ETV Bharat / state

ಎಸ್​ಎಸ್ಎಲ್​ಸಿ ಪರೀಕ್ಷೆಯಲ್ಲಿ 623 ಅಂಕ ಪಡೆದ ವಿದ್ಯಾರ್ಥಿನಿಗೆ ಚಿಕ್ಕೋಡಿ ಡಿಡಿಪಿಐ ಸತ್ಕಾರ

author img

By

Published : Aug 10, 2020, 8:40 PM IST

Updated : Aug 10, 2020, 10:56 PM IST

'ನನ್ನ ಸಾಧನೆ ಬಹಳ ಖುಷಿ ತಂದಿದೆ. ಇದಕ್ಕೆ ನನ್ನ ಕುಟುಂಬ ಹಾಗೂ ಶಾಲೆಯ ಶಿಕ್ಷಕರ ಬೆಂಬಲ ಮಾರ್ಗದರ್ಶನ ‌ಕಾರಣ. ಮುಂದೆ ಒಳ್ಳೆಯ ಶಿಕ್ಷಣ ಪಡೆದು ವೈದ್ಯಳಾಗಬೇಕೆಂಬ ಇಚ್ಛೆಯಿದೆ'- ಸಹನಾ

ಚಿಕ್ಕೋಡಿ
ಚಿಕ್ಕೋಡಿ

ಚಿಕ್ಕೋಡಿ: ಇಂದು SSLC ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸಹನಾ ಶಂಕರ ಕಾಮಗೌಡರ 625ಕ್ಕೆ 623 ಅಂಕ ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದದ್ದಾಳೆ.

ಇಲ್ಲಿನ ಎಂ.ಕೆ. ಕವಟಗಿಮಠ ಕನ್ನಡ ಶಾಲೆಯ ವಿದ್ಯಾರ್ಥಿ ಸಹನಾ‌ ಕಾಮಗೌಡರ ಉತ್ತಮ ಸಾಧನೆಗೆ ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ತಮ್ಮ ಕಚೇರಿಯಲ್ಲಿ ಸಹನಾಗೆ ಶಾಲು ಹೊದಿಸಿ, ಸಿಹಿ ತಿನ್ನಿಸಿ ಸನ್ಮಾನಿಸಿದರು.

ಬಳಿಕ ಮಾತನಾಡಿದ ಅವರು, ಕನ್ನಡ ಮಾಧ್ಯಮ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಸಹನಾ ನಮ್ಮ ಜಿಲ್ಲೆಗೆ ಹೆಸರು ತಂದಿದ್ದಾರೆ. ಭವಿಷ್ಯದಲ್ಲೂ ಒಳ್ಳೆಯ ಕೀರ್ತಿ ಸಂಪಾದಿಸಿ ದೇಶದ ಉತ್ತಮ ನಾಗರಿಕಳಾಗಿ ಹೊರ ಹೊಮ್ಮುವಂತೆ ಶುಭ ಕೋರಿದ್ದಾರೆ.

ವಿದ್ಯಾರ್ಥಿನಿಗೆ ಅಭಿನಂದಿಸಿದ ಡಿಡಿಪಿಐ

ವಿದ್ಯಾರ್ಥಿನಿ ಸಹನಾ ಮಾತನಾಡಿ, ನನ್ನ ಸಾಧನೆ ಬಹಳ ಖುಷಿ ತಂದಿದೆ. ಇದಕ್ಕೆ ನನ್ನ ಕುಟುಂಬ ಹಾಗೂ ಶಾಲೆಯ ಶಿಕ್ಷಕರ ಬೆಂಬಲ ಮಾರ್ಗದರ್ಶನ ‌ಕಾರಣ. ಮುಂದೆ ಒಳ್ಳೆಯ ಶಿಕ್ಷಣ ಪಡೆದು ವೈದ್ಯಳಾಗುತ್ತೇನೆ ಎಂದು ತಿಳಿಸಿದಳು.

Last Updated : Aug 10, 2020, 10:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.