ಬೆಳಗಾವಿ: ಪೀರನವಾಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ಪ್ರತಿಷ್ಠಾಪಿಸಿದ ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ಶೀಮಾ ಲಾಟ್ಕರ್ ಕನ್ನಡಪರ ಸಂಘಟನೆ ಕಾರ್ಯಕರ್ತರು ಮತ್ತು ರಾಯಣ್ಣ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿ ವಾಪಸ್ ಕಳುಹಿಸಿದರು.
ವಿವಾದಿತ ಸ್ಥಳದಲ್ಲಿದ್ದ ರಾಯಣ್ಣ ಅಭಿಮಾನಿಗಳನ್ನು ಹಾಗೂ ಎಂಇಎಸ್ ಕಾರ್ಯಕರ್ತರನ್ನು ಸ್ಥಳದಿಂದ ಹೊರ ಹೋಗುವಂತೆ ಡಿಸಿಪಿ ಖಡಕ್ ಎಚ್ಚರಿಕೆ ನೀಡಿದರು. ಡಿಸಿಪಿ ಸೂಚನೆ ಮೇರೆಗೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸ್ಥಳದಿಂದ ತೆರಳಿದರು. ಈ ವೇಳೆ ಸ್ಥಳೀಯ ಮರಾಠಿ ಭಾಷಿಕ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಡಿಸಿಪಿ, ಇಂದು ಅಥವಾ ನಾಳೆ ಪುತ್ಥಳಿ ಪ್ರತಿಷ್ಠಾಪನೆ ಆಗುತ್ತಿತ್ತು. ನೀವು ಯಾಕೆ ವಿವಾದ ಮಾಡಿದ್ರಿ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಮಧ್ಯರಾತ್ರಿಯೇ ರಾಯಣ್ಣನ ಪ್ರತಿಮೆ ಮರು ಪ್ರತಿಷ್ಠಾಪನೆ: ಪೀರನವಾಡಿಯಲ್ಲಿ ಬಿಗುವಿನ ಸ್ಥಿತಿ
ಬಳಿಕ ಪೊಲೀಸರಿಗೆ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ಜನರು ಜಮಾವಣೆಗೊಳ್ಳದಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಿದರು.