ETV Bharat / state

ಮಹಿಳೆಯೊಂದಿಗೆ ಅಸಭ್ಯ ವರ್ತನೆ ಆರೋಪ: ಸಂಕೇಶ್ವರ ಪಿಎಸ್ಐ ಅಮಾನತು - ಪಿಎಸ್​ಐ ಅಮಾನತು

ಕರ್ತವ್ಯ ಲೋಪ, ಅಶಿಸ್ತು ಹಾಗೂ ದುರ್ನಡತೆ ಆರೋಪಗಳ ಹಿನ್ನೆಲೆಯಲ್ಲಿ ಸಂಕೇಶ್ವರ ಪೊಲೀಸ್​ ಠಾಣೆಯ ಪಿಎಸ್​ಐ ಅಮಾನತುಗೊಂಡಿದ್ದಾರೆ.

ಸಂಕೇಶ್ವರ ಪಿಎಸ್ಐ ಅಮಾನತು
ಸಂಕೇಶ್ವರ ಪಿಎಸ್ಐ ಅಮಾನತು
author img

By ETV Bharat Karnataka Team

Published : Dec 25, 2023, 4:51 PM IST

Updated : Dec 25, 2023, 6:00 PM IST

ಅಮಾನತು ಬಗ್ಗೆ ಪಿಎಸ್​ಐ ಹೇಳಿಕೆ

ಚಿಕ್ಕೋಡಿ: ಮಹಿಳೆಯೋರ್ವರಿಗೆ ಕಿರುಕುಳ ನೀಡಿದ ಆರೋಪದಡಿ ನೀಡಲಾದ ದೂರಿನ ಮೇರೆಗೆ ಸಂಕೇಶ್ವರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ (ಪಿಎಸ್‌ಐ) ನರಸಿಂಹರಾಜು ಜೆ.ಡಿ. ಅವರನ್ನು ಅಮಾನತು ಮಾಡಿ ಬೆಳಗಾವಿ ಜಿಲ್ಲಾ ಎಸ್‌ಪಿ ಭೀಮಾಶಂಕರ ಗುಳೇದ್ ಆದೇಶ ಹೊರಡಿಸಿದ್ದಾರೆ. ನರಸಿಂಹರಾಜು ವಿರುದ್ಧ ಕರ್ತವ್ಯ ಲೋಪ, ಅಶಿಸ್ತು ಹಾಗೂ ದುರ್ನಡತೆಯ ಆರೋಪಗಳಿವೆ.

ಸಂಕೇಶ್ವರ ಪಟ್ಟಣದಲ್ಲಿ ಇಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ನರಸಿಂಹರಾಜು, "ನನ್ನ ವಿರುದ್ಧ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನಾನು ಮಾಧ್ಯಮಗಳ ಮುಂದೆ ಬಂದಿದ್ದೇನೆ. ಆರೋಪ ಮಾಡಿದ ಮಹಿಳೆ ನಾಲ್ಕು ತಿಂಗಳ ಹಿಂದೆ ಅಕ್ಕಪಕ್ಕದವರ ಜಗಳ ಸಂಬಂಧ ದೂರು ನೀಡಿದ್ದರು. ಈ ವೇಳೆ ಆಕೆಯ ಫೋನ್ ನಂಬರ್ ಪಡೆದು ನನ್ನ ಫೋನ್ ನಂಬರ್ ನೀಡಿದ್ದೆ. ತನ್ನ ಮಗನಿಗೆ ಹೃದಯಸಂಬಂಧಿ ಕಾಯಿಲೆ ಇದೆ ಎಂದು ಸಹಾಯಕ್ಕೆ ಮನವಿ ಮಾಡಿದ್ದರು. ಮಹಿಳೆಗೆ ಸಣ್ಣಪುಟ್ಟ ಹಣದ ಸಹಾಯ ಮಾಡಿದ್ದೆ. ಗೂಗಲ್ ಪೇ ಮಾಡಿ ಹಣ ನೀಡಿದ್ದೆ. ಹುಕ್ಕೇರಿಯಲ್ಲಿ ಚಿನ್ನಾಭರಣ ಖರೀದಿಗೆ ಹಣ ಬೇಕು ವಾಪಸ್ ಕೊಡ್ತೀನಿ ಎಂದು ಪಡೆದಿದ್ದರು. ಈ ಪ್ರಕರಣದಲ್ಲಿ ನಮ್ಮ ಪೊಲೀಸ್ ಸಿಪಿಐ ಹಾಗೂ ಕೆಲವು ಸಿಬ್ಬಂದಿಯ ಷಡ್ಯಂತ್ರವಿದೆ. ಇದೇ ಕಾರಣಕ್ಕೆ ಆ ಮಹಿಳೆ ನನ್ನ ವಿರುದ್ಧ ದೂರು ಕೊಟ್ಟಿದ್ದಾರೆ. ಮಹಿಳೆ ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟಿಲ್ಲ. ಸಿಪಿಐ ಶಿವಶರಣ ಹಾಗೂ ಸಿಬ್ಬಂದಿ ಆಕೆಯ ಮನೆಗೆ ಹೋಗಿ ದೂರು ಬರೆಸಿಕೊಂಡು ನೇರವಾಗಿ ಎಸ್ಪಿಗೆ ಕಳುಹಿಸಿಕೊಟ್ಟಿದ್ದಾರೆ. ಯಾವುದೇ ವಿಚಾರವಿಲ್ಲದೆ ಎಸ್‌ಪಿ ಅವ್ರು ನನ್ನನ್ನು ಅಮಾನತು ಮಾಡಿದ್ದಾರೆ. ಮೇಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಇಬ್ಬರನ್ನು ವಿಚಾರಣೆ ಮಾಡಿ ನನ್ನನ್ನು ಅಮಾನತು ಮಾಡಬೇಕಾಗಿತ್ತು. ಏಕಾಏಕಿ ಅಮಾನತು ಮಾಡಿ ಆದೇಶ ಮಾಡಿದ್ದು, ನಾನು ನೋವು ಅನುಭವಿಸುತ್ತಿದ್ದೇನೆ."

"ಡಿ.19ರ ರಾತ್ರಿ ಸಂಕೇಶ್ವರ ಸಿಪಿಐ ಶಿವಶರಣ ಆ ಮಹಿಳೆಯ ಬಳಿ ನನ್ನ ವಿರುದ್ದ ಅರ್ಜಿ ಪಡೆದಿದ್ದಾರೆ. ಅರ್ಜಿ ಪಡೆದ ಒಂದೇ ದಿನಕ್ಕೆ ಎಸ್‌ಪಿ ಸಾಹೇಬ್ರು ಅಮಾನತು ಮಾಡಿದ್ದಾರೆ. ಮಹಿಳೆ, ಸಿಪಿಐ, ಕೆಲವು ಪೊಲೀಸ್ ಸಿಬ್ಬಂದಿ ಸೇರಿ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ."

ಸಿಪಿಐ ಮತ್ತು ನನ್ನ ನಡುವೆ ವೈಮನಸ್ಸಿತ್ತು: "ಸಂಕೇಶ್ವರ ಠಾಣೆಯ ಕೊಠಡಿ ನವೀಕರಣ ವಿಚಾರದಲ್ಲಿ ಸಿಪಿಐ ಮತ್ತು ನನ್ನ ನಡುವೆ ವೈಮನಸ್ಸು ಇತ್ತು. ಖಾಸಗಿ ಕಾರ್ಖಾನೆಯವರು ಸಿಬ್ಬಂದಿ ಉಪಯೋಗಕ್ಕೆ ಲ್ಯಾಪ್​ಟಾಪ್ ಸೇರಿ ಇತರೆ ಉಪಕರಣ ಖರೀದಿಗೆ 3 ಲಕ್ಷ ರೂ ನೀಡಿದ್ದರು. ಸಿಪಿಐ ಶಿವಶರಣ ಮೂರು ಲಕ್ಷ ರೂ ವೆಚ್ಚದಲ್ಲಿ ತಮ್ಮ ಛೇಂಬರ್ ನವೀಕರಣ ಮಾಡಿ ಎಸಿ ಹಾಕಿಸಿಕೊಂಡರು. ಇದೇ ಕಾರಣಕ್ಕಾಗಿ ಸಿಪಿಐ ಹಾಗೂ ನಮ್ಮ ಮಧ್ಯೆ ವೈಮನಸ್ಸು ಬಂತು. ಈ ಉದ್ದೇಶಕ್ಕಾಗಿ ಮಹಿಳೆಯಿಂದ ದೂರು ಪಡೆದು ಅಮಾನತು ಮಾಡಿಸಿದ್ದಾರೆ" ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಎಣ್ಣೆ ಪಾರ್ಟಿ ಮಾಡಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು: ಬೆಳಗಾವಿ ಎಸ್ಪಿ ಆದೇಶ

Last Updated : Dec 25, 2023, 6:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.