ETV Bharat / state

ವಿರೋಧ ಪಕ್ಷದ ಮೇಲೆ ಆರೋಪ ಮಾಡುವ ಬಿಜೆಪಿಗೆ ಕನಿಷ್ಟ ಜ್ಞಾನವಾದರೂ ಇರಬೇಕು : ಸತೀಶ್​ ಜಾರಕಿಹೊಳಿ

ಕುರ್ಚಿಯಲ್ಲಿ ಕುಳಿತವರು, ಆಡಳಿತ ನಡೆಸುವವರು ಬಿಜೆಪಿಯವರು, ನಾವಲ್ಲ. ವಿರೋಧ ಪಕ್ಷದ ಮೇಲೆ ಆರೋಪ ಮಾಡುವಾಗ ಬಿಜೆಪಿಗೆ ಕನಿಷ್ಟ ಜ್ಞಾನವಾದರೂ ಇರಬೇಕು. 3ನೇ ಅಲೆ ತಡೆಗೆ ರಾಜ್ಯ ಸರ್ಕಾರ ಇನ್ನಾದರೂ ತಜ್ಞರು, ಜನರ ಸಲಹೆ ಪಡೆದು ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು..

KPCC President sathish jarakiholi
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
author img

By

Published : May 23, 2021, 9:23 PM IST

ಗೋಕಾಕ್‌ : ಕೊರೊನಾ‌ ಸೋಂಕು ಹೆಚ್ಚಳಕ್ಕೆ ಆಡಳಿತ ಪಕ್ಷದ ವೈಫಲ್ಯವೇ ಕಾರಣವಾಗಿದೆ. ಆದರೆ, ವಿರೋಧ ಪಕ್ಷದ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನ ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಗೋಕಾಕ್‌ನಲ್ಲಿ ಮಾಧ್ಯಮದವರೊಂದಿಗೆ ‌ಮಾತನಾಡಿದ ಅವರು, ಕೊರೊನಾ ವೈರಸ್ ಹರಡುವುದನ್ನು ಆಡಳಿತ ಪಕ್ಷದವರು ಕಡಿಮೆ ಮಾಡಬೇಕೋ‌? ಏನ್ ವಿರೋಧ ಪಕ್ಷದವರು ಕಡಿಮೆ ಮಾಡಬೇಕೋ ಎಂಬುವುದನ್ನು ಬಿಜೆಪಿ ಅರಿತುಕೊಳ್ಳಬೇಕು. ಕೊರೊನಾ‌ ಸೋಂಕು ಹೆಚ್ಚಳಕ್ಕೆ ಆಡಳಿತ ಪಕ್ಷದ ವೈಫಲ್ಯವೇ ಕಾರಣ ಎಂದರು.

ಸರ್ಕಾರದ ವೈಫಲ್ಯಗಳ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ..

ಕುರ್ಚಿಯಲ್ಲಿ ಕುಳಿತವರು, ಆಡಳಿತ ನಡೆಸುವವರು ಬಿಜೆಪಿಯವರು, ನಾವಲ್ಲ. ವಿರೋಧ ಪಕ್ಷದ ಮೇಲೆ ಆರೋಪ ಮಾಡುವಾಗ ಬಿಜೆಪಿಗೆ ಕನಿಷ್ಟ ಜ್ಞಾನವಾದರೂ ಇರಬೇಕು.

3ನೇ ಅಲೆ ತಡೆಗೆ ರಾಜ್ಯ ಸರ್ಕಾರ ಇನ್ನಾದರೂ ತಜ್ಞರು, ಜನರ ಸಲಹೆ ಪಡೆದು ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು.

ಅವರಿಗೂ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ವಿರೋಧ ಪಕ್ಷದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.

ಕೊರೊನಾ ಸೋಂಕಿನ ಸಾವಿನ ಸಂಖ್ಯೆ‌ ನೆನೆದು ಪ್ರಧಾನಿ ಮೋದಿ ಕಣ್ಣೀರು ಹಾಕಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜನರನ್ನು ಮೋಸ ಮಾಡುವುದರಲ್ಲಿ ಬಿಜೆಪಿಯವರು ಪರಿಣಿತರು.

ಅದಕ್ಕಾಗಿ ಎಲ್ಲಿ ಕಣ್ಣೀರು ಹಾಕಬೇಕು, ಎಲ್ಲಿ ಹಾಳೆ ಆರಿಸಬೇಕು, ಸ್ವಚ್ಛ ಭಾರತ್​ ಹೆಸರಿನಲ್ಲಿ ಎಲ್ಲಿ ಬಾಟಲಿ ಆರಿಸಬೇಕು ಎಂಬುದು ಗೊತ್ತಿದೆ ಎಂದು ವ್ಯಂಗ್ಯವಾಡಿದರು.

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಚಿವರು ಕೊರೊನಾ ನಿಯಂತ್ರಣ ವಿಚಾರದಲ್ಲಿ ಸಭೆಗೆ ಮಾತ್ರ ಸೀಮಿತವಾಗಿದ್ದಾರೆ. ನಾಲ್ವರು ಸಚಿವರಿದ್ದರೂ ಕ್ಷೇತ್ರಕ್ಕೆ ಸೀ‌ಮಿತವಾಗಿದ್ದಲ್ಲದೇ ಇಡೀ ಸರ್ಕಾರವೇ ಸಭೆಗೆ ಮಾತ್ರ ಸೀಮಿತವಾಗಿದೆ.

ಹೀಗಾಗಿ, ಕೊರೊನಾ ಹೆಚ್ಚಳಕ್ಕೆ ಕಾರಣವಾಗಿದೆ. ಜಿಲ್ಲೆಯ ಸಚಿವರು ಜಿಲ್ಲೆಯಾದ್ಯಂತ ಸುತ್ತಾಡಿ ಕೊರೊನಾ ಕಡಿಮೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಓದಿ: ಕೋವಿಡ್​ ನಂತರ ವೈದ್ಯಕೀಯ ಮೂಲಸೌಕರ್ಯ ಗಮನಾರ್ಹ ಸುಧಾರಣೆ; ಸಚಿವ ಸುಧಾಕರ್

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.