ಚಿಕ್ಕೋಡಿ : ಬೆಳಗಾವಿ ಗಡಿ ವಿಚಾರವಾಗಿ ಮಹಾರಾಷ್ಟ್ರ ತಗಾದೆ ತೆಗೆಯುತ್ತಿರುವ ಈ ಹೊತ್ತಿನಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಕ್ಷೇತ್ರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮ ಮರಾಠಿಮಯವಾಗಿತ್ತು.
ನಿಪ್ಪಾಣಿ ನಗರದಲ್ಲಿ ಆಯೋಜಿಸಿರುವ ತಾಯಿ-ಮಗು ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ವಾಗತ ಗೀತೆ ಹಾಗೂ ಸ್ವಾಗತ ಭಾಷಣ ಸೇರಿ ಬಹುತೇಕ ಎಲ್ಲವೂ ಮರಾಠಿಯಲ್ಲೇ ಮಾಡಲಾಗಿದೆ. ಸಮಾರಂಭದಲ್ಲಿ ಸಚಿವೆ ಶಶಿಕಲ್ಲಾ ಜೊಲ್ಲೆ ಹಾಗೂ ಆರೋಗ್ಯ ಸಚಿವ ಸುಧಾಕರ್ ಉಪಸ್ಥಿತರಿದ್ದರು.