ಬೆಳಗಾವಿ: ಮಾಜಿ ಸಚಿವ ಸತೀಶ ಜಾರಕಿಹೊಳಿ ತಲೆ ಸರಿಯಿಲ್ಲ. ಆತನನ್ನು ಧಾರವಾಡಕ್ಕೆ ಕಳಿಸಬೇಕಿದೆ ಎಂದು ಅನರ್ಹ ಶಾಸಕ ರಮೇಶ ಜಾರಕಿಹೊಳಿ ತಮ್ಮನ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಸಂದರ್ಭದಲ್ಲಿ ನಾನು ಗೋಕಾಕಿನಲ್ಲಿ ಸುತ್ತಾಡಿದ್ದೇನೆ. ನಾನು ಪ್ರಚಾರ ಪ್ರಿಯನಲ್ಲ. ನನ್ನ ಬೆಂಬಲಿಗರು ಕೂಡ ಪ್ರವಾಹದ ಸಂದರ್ಭದಲ್ಲಿ ಸಂತ್ರಸ್ತರಿಗೆ ಸಹಾಯ ಮಾಡಿದ್ದಾರೆ. ನೀವು ಪ್ರವಾಹದ ಸಂದರ್ಭದಲ್ಲಿ ನೆರೆಪೀಡಿತ ಜನರ ಬಳಿ ಇರದೇ ದೆಹಲಿಯಲ್ಲಿ ಕುಳಿತಿದ್ದೀರಿ ಎಂಬ ಸತೀಶ ಜಾರಕಿಹೊಳಿ ಆರೋಪಕ್ಕೆ ತಿರುಗೇಟು ನೀಡಿದ ಅಣ್ಣ ರಮೇಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ. ಸತೀಶ ಜಾರಕಿಹೊಳಿ ತಲೆ ಸರಿಯಿಲ್ಲ. ಆತನನ್ನು ಧಾರವಾಡಕ್ಕೆ ಕಳಿಸಬೇಕು ಎಂದರು.
ಕೆಲ ಮಾಧ್ಯಮಗಳು ದುಡ್ಡು ಪಡೆದು ನನ್ನ ಹೆಸರು ಕೆಡಿಸುತ್ತಿದ್ದಾರೆ. ಈ ಬಗ್ಗೆ ನನಗೆ ಸಂಶಯ ಇದೆ. ಉತ್ತರ ಭಾರತದ ದೇವಸ್ಥಾನಕ್ಕೆ ಹೋದಾಗ ನಾನು ಮೋಜು ಮಾಡುತ್ತಿದ್ದೇನೆ ಎಂಬ ಸುದ್ದಿ ಬಂದಿವೆ. ನಾನು ಚಿಕ್ಕವನಾಗಿದ್ದಾಗಿನಿಂದಲೂ ದೇವಸ್ಥಾನಕ್ಕೆ ಹೋಗುತ್ತಿದ್ದೇನೆ. 14 ಬಾರಿ ಉತ್ತರ ಭಾರತದ ದೇವಸ್ಥಾನಗಳಿಗೆ ಹೋಗಿ ಬಂದಿದ್ದೇನೆ. ಈ ಬಗ್ಗೆ ಕ್ಷೇತ್ರದ ಜನರಿಗೆ ಮನವರಿಕೆ ಮಾಡಲು ನಾನು ನಾಳೆ ಸಮಾವೇಶ ಮಾಡುತ್ತಿದ್ದೇನೆ. ನಾಳೆ ನಾನು ನಮ್ಮ ಕಾರ್ಯಕರ್ತರನ್ನ ಸೇರಿಸಿ ಉತ್ತರ ಹೇಳುತ್ತೇನೆ ಎಂದರು.
ಇನ್ನು, ಡಿಕೆಶಿ ನನ್ನ ಉತ್ತಮ ಗೆಳೆಯ. ಅವನ ಕಷ್ಟ ಕಾಲದಲ್ಲಿ ನಾನು ಇರುತ್ತೇನೆ. ದೆಹಲಿಗೆ ಹೋದ ಬಳಿಕ ಡಿ ಕೆ ಶಿವಕುಮಾರ್ ಭೇಟಿ ಮಾಡುತ್ತೇನೆ. ರಾಜಕೀಯ ಬೇರೆ, ವೈಯಕ್ತಿಕ ಸಂಬಂಧ ಬೇರೆ. ಮೊನ್ನೆ ಭೇಟಿಗೆ ಹೋಗಿದ್ದೆ, ಅವರ ಭೇಟಿಗೆ ಸಾಧ್ಯವಾಗಲಿಲ್ಲ. ದೆಹಲಿಗೆ ಹೋಗಿ ಭೇಟಿ ಮಾಡಲು ಪ್ರಯತ್ನಿಸುವೆ ಎಂದರು.