ETV Bharat / state

ಬನದ ಹುಣ್ಣಿಮೆ ನಿಮಿತ್ತ ಸೋಮವಾರ ನಡೆಯಬೇಕಿದ್ದ ಸವದತ್ತಿ ಯಲ್ಲಮ್ಮದೇವಿ ಬೃಹತ್ ಜಾತ್ರೆ ರದ್ದು - ಯಲ್ಲಮ್ಮನಗುಡ್ಡಕ್ಕೆ ಭಕ್ತರ ಮೇಲೆ ನಿರ್ಬಂಧ

ನಾಳೆ ಬೆಳಗ್ಗೆ ಮತ್ತು ಸಂಜೆ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಜರುಗುಲಿದ್ದು, ದೇವಸ್ಥಾನದ ಸಿಬ್ಬಂದಿ ಮಾತ್ರ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಕೊರೊನಾ ಹರಡುವಿಕೆಯ ನಿಯಂತ್ರಣಕ್ಕಾಗಿ ಯಲ್ಲಮ್ಮ ದೇವಿ ಸನ್ನಿಧಿಗೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ.

savadatti-yellamma-fair-cancelled-due-to-covid
ಸವದತ್ತಿ ಯಲ್ಲಮ್ಮದೇವಿ ಬೃಹತ್ ಜಾತ್ರೆ ರದ್ದು
author img

By

Published : Jan 16, 2022, 10:49 PM IST

ಬೆಳಗಾವಿ: ಬನದ ಹುಣ್ಣಿಮೆ ನಿಮಿತ್ತ ನಾಳೆ ನಡೆಯಬೇಕಿದ್ದ ಸವದತ್ತಿಯ ರೇಣುಕಾದೇವಿಯ ಬೃಹತ್ ಜಾತ್ರೆಯನ್ನು ರದ್ದುಗೊಳಿಸಲಾಗಿದೆ. ಕೋವಿಡ್​ ಕಾರಣ ಉತ್ತರ ಕರ್ನಾಟಕದ ಪ್ರಮುಖ ಶಕ್ತಿ ಕೇಂದ್ರ ಸವದತ್ತಿಯ ಯಲ್ಲಮ್ಮನ ಗುಡ್ಡದ ರೇಣುಕಾದೇವಿ ದೇಗುಲದಲ್ಲಿ ಸರಳ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲು ಟ್ರಸ್ಟ್ ಸಮಿತಿ ನಿರ್ಧರಿಸಿದೆ.

ನಾಳೆ ಬೆಳಗ್ಗೆ ಮತ್ತು ಸಂಜೆ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಜರುಗುಲಿದ್ದು, ದೇವಸ್ಥಾನದ ಸಿಬ್ಬಂದಿ ಮಾತ್ರ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಕೊರೊನಾ ಹರಡುವಿಕೆಯ ನಿಯಂತ್ರಣಕ್ಕಾಗಿ ಯಲ್ಲಮ್ಮದೇವಿ ಸನ್ನಿಧಿಗೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮನವಿ

ದೇವಸ್ಥಾನಕ್ಕೆ ಸೀಮಿತವಾಗಿಯೇ ಅಧಿಕಾರಿಗಳು, ಅರ್ಚಕರು ಹಾಗೂ ಕೆಲವೇ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಆಚರಣೆ ಕೈಗೊಳ್ಳಲು ಯಲ್ಲಮ್ಮ ದೇವಸ್ಥಾನ ಅಧಿಕಾರಿಗಳು ತೀರ್ಮಾನ ಕೈಗೊಂಡಿದ್ದಾರೆ. ಗುಡ್ಡದತ್ತ ಹರಿದುಬರುವ ಭಕ್ತಸಮೂಹವನ್ನು ತಡೆಯಲಾಗುತ್ತದೆ.

ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣ ಹೆಚ್ಚಿದ್ದರಿಂದ ದೇವಿ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಎಲ್ಲ ಭಕ್ತರು ಇದನ್ನು ಪಾಲಿಸಿ ಆಡಳಿತ ವ್ಯವಸ್ಥೆಯೊಂದಿಗೆ ಕೈಜೋಡಿಸಬೇಕು ಎಂದು ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಕೋರಿದ್ದಾರೆ.

ಬ್ಯಾರಿಕೇಡ್ ಅಳವಡಿಕೆ:

ಯಲ್ಲಮ್ಮನಗುಡ್ಡಕ್ಕೆ ಸಂಪರ್ಕ ಕಲ್ಪಿಸುವಂತಹ ಉಗರಗೋಳ, ಹಿರೇಕುಂಬಿ, ಚುಳಕಿ, ಮುನವಳ್ಳಿಯ ಶಿಂಧೋಗಿ ಕ್ರಾಸ್, ರಾಮದುರ್ಗ ಮಾರ್ಗದ ಹೂಲಿಕಟ್ಟಿ, ಬೈಲಹೊಂಗಲ ಮಾರ್ಗದ ಕರಿಕಟ್ಟಿ ಹಾಗೂ ಧಾರವಾಡ ಮಾರ್ಗದ ಹಿರೇಉಳ್ಳಿಗೇರಿಯಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಭದ್ರತೆ ದೃಷ್ಟಿಯಿಂದ 4 ಸಿಪಿಐ, 10 ಪಿಎಸ್‍ಐ, 16 ಎಎಸ್‍ಐ ಹಾಗೂ 160 ಪೊಲೀಸರು, ಗೃಹರಕ್ಷಕ ದಳ ಸಿಬ್ಬಂದಿ ನಿಯೋಜಿಸಲಾಗಿದೆ. ಜನರನ್ನು ಬ್ಯಾರಿಕೇಡ್ ಬಳಿ ತಡೆಯಲು ಪೊಲೀಸರು ಸನ್ನದ್ಧರಾಗಿದ್ದಾರೆ.

ಪ್ರತಿವರ್ಷ ಬನದ ಹುಣ್ಣಿಮೆ ಮುಖ್ಯ ಜಾತ್ರೆಯಂದು ಲಕ್ಷಾಂತರ ಭಕ್ತರು ಸೇರುತ್ತಿದ್ದರು. ಕೋವಿಡ್ ನಿಯಂತ್ರಣ ಸಲುವಾಗಿ ಈ ಸಲ ನಿಷೇಧ ಹೇರಲಾಗಿದ್ದು, ಸರಳವಾಗಿ ಧಾರ್ಮಿಕ ಆಚರಣೆ ಕೈಗೊಳ್ಳಲು ತೀರ್ಮಾನಿಸಿದ್ದೇವೆ. ಎಲ್ಲ ಭಕ್ತಾಧಿಗಳೂ ಸಹಕರಿಸಬೇಕು ಎಂದು ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಿದ ಕೋವಿಡ್ ಅಬ್ಬರ​: ಜಿಲ್ಲಾವಾರು ಕೋವಿಡ್​​ ಪ್ರಕರಣಗಳ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.