ETV Bharat / state

ಬೆಳಗಾವಿಯಲ್ಲಿ ಸಂಕ್ರಾಂತಿ ಸಡಗರ: ಗಂಗಾಂಬಿಕೆ ಐಕ್ಯಸ್ಥಳ ಕಣ್ತುಂಬಿಕೊಂಡ ಜನತೆ

ಬೆಳಗಾವಿಯಲ್ಲಿ ಸೋಮವಾರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದ್ದು, ಬಸವೇಶ್ವರರ ಧರ್ಮಪತ್ನಿ ಗಂಗಾಂಬಿಕೆಯ ಐಕ್ಯಸ್ಥಳಕ್ಕೆ ಭಕ್ತರ ದಂಡು ಹರಿದು ಬಂದಿತ್ತು.

sankranthi
ಸಂಕ್ರಾಂತಿ
author img

By ETV Bharat Karnataka Team

Published : Jan 16, 2024, 8:40 AM IST

Updated : Jan 16, 2024, 2:08 PM IST

ಬೆಳಗಾವಿಯಲ್ಲಿ ಸಂಕ್ರಾಂತಿ ಸಡಗರ

ಬೆಳಗಾವಿ: ಜಿಲ್ಲೆಯಾದ್ಯಂತ ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಸಡಗರದಿಂದ ಆಚರಿಸಲಾಯಿತು. ನದಿ, ಜಲಪಾತಗಳಿರುವ ಸ್ಥಳಗಳಿಗೆ ತೆರಳಿದ ಜನರು ಪುಣ್ಯಸ್ನಾನ ಮಾಡಿದರು.

ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಬಳಿಯ ಮಲಪ್ರಭಾ ನದಿ ದಂಡೆಯ ಮೇಲಿರುವ ಜಗಜ್ಯೋತಿ ಬಸವೇಶ್ವರರ ಧರ್ಮಪತ್ನಿ ಗಂಗಾಂಬಿಕೆಯ ಐಕ್ಯಸ್ಥಳಕ್ಕೆ ಜನಸಾಗರವೇ ಹರಿದು ಬಂದಿತ್ತು. ಚಕ್ಕಡಿ, ಟ್ರ್ಯಾಕ್ಟರ್​​​ ಸೇರಿದಂತೆ ಇನ್ನಿತರ ವಾಹನಗಳಲ್ಲಿ ಕುಟುಂಬಸಮೇತ ಆಗಮಿಸಿದ್ದ ಜನ ಗಂಗಾಂಬಿಕೆಯ ಸಮಾಧಿ ಸ್ಥಳದ ದರ್ಶನ ಪಡೆದರು. ಬಳಿಕ ಮನೆಯಿಂದ ಕಟ್ಟಿಕೊಂಡು ಬಂದಿದ್ದ ಸಜ್ಜೆ ರೊಟ್ಟಿ, ಮಾದಲಿ ಸಿಹಿ ಪದಾರ್ಥ, ನಾನಾ ತರಹದ ಪಲ್ಯಗಳು, ಅನ್ನ, ಚಟ್ನಿ, ಮೊಸರು ಸೇರಿದಂತೆ ವಿಶೇಷ ಊಟ ಮಾಡಿ ಖುಷಿಪಟ್ಟರು.

ಗಂಗಾಂಬಿಕಾ ಮುಕ್ತಿ ಕ್ಷೇತ್ರದ ಟ್ರಸ್ಟ್​ ಅಧ್ಯಕ್ಷ ಗಂಗಾಧರ ಕೋಟಗಿ ಮಾತನಾಡಿ, "ಧರ್ಮಗುರು ಬಸವಣ್ಣನವರ ಧರ್ಮಪತ್ನಿ ಗಂಗಾಂಬಿಕೆಯವರ ಐಕ್ಯಸ್ಥಳ ಪ್ರಮುಖ ಧಾರ್ಮಿಕ ಸ್ಥಳವಾಗಿದ್ದು, ಸಂಕ್ರಾಂತಿ ದಿನ ಜಿಲ್ಲೆಯ ವಿವಿಧ ತಾಲೂಕುಗಳ ಅಪಾರ ಭಕ್ತರು ಆಗಮಿಸುತ್ತಾರೆ. ನದಿಯಲ್ಲಿ ಸ್ನಾನ ಮಾಡುತ್ತಾರೆ. ಮನೆಯಿಂದ ತಂದಿರುವ ಊಟವನ್ನು ಎಲ್ಲರೂ ಕೂಡಿ ಮಾಡುವುದನ್ನು ನೋಡುವುದೇ ಚಂದ" ಎಂದರು.

ಸ್ಥಳೀಯ ಯುವ ಮುಖಂಡ ಸಂತೋಷ ಸಂಬನ್ನವರ ಪ್ರತಿಕ್ರಿಯಿಸಿ, "ಗಂಗಾಂಬಿಕೆಯ ಐಕ್ಯಸ್ಥಳದಲ್ಲಿ ಭಕ್ತರಿಗೆ ಸ್ನಾನ ಮಾಡಲು, ಬಟ್ಟೆ ಬದಲಾಯಿಸಲು ಕೊಠಡಿಗಳ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರು ಸೇರಿ ಮತ್ತಷ್ಟು‌ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರೆ ಅನುಕೂಲ‌ವಾಗುತ್ತದೆ. ಸ್ಥಳೀಯವಾಗಿ ಅಭಿವೃದ್ಧಿಯಾಗಬೇಕಿತ್ತು. ಹೇಗೇ ಕೂಡಲ ಸಂಗಮಕ್ಕೆ ಜನರು ಭೇಟಿ ಕೊಡುತ್ತಾರೆ, ಅಷ್ಟೆ ಮಂದಿ ಗಂಗಾಬಿಕೆ ದೇವಾಲಯಕ್ಕೂ ಆಗಮಿಸುತ್ತಾರೆ. ಹಾಗಾಗೀ ಇನ್ನೂ ಇಲ್ಲಿ ಮೂಲ ವ್ಯವಸ್ಥೆಗಳನ್ನು ಮಾಡಬೇಕು" ಎಂದು ಅಭಿಪ್ರಾಯ ಪಟ್ಟರು.

ಇದನ್ನೂ ಓದಿ: ದಾವಣಗೆರೆ: ಸರಳವಾಗಿ ನೆರವೇರಿದ ಹರ ಜಾತ್ರಾ ಮಹೋತ್ಸವ

Last Updated : Jan 16, 2024, 2:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.