ETV Bharat / state

ಮಹಾರಾಷ್ಟ್ರದಲ್ಲಿ ಕೊರೊನಾ ಸ್ಫೋಟ: ರಾಜ್ಯ ಸಂಪರ್ಕದ ರಸ್ತೆಗಳಿಗೆ ಮಣ್ಣು, ಮುಳ್ಳು ಹಾಕಿ ಸಂಚಾರ ನಿಷೇಧ - Roads close in Belgaum district

ಮಹಾರಾಷ್ಟ್ರದಲ್ಲಿ ಕೊರೊನಾ ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಅಡ್ಡಲಾಗಿ ಮಣ್ಣು ಹಾಕಿ ಸಂಚಾರಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

Roads close in Belgaum district
ನೆರೆಯ ರಾಜ್ಯಕ್ಕೆ ಸಂಪರ್ಕಕಲ್ಪಿಸುವ ರಸ್ತೆಗಳು ಬಂದ್​
author img

By

Published : Mar 25, 2021, 9:10 PM IST

ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಆ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಮಣ್ಣು, ಮುಳ್ಳು ಹಾಕಿ ಅಧಿಕಾರಿಗಳು ಬಂದ್ ಮಾಡಿದ್ದಾರೆ.

ಚಿಕ್ಕೋಡಿ, ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿ ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಯಕ್ಸಂಬಾ - ದಾನವಾಡ, ಯಕ್ಸಂಬಾ - ದತ್ತವಾಡ, ಮಲಿಕವಾಡ -ದತ್ತವಾಡ ಹಾಗೂ ಸದಲಗಾ - ದತ್ತವಾಡ ರಸ್ತೆಗಳಲ್ಲಿ ಸಂಚಾರ ನಿಷೇಧಿಸಲಾಗಿದೆ.

ಪ್ರಯಾಣಿಕರು ಕುಗನೊಳ್ಳಿ ಚೆಕ್​ಪೋಸ್ಟ್ ಹಾಗೂ ಕಾಗವಾಡ ಚೆಕ್​ಪೋಸ್ಟ್ ದಾರಿಯಿಂದಲೇ ಬರುವಂತೆ ಸೂಚನೆ ನೀಡಲಾಗಿದೆ. ಆರ್​ಟಿ-ಪಿಸಿಆರ್ ನೆಗೆಟಿವ್‌ ಟೆಸ್ಟ್ ರಿಪೋರ್ಟ್ ಇದ್ದರೆ ಮಾತ್ರ ಕಾಗವಾಡ ಹಾಗೂ ಕೊಗನೊಳ್ಳಿ ಟೋಲ್​ಗಳ ಮೂಲಕ ರಾಜ್ಯ ಪ್ರವೇಶಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.