ಚಿಕ್ಕೋಡಿ (ಬೆಳಗಾವಿ): ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಬೆಳಗಾವಿ ಉಪವಿಭಾಗದಲ್ಲಿ ಸಂಪೂರ್ಣವಾಗಿ ಮಳೆ ಕಡಿಮೆಯಾಗಿದ್ದು, ಕೊಯ್ನಾ - 02 ಮಿ.ಮೀ, ನವಜಾ - 02 ಮಿ.ಮೀ, ವಾರಣಾ -12 ಮಿ.ಮೀ, ಕಾಳಮ್ಮವಾಡಿ -33 ಮಿ.ಮೀ, ರಾಧಾನಗರಿ - 3 ಮಿ.ಮೀ, ಪಾಟಗಾಂವ - 10ಮಿ.ಮೀ ಮಳೆಯಾಗಿದೆ.
ಇನ್ನು ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳಹರಿವಿನಲ್ಲೂ ಇಳಿಮುಖವಾಗಿದೆ. 38,000 ಕ್ಯೂಸೆಕ್‌ಕ್ಕಿಂತ ಹೆಚ್ಚು ಕೃಷ್ಣಾ ನದಿ ಒಳ ಹರಿವು ಇದೆ. ಮಹಾರಾಷ್ಟ್ರದ ರಾಜಾಪೂರ ಬ್ಯಾರೆಜ್‌ನಿಂದ 34,503 ಕ್ಯೂಸೆಕ್ ನೀರು, ದೂಧಗಂಗಾ ನದಿಯಿಂದ 4,400 ಕ್ಯೂಸೆಕ್ ನೀರು ಹೀಗೆ ಒಟ್ಟು 38,000 ಕ್ಯೂಸೆಕ್ಗೂ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ.
ಸದ್ಯ ಕೊಯ್ನಾ ಜಲಾಶಯ, ವಾರಣಾ, ರಾಧಾನಗರಿ, ಕಣೇರ ಜಲಾಶಯ ಶೇ.97ರಷ್ಟು ತುಂಬಿದೆ. ಧೂಮ ಜಲಾಶಯ ಶೇ. 98ರಷ್ಟು, ಪಾಟಗಾಂವ ಶೇ.100ರಷ್ಟು. ಧೂದಗಂಗಾ ಶೇ, 99ರಷ್ಟು ತುಂಬಿದೆ. ಇನ್ನು ಹಿಪ್ಪರಗಿ ಬ್ಯಾರೆಜ್‌ನಿಂದ 39,000 ಹಾಗೂ ಆಲಮಟ್ಟಿ ಜಲಾಶಯದಿಂದ 48,922 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.