ಚಿಕ್ಕೋಡಿ: ಜೀವ ಬೆದರಿಕೆಯೊಡ್ಡಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ನಡೆದಿದೆ.
ನಿಪ್ಪಾಣಿ ಪಟ್ಟಣದ ಬೌದ್ದನಗರದ ನಿವಾಸಿ ಅಕ್ಷಯ್ ಮಹಾದೇವ ಸಾಳುಂಕೆ (29) ಅತ್ಯಾಚಾರವೆಸಗಿದ ಕಾಮುಕ. ಬಟ್ಟೆ ತೊಳೆಯಲು ಹೋಗಿದ್ದ ಬಾಲಕಿಯನ್ನು ಬೆದರಿಸಿ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಮನೆಗೆ ಬಂದು ಪೋಷಕರ ಮುಂದೆ ಅಳಲು ತೋಡಿಕೊಂಡಾಗ ಪೋಷಕರ ದೂರು ನೀಡಿದ್ದಾರೆ. ದೂರಿನ ಅನ್ವಯ ಪೋಕ್ಸೋ ಖಾಯ್ದೆಯಡಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ನಿಪ್ಪಾಣಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.