ETV Bharat / state

ಪಕ್ಷ ಬಿಟ್ಟು ಹೋದವರನ್ನು ವಾಪಸ್​​​ ಕರೆ ತರಲು ತಂಡ ರಚನೆ: ಸತೀಶ್ ಜಾರಕಿಹೊಳಿ - ಸಚಿವ ರಮೇಶ್ ಜಾರಕಿಹೊಳಿ

ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ‌. ಈ ಹಿನ್ನೆಲೆ ಕೇಡರ್ ಬೇಸ್ ಆಧಾರದ ಮೇಲೆ ಪಕ್ಷ ಸಂಘಟನೆ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಹೇಳಿದರು.

Satish Jarakiholi statement
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌..!
author img

By

Published : Jul 4, 2020, 4:48 PM IST

ಬೆಳಗಾವಿ: ಕಾಂಗ್ರೆಸ್ ಪಕ್ಷದಲ್ಲಿ ತಳ ಮಟ್ಟದಿಂದ ಕಾರ್ಯಕರ್ತರನ್ನು ಹುರಿಗೊಳಿಸಲು ಕೆಡರ್ ಬೇಸ್ ಆಧಾರದ ಮೇಲೆ ಪಕ್ಷ ಕಟ್ಟಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ‌. ಈ ಹಿನ್ನೆಲೆ ಕೇಡರ್ ಬೇಸ್ ಆಧಾರದ ಮೇಲೆ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಪಕ್ಷದ ವಿಚಾರಗಳು, ಸಿದ್ಧಾಂತ ಹಾಗೂ ದೇಶ ಪರಿಸ್ಥಿತಿಯನ್ನು ಜನತೆ ಮುಂದಿಡುವ ಪ್ರಯತ್ನ ಬರುವ ದಿನಗಳಲ್ಲಿ ಮಾಡಲಾಗುವುದು ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ಕಾಂಗ್ರೆಸ್ ಪಕ್ಷ ಕೇಡರ್ ಬೇಸ್ ಇಲ್ಲದ್ದರಿಂದಲೇ ಸಫರ್ ಆಗಿದೆ. ಇದರಿಂದಾಗಿ ಇನ್ಮೇಲೆ ಮಾಸ್​​ದಿಂದ ಕೇಡರ್ ಅಧಾರದ ಮೇಲೆ ಪಕ್ಷವನ್ನು ಕಟ್ಟುವ ಅಜೆಂಡಾ ಇಟ್ಟುಕೊಳ್ಳಲಾಗಿದೆ. ಬಿಜೆಪಿಯನ್ನು ಕಾಪಿ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಏನು ಅವಶ್ಯಕತೆ ಇದೆ ಅದನ್ನು ಮಾಡಲಾಗುತ್ತಿದೆ. ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ಹಾಗೆ ಕೊರೊನಾ ವಿಚಾರದಲ್ಲಿ ಅವ್ಯವಹಾರ ನಡೆದಿದೆ. ಹೀಗಾಗಿ ಸಮಗ್ರ ತನಿಖೆ ಆಗಬೇಕು ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುರಿತು ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅಂತಹ ಶಬ್ದಗಳ ಬಳಕೆ ಕುರಿತು ಪತ್ರಕರ್ತರೇ ಅವರನ್ನು ಪ್ರಶ್ನೆ ಮಾಡಬೇಕು. ಈಗಾಗಲೇ ಅಂತಹ ಹೇಳಿಕೆಗೆ ಹಲವು ಬಾರಿ ಉತ್ತರಿಸಿದ್ದೇನೆ ಎಂದರು.

ಕಾಂಗ್ರೆಸ್ ಬಿಟ್ಟು ಹೋಗಿರುವ ನಾಯಕರನ್ನು ವಾಪಸ್​ ‌ಕರೆ ತರಲು ಈಗಾಗಲೇ ಕೆಪಿಸಿಸಿ ಅಧ್ಯಕ್ಷರು ತಂಡ ರಚನೆ ಮಾಡಿದ್ದಾರೆ. ನಂತರದಲ್ಲಿ ಅವರು ಜಿಲ್ಲಾ ಪ್ರವಾಸ ನಡೆಸಿ ನೀಡುವ ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.