ಬೆಳಗಾವಿ (ಗೋಕಾಕ): ರಮೇಶ್ ಜಾರಕಿಹೊಳಿ ವಿರುದ್ಧ ಏಕವಚನದಲ್ಲಿ ಮಾತಾಡಿದ್ದರ ಕುರಿತು ಬಿಜೆಪಿಯವರು ದೂರು ಕೊಟ್ಟಿದ್ದಾರೆ. ಈ ಕುರಿತು ಚುನಾವಣಾ ಆಯೋಗದವರು ಏಕವಚನದಲ್ಲಿ ಮಾತನಾಡಬಾರದು ಅಂತಾ ಹೇಳಿದ್ದಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೂ ಏಕವಚನದಲ್ಲಿ ಮಾತನಾಡಲು ಇಷ್ಟವಿಲ್ಲ. ರಾಜಕೀಯದಲ್ಲಿ ಕೆಲವು ಬಾರಿ ಹೀಗಾಗುತ್ತೆ. ಕಳೆದ ನಾಲ್ಕು ತಿಂಗಳಿಂದ ಜನರ ಬಳಿ ಹೋಗಿದ್ದೇವೆ. ನಾನು ಸಲ್ಲಿಸಿದ ನಾಮಪತ್ರಕ್ಕೆ ಬಿ ಫಾರಂ ಇರಲಿಲ್ಲ. ಹೀಗಾಗಿ ನಾಮಪತ್ರ ತಿರಸ್ಕಾರ ಆಗಿದೆ. ನಮ್ಮ ಕಾರ್ಯಕರ್ತರ ಒತ್ತಾಯದ ಮೇರೆಗೆ ನಾಮಪತ್ರ ಸಲ್ಲಿಸಿದ್ದೆ ಅಷ್ಟೇ ಎಂದರು.