎಂಇಎಸ್) ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ಇಲ್ಲಿನ ರಾಣಿ ಚನ್ನಮ್ಮ ವೃತ್ತದ ಬಳಿ ಶನಿವಾರ ಪ್ರತಿಭಟನೆಗೆ ಯತ್ನಿಸಿದರು.

ನಾಡದ್ರೋಹಿ ಎಂಇಎಸ್ ನಿಷೇಧಕ್ಕೆ ಕರವೇ ಪಟ್ಟು

ಇದಕ್ಕೆ ಅವಕಾಶ ನೀಡದ ಪೊಲೀಸರೊಂದಿಗೆ ಕರವೇ ಕಾರ್ಯಕರ್ತರು ವಾಗ್ವಾದ ನಡೆಸಿದರು. ನಾವೂ ಹೋರಾಟ ಮಾಡಿಯೇ ತೀರುತ್ತೇವೆ ಎಂದು ಕರವೇ ಕಾರ್ಯಕರ್ತರು ಪಟ್ಟು ಹಿಡಿದರು. ಸಾಹಿತ್ಯ ಭವನದಿಂದ ಚೆನ್ನಮ್ಮ ವೃತ್ತದವರೆಗೆ ಮೆರವಣಿಗೆ ಮಾಡಲು ಕಾರ್ಯಕರ್ತರು ನಿರ್ಧರಿಸಿದ್ದರು.

ಆದರೆ, ಕನ್ನಡ ಸಾಹಿತ್ಯ ಭವನ ಪ್ರವೇಶದ್ವಾರ ಮುಚ್ಚಿದ ಪೊಲೀಸರು, ರಾಣಿ ಚನ್ನಮ್ಮ ವೃತ್ತಕ್ಕೆ ಹೋಗುವುದನ್ನು ತಡೆದರು. ಈ ವೇಳೆ ಪೊಲೀಸರನ್ನು ತಳ್ಳಿ ಗೇಟಿನಿಂದ ನುಗ್ಗಲು ಯತ್ನಿಸಿದರು. ಆಗ ಪರಸ್ಪರ ತಳ್ಳಾಟ ನಡೆಯಿತು.

ಸದ್ಯ ಕನ್ನಡ ಸಾಹಿತ್ಯ ಭವನ ಆವರಣದಲ್ಲೇ ಕಾರ್ಯಕರ್ತರು ಧರಣಿ ಆರಂಭಿಸಿದ್ದಾರೆ. ಎಂಇಎಸ್, ಶಿವಸೇನೆ ಪುಂಡರ‌ ವರ್ತನೆ ಖಂಡಿಸಿದರು. ನಾಡದ್ರೋಹಿ ಎಂಇಎಸ್ ಸಂಘಟನೆ ನಿಷೇಧಿಸುವಂತೆ ಕರವೇ ಕಾರ್ಯಕರ್ತರು ಪಟ್ಟು ಹಿಡಿದರು. ಮುಖಂಡರಾದ ಮಹಾಂತೇಶ ರಣಗಟ್ಟಿಮಠ, ವಾಜೀದ್ ಹಿರೇಕೋಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ರಾಜ್ಯದ ಬಸ್​, ಕನ್ನಡಿಗರ ವಾಹನಗಳ ಮೇಲೆ ಶಿವಸೇನೆ ಕಲ್ಲು ತೂರಾಟ - ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.