ಅಥಣಿ: ತಾಲೂಕಿನಲ್ಲಿ 31 ನೇ ರಸ್ತೆ ಸುರಕ್ಷತಾ 2020 ಸಾರ್ವಜನಿಕ ಸಂಚಾರಿ ನಿಯಮ ಅರಿವು ಮೂಡಿಸಲಾಯಿತು. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಪೊಲೀಸರಿಂದ ರಸ್ತೆ ಸಂಚಾರ ನಿಯಮಗಳ ಜಾಗೃತಿ ಕಾರ್ಯಕ್ರಮ ನಡೆಯಿತು.
ಪ್ರತಿವರ್ಷದಂತೆ ಈ ಬಾರಿಯೂ ಅಥಣಿ ಪೊಲೀಸ್ ಠಾಣೆಯ ಮುಖಾಂತರ ರಸ್ತೆ ಸಂಚಾರ ಮಾಹಿತಿಯನ್ನು ಸವಾರರಿಗೆ ನಿಯಮದ ಬಗ್ಗೆ ಪೋಲಿಸ್ ಠಾಣೆಯ ಹಿರಿಯ ಅಧಿಕಾರಿಗಳಿಂದ ಸವಾರರಿಗೆ ಹೂ ಗುಚ್ಛ ನೀಡಿ ಅರಿವು ಮೂಡಿಸುವ ಜಾಗೃತಿ ಜಾಥಾ ನಡೆಯಿತು.
ಪ್ರಮುಖವಾಗಿ ಹೊಸ ಮೋಟಾರು ವಾಹನ ಕಾಯ್ದೆ, ದಂಡ ಹಾಗೂ ಬೈಕ್ ಸವಾರರು ತಲೆ ರಕ್ಷಕ ಕವಚ ಧರಿಸಬೇಕು, ಸಿಟ್ ಬೆಲ್ಟ್, ಮತ್ತು ಸಂಬಂಧ ಪಟ್ಟ ದಾಖಲೆಗಳನ್ನು ಇಟ್ಟುಕೊಂಡು ಯಾವುದೇ ರೀತಿಯಲ್ಲಿ ಪೊಲೀಸರಿಗೆ ಭಯ ಪಡದೆ ಸಂಚಾರ ಮಾಡಿ ಎಂದು ಜಾಗೃತಿ ಜಾಥಾದ ಮೂಲ ಉದ್ದೇಶವಾಗಿದ್ದು ಕಂಡು ಬಂತು.
ಇವತ್ತು ಲಾಟಿ ಹಿಡಿದು ಸಿಟಿ ಸಿವಿಲ್ ಹಾಕುತಿದ್ದ ಪೊಲೀಸರು ಹು ಗುಚ್ಛ ಹಿಡಿದುಕೊಂಡು ಅಂಬೇಡ್ಕರ್ ವೃತ್ತದ ಜನಸ್ನೇಹಿಯಾಗಿರುವುದು ಕಂಡು ಅಥಣಿ ಸಾರ್ವಜನಿಕರು ಉತ್ಸಾಹದಿಂದ ರಸ್ತೆ ಸಂಚಾರ ಮಾಹಿತಿ ಪಡೆದುಕೊಂಡರು.